ನಿಮಗಾಗಿ ನಾನು ಸಾಯುತ್ತೇನೆ! ಭಾರಿ ವೈರಲ್​​ ಆಗುತ್ತಿದೆ ಸಂಸದೆಯ ಅಬ್ಬರದ ಭಾಷಣದ ವಿಡಿಯೋ

|

Updated on: Jan 05, 2024 | 4:43 PM

ನ್ಯೂಜಿಲೆಂಡ್‌ನ ಸಂಸತ್ ಸದಸ್ಯರೊಬ್ಬರು ಮಾಡಿದ ಅಬ್ಬರದ ಭಾಷಣ ನೋಡಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಅಯ್ಯೋ ಇದು ಯಾವ ರೀತಿಯ ಭಾಷಣ ಎಂದು ಅನಿಸಿರಬಹುದು. ಆದರೆ ಇದು ಮಾವೋರಿ ಸಮುದಾಯದ ಮಾತೃ ಭಾಷೆಯಂತೆ. ಇದೀಗ ಈ ಭಾಷಣದ ತುಣುಕು ಎಲ್ಲ ಕಡೆ ವೈರಲ್​​​ ಆಗಿದೆ.

ನಿಮಗಾಗಿ ನಾನು ಸಾಯುತ್ತೇನೆ! ಭಾರಿ ವೈರಲ್​​ ಆಗುತ್ತಿದೆ ಸಂಸದೆಯ ಅಬ್ಬರದ ಭಾಷಣದ ವಿಡಿಯೋ
Follow us on

ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ ಈ ವಿಡಿಯೋ. ನ್ಯೂಜಿಲೆಂಡ್‌ನ ಸಂಸತ್ ಸದಸ್ಯರೊಬ್ಬರು ಮಾಡಿದ ಅಬ್ಬರದ ಭಾಷಣ ನೋಡಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಅಯ್ಯೋ ಇದು ಯಾವ ರೀತಿಯ ಭಾಷಣ ಎಂದು ಅನಿಸಿರಬಹುದು. ಆದರೆ ಇದು ಮಾವೋರಿ ಸಮುದಾಯದ ಮಾತೃ ಭಾಷೆಯಂತೆ. ಇದೀಗ ಈ ಭಾಷಣದ ತುಣುಕು ಎಲ್ಲ ಕಡೆ ವೈರಲ್​​​ ಆಗಿದೆ. 21 ವರ್ಷ ವಯಸ್ಸಿನ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಅವರ ಈ ಭಾಷಣ ಎಲ್ಲರ ಗಮನ ಸೆಳೆದಿದೆ.

ಈಕೆ ನ್ಯೂಜಿಲೆಂಡ್‌ ದೇಶದ ಅತ್ಯಂತ ಕಿರಿಯ ಸಂಸದೆ, ನ್ಯೂಜಿಲೆಂಡ್‌ನ ಸ್ಥಳೀಯ ಜನರ ಸಮಸ್ಯೆಗಳು ಹಾಗೂ ಮಾವೋರಿ ಸಮುದಾಯದ ಪರವಾಗಿ ಭಾಷಣ ಮಾಡಿದ್ದಾರೆ. ತನ್ನ ಮತದಾರರಿಗೆ ಒಂದು ಭರವಸೆಯನ್ನು ನೀಡಿದ್ದೇನೆ, “ನಾನು ನಿಮಗಾಗಿ ಸಾಯುತ್ತೇನೆ … ಆದರೆ ನಾನು ನಿನಗಾಗಿ ಬದುಕಿದ್ದೇನೆ ಎಂದು ಈ ಭಾಷಣದಲ್ಲಿ ಹೇಳಿದ್ದಾರೆ. ಮಾವೋರಿ ಜನರ ನನ್ನನ್ನೂ ಇಲ್ಲಿಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರಿಗಾಗಿ ನಾನು ದುಡಿಯುತ್ತೇನೆ ಎಂದು ಹೇಳಿದ್ದಾರೆ.

ಈ ಭಾಷಣವನ್ನು ನಮ್ಮ ಹಿರಿಯರಿಗೆ ಹಾಗೂ ಮುಂದಿನ ಪೀಳಿಗೆಯ ಮಕ್ಕಳಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ಸಂಸತ್ತಿಗೆ ಆಯ್ಕೆಯಾದರು. 2008ರಿಂದ ಸತತವಾಗಿ ಆಯ್ಕೆಯಾಗಿದ್ದ ನಾನಿಯಾ ಮಹುತಾ ಅವರನ್ನು ಸೋಲಿಸಿ ಸಂಸದರಾಗಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ಈ ಭಾಷಣ ತುಂಬಾ ಆಕ್ರೋಶದಂತಿತ್ತು. ಜೀವನ ಪೂರ್ತಿ ಹಿಂಭಾಗದಲ್ಲಿ ಕುಳಿತಿರುವ ತಮರಿಕಿ ಮಾವೋರಿಗೆ, ವಾಕಮಾ, ತಮ್ಮ ಮಾತೃಭಾಷೆಯನ್ನು ಕಲಿಯಲು ಹಂಬಲಿಸುವ ಪೀಳಿಗೆಗಳಿಗೆ ಇನ್ನೂ ತಮ್ಮ ಪೆಪೆಹಾಕ್ಕೆ ಹೋಗದ ತಮರಿಕಿಗಳಿಗೆ ಈ ಭಾಷಣವನ್ನು ಅರ್ಸಪಿಸುವೇ, ಎಂದಿಗೂ ಹೊಂದಿಕೊಳ್ಳಬೇಡಿ, ನೀವು ಪರಿಪೂರ್ಣರು ಎಂದು ಈ ಭಾಷಣದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ವಿಜಯಪುರ ಮೂಲದ ನವೀನ್ ಹಾವಣ್ಣನವರ ಅಮೆರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆ

ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಅವರಿಗೆ ರಾಜಕೀಯ ಹೊಸದಲ್ಲ, ಆಕೆಯ ಮುತ್ತಜ್ಜ ವೈರೆಮು ಕಟೆನೆ 1872 ರಲ್ಲಿ ಮೊದಲ ಮಾವೋರಿ ಮಂತ್ರಿಯಾಗಿದ್ದರು. ಆಕೆಯ ಚಿಕ್ಕಮ್ಮ ಹನಾ ತೆ ಹೆಮಾರಾ ಅವರು 1972ರಲ್ಲಿ ನ್ಯೂಜಿಲೆಂಡ್ ಸಂಸತ್ತಿಗೆ ಮಾವೋರಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಪತ್ರ ಬರೆದಿದ್ದರಂತೆ. 2018ರಲ್ಲಿ, ಅವರ ಅಜ್ಜ , ತೈತಿಮು ಮೈಪಿ ಅವರು ಹ್ಯಾಮಿಲ್ಟನ್‌ನ ವಸಾಹತುಶಾಹಿ ಪರಂಪರೆ ಮತ್ತು ಮಾವೊರಿಗಳಿಗೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಪ್ರತಿಭಟನೆ ನಡೆಸಿದ್ದರಂತೆ. ಈ ಪ್ರತಿಭಟನೆಯಲ್ಲಿ ಇವರು ಹ್ಯಾಮಿಲ್ಟನ್ ನಗರದಲ್ಲಿರುವ ಕ್ಯಾಪ್ಟನ್ ಜಾನ್ ಹ್ಯಾಮಿಲ್ಟನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದರು. ಇಲ್ಲಿಂದ ಮತ್ತಷ್ಟು ರಾಷ್ಟ್ರೀಯ ವಿಚಾರದಲ್ಲಿ ಗಮನ ಸೆಳೆದರು. ಇದೀಗ ಅವರ ಮೊಮ್ಮಗಳು ಮಾವೋರಿ ಸಮುದಾಯದಿಂದ ಸಂಸದರಾಗಿ ಆಯ್ಕೆಯಾಗಿದ್ದು ತನ್ನ ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ