Lakshadweep search: ಮೇಕ್ ಮೈ ಟ್ರಿಪ್ನಿಂದ ಬೀಚಸ್ ಆಫ್ ಇಂಡಿಯಾ ಅಭಿಯಾನ; ಮೋದಿಯ ಲಕ್ಷದ್ವೀಪ ಭೇಟಿ ಪರಿಣಾಮ
Make My Trip: ಲಕ್ಷದ್ವೀಪಕ್ಕೆ ಮೋದಿ ಭೇಟಿ ನೀಡಿದ ಬಳಿಕ ತಮ್ಮ ಪ್ಲಾಟ್ಫಾರ್ಮ್ನಲ್ಲಿ ಆ ಸ್ಥಳದ ಬಗ್ಗೆ ಸರ್ಚ್ ಪ್ರಮಾಣ ಹೆಚ್ಚಿದೆ ಎಂದು ಮೇಕ್ ಮೈ ಟ್ರಿಪ್ ಹೇಳಿದೆ. ಬೀಚಸ್ ಆಫ್ ಇಂಡಿಯಾ ಅಭಿಯಾನ ಆರಂಭಿಸಿದ್ದು, ಇದರಲ್ಲಿ ಭಾರತೀಯ ಬೀಚ್ಗಳ ಬಗ್ಗೆ ಮಾಹಿತಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ. ಮೇಕ್ ಮೈ ಟ್ರಿಪ್ ಭಾರತದ ನಂಬರ್ ಒನ್ ಆನ್ಲೈನ್ ಟ್ರಾವೆಲ್ ಬುಕಿಂಗ್ ಸಂಸ್ಥೆಯಾಗಿದೆ.
ನವದೆಹಲಿ, ಜನವರಿ 8: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಮಾಡಿದ ಭೇಟಿ (Narendra Modi’s visit to Lakshadweep) ಸಾಕಷ್ಟು ಸಂಚಲನಕ್ಕೆ ಕಾರಣವಾಗಿ. ಮೋದಿ ಭೇಟಿಯನ್ನು ಅಣಕಿಸಿದ ಮಾಲ್ಡೀವ್ಸ್ ಸಚಿವರ ತಲೆದಂಡವಾಗಿದೆ. ಅದಕ್ಕಿಂತ ಹೆಚ್ಚಾಗಿ ಲಕ್ಷದ್ವೀಪದ ಬಗ್ಗೆ ಭಾರತೀಯರ ಆಸಕ್ತಿ ಹೆಚ್ಚಾಗಿದೆ. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಜೋರಾಗಿ ನಡೆಯುತ್ತಿರುವಂತೆಯೇ, ಲಕ್ಷದ್ವೀಪದ ಬಗ್ಗೆ ಆನ್ಲೈನ್ನಲ್ಲಿ ಮಾಹಿತಿ ಶೋಧ ಬಹಳ ಹೆಚ್ಚಾಗಿದೆ. ಭಾರತದ ನಂಬರ್ ಒನ್ ಟೂರ್ ಆಯೋಜಕ ಮೇಕ್ ಮೈ ಟ್ರಿಪ್ (MakeMyTrip) ಕೂಡ ಈ ಅಭಿಪ್ರಾಯವನ್ನು ಪುಷ್ಟೀಕರಿಸಿದೆ. ಪ್ರಧಾನಿಗಳ ಲಕ್ಷದ್ವೀಪ ಭೇಟಿ ಬಳಿಕ ತಮ್ಮ ಪ್ಲಾಟ್ಫಾರ್ಮ್ನಲ್ಲಿ ಆ ಸ್ಥಳದ ಬಗ್ಗೆ ಸರ್ಚ್ಗಳ ಪ್ರಮಾಣ ಹೆಚ್ಚಿದೆ ಎಂದು ಹೇಳಿದೆ.
‘ಪಿಎಂ ಭೇಟಿ ಬಳಿಕ ಲಕ್ಷದ್ವೀಪ್ ಬಗ್ಗೆ ಆನ್-ಪ್ಲಾಟ್ಫಾರ್ಮ್ ಸರ್ಚ್ಗಳ ಪ್ರಮಾಣ ಶೇ. 3400ರಷ್ಟು ಹೆಚ್ಚಾಗಿದೆ. ಇದರಿಂದ ಬೀಚಸ್ ಆಫ್ ಇಂಡಿಯಾ ಅಭಿಯಾನ ನಿರ್ಮಿಸಲು ನಮಗೆ ಉತ್ತೇಜನ ಸಿಕ್ಕಂತಾಗಿದೆ. ಹಾಗೆಯೇ, ಆಕರ್ಷಕ ಡಿಸ್ಕೌಂಟ್, ಡೀಲ್ಗಳನ್ನೂ ನಾವು ಆಫರ್ ಮಾಡುತ್ತಿದ್ದೇವೆ,’ ಎಂದು ಮೇಕ್ ಮೈ ಟ್ರಿಪ್ನ ಚೀಫ್ ಮಾರ್ಕೆಟಿಂಗ್ ಅಂಡ್ ಬಿಸಿನೆಸ್ ಆಫೀಸರ್ ರಾಜ್ ರಿಷಿ ಸಿಂಗ್ ಹೇಳಿದ್ದಾರೆ.
#WATCH | On the row over Maldives MP’s post on PM Modi’s visit to Lakshadweep, Raj Rishi Singh, Chief Marketing and Business Officer, MakeMyTrip says “Lakshadweep has seen a remarkable 3400% increase in on-platform searches ever since PM’s visit. This inspired us to build a… pic.twitter.com/xFYSBUsitc
— ANI (@ANI) January 8, 2024
ಇದಕ್ಕೂ ಮುನ್ನ ಮತ್ತೊಂದು ಆನ್ಲೈನ್ ಟ್ರಿಪ್ ಆಯೋಜಕ ಸಂಸ್ಥೆ ಈಸ್ ಮೈ ಟ್ರಿಪ್ ಮಾಲ್ಡೀವ್ಸ್ ಸಚಿವರ ಲೇವಡಿ ಪ್ರತಿಕ್ರಿಯೆ ಬಂದ ಕೂಡಲೇ ತಮ್ಮ ಮಾಲ್ಡೀವ್ಸ್ ಫ್ಲೈಟ್ ಬುಕಿಂಗ್ಸ್ಗಳನ್ನು ನಿಲ್ಲಿಸಲು ನಿರ್ಧರಿಸಿತ್ತು. ಅಷ್ಟೇ ಅಲ್ಲ, ಮಾಲ್ಡೀವ್ಸ್ ಪ್ರವಾಸದ ಪ್ಯಾಕೇಜ್ಗಳನ್ನೂ ನಿಲ್ಲಿಸಿತು. ಲಕ್ಷದ್ವೀಪ ಪ್ರವಾಸಕ್ಕೆ ಶೀಘ್ರದಲ್ಲೇ ಆಕರ್ಷಕ ಪ್ಯಾಕೇಜ್ ಆಫರ್ ಮಾಡುವುದಾಗಿ ಈಸ್ ಮೈ ಟ್ರಿಪ್ನ ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
ಮಾಲ್ಡೀವ್ಸ್ನಷ್ಟೇ ಸುಂದರವಾದ ಪರಿಸರ, ನೀರು, ಬೀಚ್ಗಳು ಲಕ್ಷದ್ವೀಪ್ನಲ್ಲಿವೆ. ಲಕ್ಷದ್ವೀಪ ಮತ್ತು ಅಯೋಧ್ಯೆ ಅಂತಾರಾಷ್ಟ್ರೀಯ ತಾಣವಾಗಬೇಕೆಂದು ತಾವು ಬಯಸುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯರ ಕೋಪ ನ್ಯಾಯಯುತವಾಗಿದೆ: ಮಾಲ್ಡೀವ್ಸ್ ಸಂಸದೆ ಇವಾ ಅಬ್ದುಲ್ಲಾ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಸ್ನಾರ್ಕೆಲಿಂಗ್ ಇತ್ಯಾದಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಒಂದಷ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದಾದ ಬಳಿಕ ಲಕ್ಷದ್ವೀಪವು ಆನ್ಲೈನ್ನಲ್ಲಿ ಟ್ರೆಂಡಿಂಗ್ ಪದವಾಗಿ ಹೋಗಿತ್ತು. ಈ ಘಟನೆ ಬಗ್ಗೆ ಮಾಲ್ಡೀವ್ಸ್ನ ಕೆಲ ಸಚಿವರು ಹಾಗೂ ಸಂಸದರು ಮತ್ತಿತರರು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದರು. ನರೇಂದ್ರ ಮೋದಿ ಮತ್ತು ಭಾರತೀಯರ ಬಗ್ಗೆ ಲೇವಡಿ ಮಾಡಿದ್ದರು. ಭಾರತದಿಂದ ಆಕ್ಷೇಪ ವ್ಯಕ್ತವಾದ ಬಳಿಕ ಮಾಲ್ಡೀವ್ಸ್ ಸರ್ಕಾರ ಮೂವರು ಸಚಿವರನ್ನು ಅಮಾನತುಗೊಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Mon, 8 January 24