ಕೃಷಿ ಕಾಯ್ದೆಗಳು ಭಾರತದಲ್ಲಿ ಗಮನಾರ್ಹ ಬದಲಾವಣೆ ತರಲಿವೆ: IMF ಮನ್ನಣೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 15, 2021 | 3:52 PM

ಹೊಸ ಕೃಷಿ ಕಾಯ್ದೆಗಳು ಎಪಿಎಂಸಿಗಳನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಲಿವೆ. ಜತೆಗೆ, ಕೃಷಿ ಮಾರುಕಟ್ಟೆಯ ಸಾಮರ್ಥ್ಯವನ್ನು ಅಭಿಬೃದ್ಧಿಪಡಿಸಲಿವೆ. ಭಾರತದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಕೃಷಿ ಕಾಯ್ದೆಗಳು ನೆರವಾಗಲಿವೆ ಎಂದು ಐಎಂಎಫ್​ನ ಸಂವಹನ ವಿಭಾಗದ ನಿರ್ದೇಶಕಿ ಗೆರ್ರಿ ರೈಸ್ ಗುರುವಾರ ವಾಷಿಂಗ್ಟನ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೃಷಿ ಕಾಯ್ದೆಗಳು ಭಾರತದಲ್ಲಿ ಗಮನಾರ್ಹ ಬದಲಾವಣೆ ತರಲಿವೆ: IMF ಮನ್ನಣೆ
IMF ನ ಸಂವಹನ ವಿಭಾಗದ ನಿರ್ದೇಶಕಿ ಗೆರ್ರಿ ರೈಸ್
Follow us on

ದೆಹಲಿ: ಭಾರತದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರಲು ಸಹಕಾರಿಯಾಗಲಿವೆ ಎಂದು ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ ಅಭಿಪ್ರಾಯಪಟ್ಟಿದೆ. ಆದರೆ, ಕಾಯ್ದೆಗಳನ್ನು ಜಾರಿಗೊಳಿಸುವಾಗ ಸುರಕ್ಷತಾ ಕ್ರಮಗಳನ್ನು ಸಹ ಪಾಲಿಸಬೇಕು ಎಂದು ಐಎಮ್​ಎಫ್​ ಸಲಹೆ ನೀಡಿದೆ.

ಹೊಸ ಕೃಷಿ ಕಾಯ್ದೆಗಳು ಎಪಿಎಂಸಿಗಳನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಲಿವೆ. ಜತೆಗೆ, ಕೃಷಿ ಮಾರುಕಟ್ಟೆಯ ಸಾಮರ್ಥ್ಯವನ್ನು ಅಭಿ ವೃದ್ಧಿಪಡಿಸಲಿವೆ. ಭಾರತದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಕೃಷಿ ಕಾಯ್ದೆಗಳು ನೆರವಾಗಲಿವೆ ಎಂದು ಐಎಂಎಫ್​ನ ಸಂವಹನ ವಿಭಾಗದ ನಿರ್ದೇಶಕಿ ಗೆರ್ರಿ ರೈಸ್ ಗುರುವಾರ ವಾಷಿಂಗ್ಟನ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೃಷಿಕ ತಾನು ಬೆಳೆದ ಬೆಳೆಯನ್ನು ನೇರವಾಗಿ ಮಾರುವ ಅವಕಾಶದಿಂದ ಸಬಲವಾಗಲಿದ್ದಾನೆ. ಆದರೆ, ಈ ಹೊಸ ವ್ಯವಸ್ಥೆಯನ್ನು  ಅಳವಡಿಸಿಕೊಳ್ಳುವಾಗ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ. ಉದ್ಯೋಗ ಕ್ಷೇತ್ರದ ಮೇಲೂ ಈ ಬದಲಾವಣೆಗಳು ಪರಿಣಾಮ ಬೀರಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಎಷ್ಟು ಸಮಯ ಹಿಡಿಯಲಿದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

3 ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್​ನಿಂದ ತಡೆ; ನಾಲ್ವರು ತಜ್ಞರನ್ನೊಳಗೊಂಡ ಸಮಿತಿ ರಚನೆ

Published On - 2:48 pm, Fri, 15 January 21