ಪಾಕಿಸ್ತಾನದ ಪ್ರಧಾನಿ ಒಂದಲ್ಲ ಒಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುತ್ತಾರೆ…ಟೀಕೆಗೆ ಗುರಿಯಾಗುತ್ತಿರುತ್ತಾರೆ. ಇದೀಗ ಇಮ್ರಾನ್ ಖಾನ್ ಮತ್ತೊಮ್ಮೆ ಜನರಿಂದ ಬೈಸಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಲು ಮಹಿಳೆಯರು ತೊಡುವ ಉಡುಗೆಗಳೇ ಕಾರಣ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಇಮ್ರಾನ್ ಖಾನ್, ಮಹಿಳೆಯರು ಮೈಮೇಲೆ ಕಡಿಮೆ ಬಟ್ಟೆ ಧರಿಸಿದರೆ ಅದು ಪುರುಷನ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ಯಾಕೆಂದರೆ ಅವರೇನೂ ರೋಬೋಟ್ಗಳಲ್ಲ. ಇದು ಕಾಮನ್ಸೆನ್ಸ್..ಮಹಿಳೆಯರು ತುಂಡು ಉಡುಗೆ ತೊಟ್ಟರೆ ಪುರುಷರಿಗೆ ಸಹಜವಾಗಿಯೇ ಪ್ರಚೋದನೆ ಆಗುತ್ತದೆ. ಅದನ್ನು ನಿಯಂತ್ರಿಸಿಕೊಳ್ಳಲಾಗದವರು ಅತ್ಯಾಚಾರ ಮಾಡಲು ಮುಂದಾಗುತ್ತಾರೆ. ಲೈಂಗಿಕ ದೌರ್ಜನ್ಯ ನಡೆಸುತ್ತಾರೆ ಎಂದು ಹೇಳಿದ್ದಾಗಿ ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರ್ತಿ ರೀಮಾ ಓಮರ್ ಟ್ವೀಟ್ ಮಾಡಿದ್ದಾರೆ.
Disappointing and frankly sickening to see PM Imran Khan repeat his victim blaming regarding reasons for sexual violence in Pakistan
Men are not “robots”, he says. If they see women in skimpy clothes, they will get “tempted” and some will resort to rape
Shameful!
— Reema Omer (@reema_omer) June 20, 2021
ನಾಚಿಕೆಗೇಡು !
ಇಮ್ರಾನ್ಖಾನ್ರ ಈ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ವಿರೋಧ ವ್ಯಕ್ತವಾಗಿದೆ. ಇದು ನಿಜಕ್ಕೂ ನಾಚಿಕೆ ಗೇಡು ಎಂದು ಹಲವು ಮಹಿಳೆಯರು ಹೇಳಿದ್ದಾರೆ. ಆದರೆ ಪಾಕಿಸ್ತಾನ ಪ್ರಧಾನಮಂತ್ರಿ ಕಚೇರಿಯ ಡಿಜಿಟಲ್ ಮೀಡಿಯಾ ವಿಭಾಗದ ಡಾ. ಅರ್ಸಲ್ ಖಲೀದ್ ಇದನ್ನು ತಳ್ಳಿಹಾಕಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ರ ಹೇಳಿಕೆಗಳನ್ನು ತಿರುಚಲಾಗಿದೆ. ಆಯ್ದ ಭಾಗಗಳನ್ನಷ್ಟೇ ವೈರಲ್ ಮಾಡಿಕೊಂಡು ಟೀಕಿಸಲಾಗುತ್ತಿದೆ ಎಂದಿದ್ದಾರೆ.
ಇದೇ ಮೊದಲಲ್ಲ
ಇಮ್ರಾನ್ ಖಾನ್ ಇಂಥ ಹೇಳಿಕೆ ನೀಡಿದ್ದು ಇದೇ ಮೊದಲೇನೂ ಅಲ್ಲ. ಏಪ್ರಿಲ್ನಲ್ಲೂ ಕೂಡ ಇಂಥದ್ದೇ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಪ್ರಧಾನಮಂತ್ರಿ ಮಹಿಳೆಯರ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಭುಗಿಲೇಳುವಂತೆ ಮಾಡಿದ್ದರು. ಇಸ್ಲಾಂನಲ್ಲಿ ಮಹಿಳೆಯರು ಮುಸುಕು ಹಾಕಿಕೊಳ್ಳುವ ಪರಿಕಲ್ಪನೆ ಬಂದಿದ್ದೇ ಈ ಲೈಂಗಿಕ ದೌರ್ಜನ್ಯ ತಡೆಯುವ ಕಾರಣಕ್ಕೆ. ಎಲ್ಲರಿಗೂ ತಮ್ಮ ಕಾಮನೆಯನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಇರುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದಲ್ಲಿ ಅತ್ಯಾಚಾರ ಹೆಚ್ಚಲು ಒಂದರ್ಥದಲ್ಲಿ ಮಹಿಳೆಯರೇ ಕಾರಣ ಎಂಬಂತೆ ಮಾತನಾಡಿದ್ದರು.
ಪಾಕ್ನಲ್ಲಿ ಹೆಚ್ಚುತ್ತಿದೆ ಅತ್ಯಾಚಾರ ಪ್ರಕರಣ
ಪಾಕಿಸ್ತಾನದಲ್ಲಿ ಪ್ರತಿ 24ಗಂಟೆಗೆ ಸುಮಾರು 11 ರೇಪ್ ಕೇಸ್ಗಳು ದಾಖಲಾಗುತ್ತವೆ ಎಂದು ಡಾಟಾದಲ್ಲಿ ಉಲ್ಲೇಖವಾಗಿದೆ. ಕಳೆದ 6ವರ್ಷಗಳಲ್ಲಿ ಒಟ್ಟು 22 ಸಾವಿರ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ಅಕ್ರಮ; ಕಾರ್ಮಿಕರ ಬದಲು ಜೆಸಿಬಿ ಬಳಸಿ ಕಾಮಗಾರಿ ಮಾಡಿಸಿದ ಆರೋಪ
Imran Khan blames women clothing for increase rapes in Pakistan
Published On - 3:12 pm, Mon, 21 June 21