ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್
ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಎಂದು ಯೋಚಿಸದೇ ಮಗಳು ಮಾನ್ಯಗಳನ್ನ ಕೊಚ್ಚಿ ಕೊಂದಿದ್ದಾನೆ. ಅಂತರ್ಜಾತಿಯಾಗಿದ್ದರೂ ಸಹ ಮಾನ್ಯಳ ಪತಿ ವಿವೇಕಾನಂದ ಕುಟುಂಬದವರು ಚೆನ್ನಾಗಿ ನೋಡಿಕೊಂಡಿದ್ದರು. ಇದೀಗ ಮಾನ್ಯಗಳನ್ನ ಕಳೆದುಕೊಂಡು ಪತಿ ವಿವೇಕಾನಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ. ಇದರ ನಡುವೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿವೇಕಾನಂದನ ತಾಯಿ ಸಹ ಜೀವನರ್ಮರಣದ ಮಧ್ಯೆ ಹೋರಾಟ ನಡೆಸಿದ್ದು. ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಕಂಗಾಲಾಗಿದೆ. ಈ ಬಗ್ಗೆ ವಿವೇಕಾನಂದ ಕಣ್ಣೀರಿಡುತ್ತಲೇ ನೋವು ಹಂಚಿಕೊಂಡಿದ್ದಾನೆ.
ಹುಬ್ಬಳ್ಳಿ, (ಡಿಸೆಂಬರ್ 23): ಹುಬ್ಬಳ್ಳಿಯಲ್ಲಿ (Hubballi) ಪ್ರೀತಿಸಿ ಅಂತರ್ಜಾತಿ ಯುವಕನ ಜೊತೆ ವಿವಾಹವಾಗಿದ್ದ ಮಗಳನ್ನೇ ತಂದೆಯೇ ಬರ್ಬರ ಕೊಲೆ (Hubballi Honor Killing) ಮಾಡಿದ್ದ ಪ್ರಕರಣ ಬೆಚ್ಚಿಬೀಳಿಸಿದೆ. ವಿರೋಧದ ನಡುವೆಯೂ ದಲಿತ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಕೆರಳಿದ್ದ ತಂದೆ, ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಎಂದು ಯೋಚಿಸದೇ ಮಗಳು ಮಾನ್ಯಗಳನ್ನ ಕೊಚ್ಚಿ ಕೊಂದಿದ್ದಾನೆ. ಅಂತರ್ಜಾತಿಯಾಗಿದ್ದರೂ ಸಹ ಮಾನ್ಯಳ ಪತಿ ವಿವೇಕಾನಂದ ಕುಟುಂಬದವರು ಚೆನ್ನಾಗಿ ನೋಡಿಕೊಂಡಿದ್ದರು. ಆದರೂ ಸಹ ತಂದೆ ಮಗಳನ್ನು ಬಲಿ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರೀತಿ ಮುಂದೆ ಜಾತಿ ಗೆದ್ದಿದೆ.
ಇದನ್ನೂ ನೋಡಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಕೊನೆ ಸಲ ಮಗಳ ಮುಖ ನೋಡಲು ಬಾರದ ಪೋಷಕರು, ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ
ಇದೀಗ ಮಾನ್ಯಗಳ ಜೊತೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನೂ ಕಳೆದುಕೊಂಡು ಪತಿ ವಿವೇಕಾನಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ. ಇನ್ನೊಂದೆಡೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿವೇಕಾನಂದನ ತಾಯಿ ಸಹ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದು. ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಕಂಗಾಲಾಗಿದೆ. ಈ ಬಗ್ಗೆ ವಿವೇಕಾನಂದ ಕಣ್ಣೀರಿಡುತ್ತಲೇ ನೋವು ಹಂಚಿಕೊಂಡಿದ್ದಾನೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
