AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಅಮೆರಿಕದ ಉತ್ತಮ ಸ್ನೇಹಿತ; ವಿವಾದದ ಬಳಿಕ ತೇಪೆ ಹಚ್ಚಿದ ಟ್ರಂಪ್

ಒಂದೆಡೆ ಭಾರತದ ಪ್ರಧಾನಿ ಮೋದಿಯನ್ನು ತನ್ನ ಆತ್ಮೀಯ ಸ್ನೇಹಿತ ಎಂದು ಕರೆಯುವ ಡೊನಾಲ್ಡ್ ಟ್ರಂಪ್ ಇನ್ನೊಂದೆಡೆ ಆಗಾಗ ಭಾರತವನ್ನು ಕೀಳಾಗಿ ಬಿಂಬಿಸುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. ಭಾರತ ಮತ್ತು ಚೀನಾವನ್ನು ನರಕವೆಂದು ಕರೆದಿದ್ದ ಪಾಡ್​ಕಾಸ್ಟ್​ ವಿಡಿಯೋವನ್ನು ಹಂಚಿಕೊಂಡಿದ್ದ ಟ್ರಂಪ್ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗುವವರ ವಿರುದ್ಧ ಕೀಳಾಗಿ ಪೋಸ್ಟ್ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಭಾರತ ಬಹಳ ಉತ್ತಮ ದೇಶ ಎಂದು ತೇಪೆ ಹೆಚ್ಚು ಕೆಲಸ ಮಾಡಿದ್ದಾರೆ.

ಭಾರತ ಅಮೆರಿಕದ ಉತ್ತಮ ಸ್ನೇಹಿತ; ವಿವಾದದ ಬಳಿಕ ತೇಪೆ ಹಚ್ಚಿದ ಟ್ರಂಪ್
Donald TrumpImage Credit source: AP
ಸುಷ್ಮಾ ಚಕ್ರೆ
|

Updated on:Apr 23, 2026 | 8:49 PM

Share

ವಾಷಿಂಗ್ಟನ್, ಏಪ್ರಿಲ್ 23: ಭಾರತ ಮತ್ತು ಚೀನಾದಂತಹ ದೇಶಗಳಿಗೆ 9 ತಿಂಗಳಾದ ಬಳಿಕ ಅಮೆರಿಕಕ್ಕೆ ಬರುವ ಮಹಿಳೆಯರು ಇಲ್ಲೇ ಬಂದು ಮಗುವನ್ನು ಹೆರುತ್ತಾರೆ. ಆಗ ಆ ಮಗುವಿಗೆ ಇಲ್ಲಿನ ಪೌರತ್ವ ಸಿಗುತ್ತದೆ. ನಂತರ ಭಾರತ ಮತ್ತು ಚೀನಾದಂತಹ ನರಕಗಳಿಂದ ತಮ್ಮ ಸಂಬಂಧಿಕರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಅಮೆರಿಕದ ಜನ್ಮಸಿದ್ಧ ಪೌರತ್ವಕ್ಕಾಗಿ ಇಲ್ಲಿಗೆ ವಲಸೆ ಬರುತ್ತಾರೆ ಎಂದು ಅಮೆರಿಕದ ಪಾಡ್​ಕಾಸ್ಟ್​ನಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ರೇಡಿಯೋ ಜಾಕಿ ಮೈಕಲ್ ಸ್ಯಾವೇಜ್ ವಿವಾದಾತ್ಮಕವಾಗಿ ಮಾತನಾಡಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆ ಹೇಳಿಕೆಗೆ ತನ್ನ ಸಹಮತ ಸೂಚಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್ ಭಾರತ ಅತ್ಯುತ್ತಮ ದೇಶ ಎಂದಿದ್ದಾರೆ.

ತನ್ನ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿರುವ ಡೊನಾಲ್ಡ್ ಟ್ರಂಪ್ ಭಾರತವನ್ನು ಹೊಗಳಿದ್ದಾರೆ. ಭಾರತ ದೇಶವನ್ನು ಮುನ್ನಡೆಸುವ ನನ್ನ ಬಹಳ ಉತ್ತಮ ಸ್ನೇಹಿತ ಅಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂಘರ್ಷದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರಗಳು: ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ, ಟ್ರಂಪ್‌ನಿಂದ ಖಡಕ್ ವಾರ್ನಿಂಗ್

ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಮೆರಿಕದ ನಾಯಕ ಟ್ರಂಪ್ ಭಾರತದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ, ಭಾರತವನ್ನು ಒಂದು ಉತ್ತಮ ರಾಷ್ಟ್ರ ಎಂದು ಕರೆದಿದ್ದಾರೆ. ಅವರು ಭಾರತದ ಪ್ರಧಾನಿಯೊಂದಿಗೆ ವೈಯಕ್ತಿಕ ಸ್ನೇಹವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್

ಯುನೈಟೆಡ್ ಸ್ಟೇಟ್ಸ್‌ನ ಜನ್ಮಸಿದ್ಧ ಪೌರತ್ವ ಕಾನೂನಿನಲ್ಲಿ ಬದಲಾವಣೆಗಳಿಗೆ ಕರೆ ನೀಡುವ ಜನಾಂಗೀಯ ವಾಗ್ದಾಳಿಯಲ್ಲಿ ರೇಡಿಯೋ ಜಾಕಿ ಸ್ಯಾವೇಜ್ ಏಷ್ಯಾದ 2 ರಾಷ್ಟ್ರಗಳ ಜನರು 9ನೇ ತಿಂಗಳಲ್ಲಿ ಮಗುವನ್ನು ಹೆರುವ ಸಲುವಾಗಿಯೇ ಯುಎಸ್‌ಗೆ ಬರುತ್ತಾರೆ. ಇಲ್ಲಿನ ಕಾನೂನು ಅವರನ್ನು ಕೂಡಲೇ ಅಮೆರಿಕದ ನಾಗರಿಕರನ್ನಾಗಿ ಮಾಡುತ್ತದೆ ಎಂದು ಆರೋಪಿಸಿದ್ದರು. ಅಲ್ಲದೆ, ಭಾರತೀಯ ಮತ್ತು ಚೀನೀ ವಲಸಿಗರನ್ನು “ಲ್ಯಾಪ್‌ಟಾಪ್‌ಗಳನ್ನು ಹೊಂದಿರುವ ದರೋಡೆಕೋರರು” ಎಂದು ಟೀಕಿಸಿದ್ದರು. ಈ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಮರು-ಪೋಸ್ಟ್ ಮಾಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:44 pm, Thu, 23 April 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದ ಪ್ರಧಾನಿ ಮೋದಿ
ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದ ಪ್ರಧಾನಿ ಮೋದಿ
ಮತ್ತೆ ಬರುತ್ತಿದೆ ‘ಅಗ್ನಿಸಾಕ್ಷಿ’ ಧಾರಾವಾಹಿ: ಶಮಂತ್ ಗೌಡ ಹೇಳಿದ್ದೇನು?
ಮತ್ತೆ ಬರುತ್ತಿದೆ ‘ಅಗ್ನಿಸಾಕ್ಷಿ’ ಧಾರಾವಾಹಿ: ಶಮಂತ್ ಗೌಡ ಹೇಳಿದ್ದೇನು?
ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ
ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ
ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದು; ಮೋದಿ ವಾಗ್ದಾಳಿ
ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದು; ಮೋದಿ ವಾಗ್ದಾಳಿ
ಅಧಿಕಾರ ಕಳೆದುಕೊಂಡ ನಂತರ ಒಬ್ಬಂಟಿಯಾದ ಸಿದ್ದರಾಮಯ್ಯ
ಅಧಿಕಾರ ಕಳೆದುಕೊಂಡ ನಂತರ ಒಬ್ಬಂಟಿಯಾದ ಸಿದ್ದರಾಮಯ್ಯ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ
ಮಹರಾಜ ಲೀಗ್​​ನಲ್ಲಿ ಅನ್​​ಸೋಲ್ಡ್ ಆದ ಕೆಎಲ್ ರಾಹುಲ್; ಕಾರಣ ಇಲ್ಲಿದೆ
ಮಹರಾಜ ಲೀಗ್​​ನಲ್ಲಿ ಅನ್​​ಸೋಲ್ಡ್ ಆದ ಕೆಎಲ್ ರಾಹುಲ್; ಕಾರಣ ಇಲ್ಲಿದೆ
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ