ಜೋ ಬಿಡೆನ್, ಕಮಲಾ ಹ್ಯಾರಿಸ್ ಟೈಮ್ ವರ್ಷದ ವ್ಯಕ್ತಿಗಳು

ಕೋವಿಡ್-19ವಿರುದ್ಧ ಹೊರಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಂಚೂಣಿ ಆರೋಗ್ಯ ಕಾರ್ಯಕರ್ತ ಆಂಥೋನಿ ಫೌಸಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರೂ 2020ರ ವರ್ಷದ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಜೋ ಬಿಡೆನ್, ಕಮಲಾ ಹ್ಯಾರಿಸ್ ಟೈಮ್ ವರ್ಷದ ವ್ಯಕ್ತಿಗಳು
ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್
preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 11, 2020 | 4:28 PM

ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಟೈಮ್ ನಿಯತಕಾಲಿಕೆಯ ವರ್ಷದ ವ್ಯಕ್ತಿಯಾಗಿ (person of the year) ಆಯ್ಕೆ ಮಾಡಲಾಗಿದೆ ಎಂದು ಎಎಫ್​ಪಿ ಶುಕ್ರವಾರ ವರದಿ ಮಾಡಿದೆ.

ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಟೈಮ್ ನಿಯತಕಾಲಿಕೆ ವರ್ಷದ ವ್ಯಕ್ತಿಗಳಾಗಿ ಆಯ್ಕೆ ಮಾಡಿದೆ. ಕೋವಿಡ್-19ವಿರುದ್ಧ ಹೊರಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಂಚೂಣಿ ಆರೋಗ್ಯ ಕಾರ್ಯಕರ್ತ ಆಂಥೋನಿ ಫೌಸಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರೂ 2020ರ ವರ್ಷದ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

1997ರಿಂದ ಟೈಮ್ ನಿಯತಕಾಲಿಕೆ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡುತ್ತಿದೆ. ಸಾಮಾನ್ಯವಾಗಿ ದೇಶದ ಮೇಲೆ ಹೆಚ್ಚು ಪ್ರಭಾವ ಬೀರಿದ ಓರ್ವ ಅಥವಾ ಹಲವರನ್ನು ಆಯ್ಕೆ ಮಾಡಲಾಗುತ್ತದೆ. 2019ರಲ್ಲಿ ಟೈಮ್​ನ ವರ್ಷದ ವ್ಯಕ್ತಿಯಾಗಿ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್​ಬರ್ಗ್​ರನ್ನು ಆಯ್ಕೆ ಮಾಡಲಾಗಿತ್ತು.

2020ರ ವರ್ಷದಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಟೈಮ್ ನಿಯತಕಾಲಿಕೆಯ ಓದುಗರ ಅಭಿಪ್ರಾಯ ಕೇಳಿತ್ತು. 80 ಲಕ್ಷಕ್ಕೂ ಹೆಚ್ಚು ಜನರು ಅಭಿಪ್ರಾಯ ಹಂಚಿಕೊಂಡಿದ್ದರು.

ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada