Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಮಾಲಿಯಾ ಬಳಿ 15 ಭಾರತೀಯರಿದ್ದ ಹಡಗು ಹೈಜಾಕ್

ಸೊಮಾಲಿಯಾ ಕರಾವಳಿಯ ಬಳಿ ನಿನ್ನೆ ಸಂಜೆ ಲೈಬೀರಿಯನ್ ಧ್ವಜದ ಹಡಗನ್ನು ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಈ ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರೆ ಎಂದು ಹೇಳಲಾಗಿದೆ.

ಸೊಮಾಲಿಯಾ ಬಳಿ 15 ಭಾರತೀಯರಿದ್ದ ಹಡಗು ಹೈಜಾಕ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Jan 05, 2024 | 6:27 PM

ಸೊಮಾಲಿಯಾ (Somalia) ಕರಾವಳಿಯ ಬಳಿ ನಿನ್ನೆ ಸಂಜೆ ಲೈಬೀರಿಯನ್ ಧ್ವಜದ ಹಡಗನ್ನು ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಈ ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರೆ ಎಂದು ಹೇಳಲಾಗಿದೆ. ಇದೀಗ ಈ ಹಡಗನ್ನು ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗಿದೆ.

ಹಡಗನ್ನು ಅಪಹರಣ ಮಾಡಿರುವ ಬಗ್ಗೆ ಭಾರತೀಯ ನೌಕಾಪಡೆ ನೆನ್ನೆ (ಗುರುವಾರ ಜ.4) ಸಂಜೆ ಮಾಹಿತಿ ನೀಡಲಾಗಿದೆ. ಲೈಬೀರಿಯನ್ ಧ್ವಜದ ಹಡಗು ‘ಎಂವಿ ಲೀಲಾ ನಾರ್ಫೋಕ್’ ಎಂದು ಗುರುತಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿಗಳು ಇದ್ದರೆ ಎಂದು ಹೇಳಲಾಗಿದೆ.

ಅಧಿಕಾರಿಗಳ ಪ್ರಕಾರ, ಅಪಹರಣಕ್ಕೊಳಗಾದ ಹಡಗಿನ ಚಲನವಲನಗಳ ಮೇಲೆ ಜಾಗರೂಕ ನಿಗಾ ಇಡಲು ಭಾರತೀಯ ನೌಕಾಪಡೆಯ ವಿಮಾನಗಳನ್ನು ನಿಯೋಜಿಸಲಾಗಿದೆ. ಇನ್ನು ಹೈಜಾಕ್ ಆಗಿರುವ ಹಡಗಿನ ಸಿಬ್ಬಂದಿಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈಯಿಂದ ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published On - 11:01 am, Fri, 5 January 24