ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಲಕ್ಷದ್ವೀಪದ(Lakshadweep) ಭೇಟಿ ಹಾಗೂ ಭಾರತವನ್ನು ಅತ್ಯಂತ ಕಟುವಾಗಿ ಟೀಕಿಸಿದ ಮಾಲ್ಡೀವ್ಸ್ಗೆ (Maldives) ತಕ್ಕ ಉತ್ತರ ಈಗಾಗಲೇ ಭಾರತ ನೀಡಿದೆ. ಇನ್ನು ಭಾರತೀಯರು ಕೂಡ ಭಾರತ ಹಾಗೂ ಲಕ್ಷದ್ವೀಪಕ್ಕೆ ಬೆಂಬಲ ನೀಡಿದ್ದಾರೆ. ಇದೀಗ ಭಾರತ ಹಾಗೂ ಲಕ್ಷದ್ವೀಪವನ್ನು ಟೀಕಿಸಿದ ಮಾಲ್ಡೀವ್ಸ್ಗೆ ಟಕ್ಕರ್ ನೀಡಲು ಇಸ್ರೇಲ್ ಮುಂದಾಗಿದೆ. ಪ್ರತಿ ಹಂತದಲ್ಲೂ ಭಾರತ ಜತೆಗೆ ನಿಂತಿದ್ದ ಇಸ್ರೇಲ್, ಇದೀಗ ಲಕ್ಷದ್ವೀಪ ಅಭಿವೃದ್ಧಿಗೆ ಮಹತ್ವ ಕೊಡುಗೆ ನೀಡಲು ಮುಂದಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ರಾಜತಾಂತ್ರಿಕ ಜಗಳದ ನಡುವೆಯೇ ಭಾರತದಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯು ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸೋಮವಾರ ಭೇಟಿ ನೀಡಿದೆ. ಇಲ್ಲಿ ನಿರ್ಲವಣೀಕರಣ (desalination) ಕಾರ್ಯಕ್ರಮವನ್ನು ಆರಂಭಿಸಲಿದೆ. ಇದಕ್ಕಾಗಿ ಕಳೆದ ವರ್ಷವೇ ಈ ಬಗ್ಗೆ ಪ್ಲಾನ್ ಹಾಕಲಾಗಿತ್ತು. ಇದೀಗ ಇದಕ್ಕೆ ಮತ್ತಷ್ಟು ಬಲ ನೀಡಲು ಮುಂದಾಗಿದೆ.
ಇಸ್ರೇಲ್ ಜನವರಿ 10ರಿಂದ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಲಕ್ಷದ್ವೀಪಗಳ ಪ್ರಾಚೀನ ಮತ್ತು ಭವ್ಯವಾದ ನೀರೊಳಗಿನ ಸೌಂದರ್ಯವನ್ನು ವೀಕ್ಷಣೆ ಮಾಡುವ ಅವಕಾಶವನ್ನು ಈ ಯೋಜನೆ ಮಾಡಲಿದೆ. ಈ ದ್ವೀಪದ ಮೋಡಿಮಾಡುವ ಆಕರ್ಷಣೆಯ ಚಿತ್ರಗಳನ್ನು ಇಸ್ರೇಲಿ ರಾಯಭಾರ ಕಚೇರಿ X ನಲ್ಲಿ ಹಂಚಿಕೊಂಡಿದೆ.
We were in #Lakshadweep last year upon the federal government’s request to initiate the desalination program.
Israel is ready to commence working on this project tomorrow.
For those who are yet to witness the pristine and majestic underwater beauty of #lakshadweepislands, here… pic.twitter.com/bmfDWdFMEq
— Israel in India (@IsraelinIndia) January 8, 2024
ಇನ್ನು ಭಾರತ ಹಾಗೂ ಪ್ರಧಾನಿ ಮೋದಿ ಬಗ್ಗೆ ಕೆಟ್ಟದಾಗಿ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಮಾಲ್ಡೀವ್ಸ್ಗೆ ಇದು ದೊಡ್ಡ ಮಟ್ಟದ ಉತ್ತರವಾಗಿದೆ. ಈ ವಿಚಾರವಾಗಿ ಭಾರತದಲ್ಲಿರುವ ಮಾಲ್ಡೀವ್ಸ್ ರಾಯಭಾರಿಯ ಅಧಿಕಾರಿಯನ್ನು ಸೋಮವಾರ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು ಮತ್ತು ಮಾಲ್ಡೀವ್ಸ್‌ನ ಹಲವಾರು ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಮೋದಿ ವಿರುದ್ಧದ ಟೀಕೆಗಳ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೇಕ್ ಮೈ ಟ್ರಿಪ್ನಿಂದ ಬೀಚಸ್ ಆಫ್ ಇಂಡಿಯಾ ಅಭಿಯಾನ; ಮೋದಿಯ ಲಕ್ಷದ್ವೀಪ ಭೇಟಿ ಪರಿಣಾಮ
ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಟೀಕೆ ಮಾಡಿದ ಮೂವರು ಮಾಲ್ಡೀವ್ಸ್ ಸಚಿವರನ್ನು ಅಲ್ಲಿನ ಸರ್ಕಾರ ಅಮಾನತು ಮಾಡಿದೆ. ಬೇರೆ ದೇಶದ ಪ್ರಧಾನಿಯನ್ನು ಅಥವಾ ಅಲ್ಲಿನ ವಿಚಾರಗಳನ್ನು ಟೀಕಿಸುವುದು ಸರಿಯಲ್ಲ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ