ಲಾಹೋರ್: ಸುಪ್ರೀಂಕೋರ್ಟ್‌ನ (Supreme Court) ಆದೇಶದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಬಂಧನದಿಂದ ಬಿಡುಗಡೆಯಾದ ನಂತರ ಶನಿವಾರ ದೇಶವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ, ಪಾಕಿಸ್ತಾನದ (Pakistan) ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ರಾಜಕೀಯಕ್ಕೆ ಧುಮುಕಲು ತನ್ನದೇ ಆದ ರಾಜಕೀಯ ಪಕ್ಷವನ್ನು ರಚಿಸುವಂತೆ ಮಿಲಿಟರಿ ಅಧಿಕಾರಿಗೆ ಸಲಹೆ ನೀಡಿದ್ದಾರೆ. ಅದೇ ವೇಳೆ ದೇಶವನ್ನು ಸಂಪೂರ್ಣ ಅವ್ಯವಸ್ಥೆಯಿಂದ ರಕ್ಷಿಸಲು ಹೆಚ್ಚಿನದ್ದು ಯೋಚಿಸಿ ಎಂದಿದ್ದಾರೆ. ರಾತ್ರಿ 8 ಗಂಟೆಗೆ ತಮ್ಮ ಜಮಾನ್ ಪಾರ್ಕ್ ನಿವಾಸದಿಂದ ಭಾಷಣ ಮಾಡಿದ ಖಾನ್, ತನ್ನ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅನ್ನು ಹತ್ತಿಕ್ಕಲು ಮಿಲಿಟರಿ ಕೈಗೊಂಡಿರುವ ವರ್ತನೆ ಬಗ್ಗೆ ಕೋಪಗೊಂಡಿದ್ದಾರೆ. ಪಿಟಿಐ ವಿರೋಧಿ ನೀತಿ ಯಾಕೆ? ಅದನ್ನು ಪರಿಶೀಲಿಸಿ ಎಂದು ಮಿಲಿಟರಿ ನಾಯಕತ್ವಕ್ಕೆ ಖಾನ್ ಹೇಳಿದ್ದಾರೆ. ಈ ನಿಲುವುಗೆ ಈಗಾಗಲೇ ದೇಶವನ್ನು ದುರಂತದ ಅಂಚಿಗೆ ತಂದಿವೆ ಎಂದು ಖಾನ್ ಹೇಳಿದ್ದಾರೆ. ಶುಕ್ರವಾರ ಜಾಮೀನು ದೊರೆತರೂ ಮರು ಬಂಧನದ ಭಯದಿಂದ ಇಸ್ಲಾಮಾಬಾದ್ ಹೈಕೋರ್ಟ್ (Islamabad High Court) ಆವರಣದಲ್ಲಿ ಗಂಟೆಗಳ ಕಾಲ ಬಂಧಿತರಂತಿದ್ದ ಖಾನ್, ಶನಿವಾರ ಲಾಹೋರ್ ಗೆ ಮರಳಿದ್ದರು.
ಲಾಹೋರ್‌ಗೆ ಹೊರಡುವ ಮೊದಲು, 70 ವರ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥರು ಎಲ್ಲಾ ಪ್ರಕರಣಗಳಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ ನಂತರ ತನ್ನನ್ನು ಅಪಹರಣ ಮಾಡಿದ ಸರ್ಕಾರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ತನ್ನನ್ನು ಕಪಟ ವ್ಯಕ್ತಿ ಎಂದು ಕರೆದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಡೈರೆಕ್ಟರ್-ಜನರಲ್ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿನ್ನು ಟೀಕಿಸಿದ ಇಮ್ರಾನ್ ಖಾನ್, ಮಿಸ್ಟರ್ ಡಿಜಿ ಐಎಸ್ಪಿಆರ್, ನಾನು ನನ್ನ ದೇಶವನ್ನು ಪ್ರತಿನಿಧಿಸುವಾಗ ಮತ್ತು ಅದಕ್ಕೆ ಒಳ್ಳೆಯ ಹೆಸರನ್ನು ಗಳಿಸಿದಾಗ ನೀವು ಹುಟ್ಟಿರಲಿಲ್ಲ. ನನ್ನನ್ನು ಕಪಟ ವ್ಯಕ್ತಿ ಮತ್ತು ಸೇನೆಯ ವಿರೋಧಿ ಎಂದು ಕರೆದಿದ್ದಕ್ಕಾಗಿ ನೀವು ನಾಚಿಕೆಪಡಬೇಕು. ಮಿಲಿಟರಿಯ ಮಾಧ್ಯಮ ವಿಭಾಗವಾದ ISPR ಅಂತಹ ವಿಷಯಗಳನ್ನು (ರಾಜಕಾರಣಿಯ ಬಗ್ಗೆ) ಎಂದಿಗೂ ಹೇಳಿಲ್ಲ.
ನೀವು ರಾಜಕೀಯಕ್ಕೆ ಧುಮುಕಿದ್ದೀರಿ, ನೀವೇಕೆ ನಿಮ್ಮ ಸ್ವಂತ ಪಕ್ಷವನ್ನು ರಚಿಸಬಾರದು?. ಇಂತಹ ಕ್ಷುಲ್ಲಕ ಆರೋಪಗಳನ್ನು ಮಾಡುವ ಹಕ್ಕು ನಿಮಗೆ ಯಾರು ನೀಡಿದ್ದಾರೆ. ನಾನು ಮಾಡಿದಷ್ಟು ಸೇನೆಗೆ ಬೇರೆ ಯಾರೂ ಹಾನಿ ಮಾಡಿಲ್ಲ ಎಂದು ಹೇಳಲು ಸ್ವಲ್ಪ ನಾಚಿಕೆಪಡಬೇಕು. ನೀವು ನಮ್ಮನ್ನು ತುಳಿಯುತ್ತೀರಿ ಎಂದಿದ್ದಾರೆ ಖಾನ್.
ನಾನು ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಸೇನೆಯ ಇಮೇಜ್ ಚೆನ್ನಾಗಿತ್ತೇ ಅಥವಾ ಈಗ ಚೆನ್ನಾಗಿದೆಯೇ? ಆಗ ಜನರು ಸೇನೆಯನ್ನು ಇಷ್ಟಪಟ್ಟಿದ್ದರು. ಸೇನಾ ಮುಖ್ಯಸ್ಥ (ಮಾಜಿ ಜನರಲ್ ಕಮರ್ ಜಾವೇದ್ ಬಾಜ್ವಾ) ನನ್ನ ಬೆನ್ನಿಗೆ ಚೂರಿ ಹಾಕಿ ಪಾಕಿಸ್ತಾನದ ಅತ್ಯಂತ ಕುಖ್ಯಾತ ಮತ್ತು ಭ್ರಷ್ಟ ಕ್ರಿಮಿನಲ್‌ಗಳನ್ನು ಅಧಿಕಾರಕ್ಕೆ ತಂದಾಗ, ಜನಸಾಮಾನ್ಯರು ಸೇನೆಯನ್ನು ಟೀಕಿಸಲು ಪ್ರಾರಂಭಿಸಿದರು. ಅದು ನನ್ನಿಂದಲ್ಲ. ಸೇನಾ ಮುಖ್ಯಸ್ಥರ ಕ್ರಮಗಳು ಸೇನೆಯನ್ನು ಗುರಿಯಾಗಿಸಿಕೊಂಡು ಟೀಕೆಗೆ ಗುರಿಯಾಗುತ್ತಿವೆ. ಜನರು ತನ್ನನ್ನು ನಂಬಿರುವುದರಿಂದ ಜಗತ್ತಿನಾದ್ಯಂತ ಸಹಾಯ ಸಿಕ್ಕಿತು ಎಂದು ಖಾನ್ ಹೇಳಿದ್ದಾರೆ.
ನೀವು ಇಮ್ರಾನ್ ಖಾನ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ. ಅವರು ನನ್ನನ್ನು ನಂಬಿ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ಪರಿಗಣಿಸಿದ್ದರಿಂದ ನನಗೆ ಹೆಚ್ಚಿನ ಸಹಾಯ ನೀಡಿದರು. ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕೂಡ ನನ್ನನ್ನು ಪ್ರಾಮಾಣಿಕ (ಸಾದಿಕ್ ಔರ್ ಅಮೀನ್) ಎಂದು ಘೋಷಿಸಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ