ಭಾರತದ ಯುಪಿಐ ವ್ಯವಸ್ಥೆಯನ್ನು ಹಾಡಿ ಹೊಗಳಿದ ಬಿಲ್ ಗೇಟ್ಸ್

ಅತ್ಯಂತ ಸರಳವಾಗಿ ಮೊಬೈಲ್ ಅಪ್ಲಿಕೇಶನ್​ಗಳ ಮೂಲಕ ಯಾವುದೇ ಬ್ಯಾಂಕ್​ಗೆ ಹಣ ವರ್ಗಾಯಿಸಬಹುದಾದ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಕುರಿತು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಭಾರತದ ಯುಪಿಐ ವ್ಯವಸ್ಥೆಯನ್ನು ಹಾಡಿ ಹೊಗಳಿದ ಬಿಲ್ ಗೇಟ್ಸ್
ಬಿಲ್ ಗೇಟ್ಸ್ (ಸಂಗ್ರಹ ಚಿತ್ರ)
Edited By:

Updated on: Dec 10, 2020 | 8:59 PM

ವಾಷಿಂಗ್​ಟನ್: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮೈಕ್ರೊಸಾಫ್ಟ್​ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹಾಡಿ ಹೊಗಳಿದ್ದಾರೆ. ಅತ್ಯಂತ ಸರಳವಾಗಿ ಮೊಬೈಲ್ ಅಪ್ಲಿಕೇಶನ್​ಗಳ ಮೂಲಕ ಯಾವುದೇ ಬ್ಯಾಂಕ್​ಗೆ ಹಣ ವರ್ಗಾಯಿಸಬಹುದಾದ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಕುರಿತು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಡಿಜಿಟಲ್​ ಪಾವತಿ ವ್ಯವಸ್ಥೆಗೆ ಚೀನಾವನ್ನು ಹೊರತುಪಡಿಸಿ ಇತರ ದೇಶವನ್ನು ಅಧ್ಯಯನ ಮಾಡುವುದಾದರೆ, ಭಾರತದ ಹೆಸರು ಸೂಚಿಸುವುದಾಗಿ ಅವರು ತಿಳಿಸಿದ್ದಾರೆ. ಭಾರತದ ಯುಪಿಐನಂತಹ ವ್ಯವಸ್ಥೆಗಳು ಕೊರೊನಾದಂತಹ ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ಜನಸಾಮಾನ್ಯರಿಗೆ ವರದಾನವಾಗಿದ್ದವು ಎಂದು ಬಿಲ್ ಗೇಟ್ಸ್ ವಿವರಿಸಿದ್ದಾರೆ.

ಆರ್ಥಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ ಎಂದಿರುವ ಅವರು, ಭಾರತದಲ್ಲಿ ಬಳಕೆಯಲ್ಲಿರುವ ಮುಕ್ತ ತಂತ್ರಜ್ಞಾನದ ನೀತಿಗಳನ್ನು ಇತರ ದೇಶಗಳಲ್ಲಿ ಜಾರಿಗೊಳಿಸಲು ಕೆಲಸ ಮಾಡುತ್ತಿದ್ದೇನೆ. ಭಾರತದಲ್ಲಿ ಲಭ್ಯವಿರುವ ಯಪಿಐನಂತಹ ಸೌಲಭ್ಯವನ್ನು ಹಿಂದುಳಿದ ದೇಶಗಳಲ್ಲಿ ಜಾರಿಗೆ ತರಲು ಬಿಲ್ ಆ್ಯಂಡ್ ಮೆಲಿಂಡಾ ಫೌಂಡೇಶನ್ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.