Ukraine Peace Summit: ಉಕ್ರೇನ್​ನ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗಿ, ರಷ್ಯಾಗಿಲ್ಲ ಆಹ್ವಾನ

|

Updated on: Jun 16, 2024 | 8:20 AM

ಉಕ್ರೇನ್​ ಹಾಗೂ ರಷ್ಯಾ ನಡುವಿನ ಯುದ್ಧಕ್ಕೆ ಅಂತ್ಯ ಹಾಡುವ ದೃಷ್ಟಿಯಿಂದ ಉಕ್ರೇನ್​ ಹಮ್ಮಿಕೊಂಡಿರುವ ಶಾಂತಿ ಶೃಂಗಸಭೆಯಲ್ಲಿ ಭಾರತ ಪಾಲ್ಗೊಳ್ಳುತ್ತಿದೆ. ಎರಡು ದಿನಗಳ ಕಾಲ ಸಭೆ ನಡೆಯಲಿದ್ದು, ರಷ್ಯಾಗೆ ಆಹ್ವಾನ ನೀಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನ, ಚೀನಾ ಸೇರಿ ಹಲವು ರಾಷ್ಟ್ರಗಳು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿವೆ.

Ukraine Peace Summit: ಉಕ್ರೇನ್​ನ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗಿ, ರಷ್ಯಾಗಿಲ್ಲ ಆಹ್ವಾನ
ವೊಲಿಡಿಮಿರ್ ಝೆಲೆನ್ಸ್ಕಿ
Image Credit source: India TV
Follow us on

ರಷ್ಯಾ(Russia) ಮತ್ತು ಉಕ್ರೇನ್(Ukraine) ನಡುವೆ ಕದನ ಆರಂಭವಾಗಿ 840 ದಿನಗಳು ಕಳೆದಿವೆ. ಈ ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಯುದ್ಧವನ್ನು ಶಾಂತಿಯುತವಾಗಿ ಕೊನೆಗೊಳಿಸಲು ಉಕ್ರೇನ್​ ಬಯಸಿದೆ. ಹಾಗಾಗಿ ಶಾಂತಿ ಶೃಂಸಭೆಯನ್ನು ಆಯೋಜಿಸಿದೆ. ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಶಾಂತಿ ಶೃಂಗಸಭೆ ಇಂದಿನಿಂದ ಆರಂಭವಾಗಲಿದೆ. ಭಾರತವು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ರಷ್ಯಾಗೆ ಆಹ್ವಾನ ನೀಡಿಲ್ಲ. ರಷ್ಯಾ-ಉಕ್ರೇನ್ ಶಾಂತಿ ಯೋಜನೆಯನ್ನು ರಚಿಸಲು ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನಗಳಲ್ಲಿ ಒಂದಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಔಪಚಾರಿಕ ಶಾಂತಿ ಶೃಂಗಸಭೆಗೆ ಭಾರತವನ್ನು ಆಹ್ವಾನಿಸಿದ್ದರು. ಜನವರಿ 2024 ರಲ್ಲಿ, ಸ್ವಿಸ್ ಸರ್ಕಾರವು ರಷ್ಯಾ-ಉಕ್ರೇನ್ ಯುದ್ಧದ ಶಾಂತಿ ಸೂತ್ರದ ಕುರಿತು ದೇಶವು ಜಾಗತಿಕ ಶೃಂಗಸಭೆಯನ್ನು ಆಯೋಜಿಸುತ್ತದೆ ಎಂದು ಘೋಷಿಸಿತು.

2 ದಿನಗಳ ಸುದೀರ್ಘ ಶೃಂಗಸಭೆಯು ಯುದ್ಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಜನೆಗೊಂಡ ನಾಲ್ಕನೇ ಶೃಂಗಸಭೆಯಾಗಿದೆ. ಈ ಹಿಂದೆ ಕೋಪನ್ ಹ್ಯಾಗನ್, ಜೆಡ್ಡಾ ಮತ್ತು ಮಾಲ್ಟಾದಲ್ಲಿ ಮೂರು ಶೃಂಗಸಭೆಗಳು ನಡೆದಿವೆ. ಸ್ವಿಸ್ ಅಧಿಕಾರಿಗಳು ಸಮ್ಮೇಳನಕ್ಕೆ 160 ದೇಶಗಳನ್ನು ಆಹ್ವಾನಿಸಿದ್ದಾರೆ. ಇದರಲ್ಲಿ ಭಾರತ ಸೇರಿದಂತೆ ಸುಮಾರು 90 ದೇಶಗಳ ನಾಯಕರು ಅಥವಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆದಾಗ್ಯೂ, ಅನೇಕ ಪ್ರಮುಖ ದೇಶಗಳು ಭಾಗವಹಿಸಲು ನಿರಾಕರಿಸಿದವು.

ರಷ್ಯಾದ ಪ್ರಮುಖ ಮಿತ್ರ ರಾಷ್ಟ್ರ ಚೀನಾ ಕೂಡ ಶೃಂಗಸಭೆಯಿಂದ ದೂರ ಉಳಿಯಲು ನಿರ್ಧರಿಸಿದೆ. ಸದ್ಯ ಜಿ20 ಅಧ್ಯಕ್ಷ ಬ್ರೆಜಿಲ್ ಕೂಡ ಅದನ್ನೇ ಮಾಡಿದೆ. ಅದೇ ಸಮಯದಲ್ಲಿ, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಕೂಡ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ.

ಮತ್ತಷ್ಟು ಓದಿ: ಇಸ್ರೇಲ್-ಇರಾನ್ ಯುದ್ಧಭೀತಿ: ಭಾರತ ಹಾಗೂ ಜಾಗತಿಕ ಆರ್ಥಿಕತೆ ಮೇಲೇನು ಪರಿಣಾಮ?

ಉಕ್ರೇನ್‌ನ ಅತಿದೊಡ್ಡ ಬೆಂಬಲಿಗರಾದ ಯುಎಸ್ ಅಧ್ಯಕ್ಷ ಜೋ ಬಿಡೆನ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ. ಆದರೆ, ಅವರ ಸ್ಥಾನದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಜರಾಗಲಿದ್ದಾರೆ.

ಸ್ವಿಟ್ಜರ್ಲೆಂಡ್‌ನಲ್ಲಿ ವಿಶ್ವ ನಾಯಕರ ಸಭೆಯ ರಕ್ಷಣೆಗೆ 4 ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ. ಇದಲ್ಲದೆ, ಸ್ಥಳದ ಬಳಿ ಸ್ಟೀಲ್ ರಿಂಗ್ ಅನ್ನು ಹಾಕಲಾಗಿದೆ. 6.5 ಕಿಮೀ ಸುತ್ತಲಿನ ಪ್ರದೇಶದಲ್ಲಿ ಬೇಲಿ ಹಾಕಲಾಗಿದೆ. ಇಲ್ಲಿ 8 ಕಿ.ಮೀ ಉದ್ದದ ತಂತಿಗಳ ಜಾಲವನ್ನೂ ಹಾಕಲಾಗಿದೆ.

ಸ್ವಿಸ್ ಮಿಲಿಟರಿಗೆ ಈ ಪ್ರದೇಶದಲ್ಲಿ ಭದ್ರತೆಯನ್ನು ವಹಿಸಲಾಗಿದೆ. ಅವರ ವಾಯುಪಡೆಯು ನಿರಂತರವಾಗಿ ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸ್ಥಳದ ಬಳಿ ನಿರ್ಮಿಸಲಾದ ಹೆಲಿಪೋರ್ಟ್‌ನ ರಕ್ಷಣೆಗಾಗಿ ಐದು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೇ ಡಬಲ್ ಲೇಯರ್ ಫೆನ್ಸಿಂಗ್ ಕೂಡ ನಡೆದಿದೆ.

ಶೃಂಗಸಭೆಯ ಮೊದಲು, ಪ್ರಧಾನಿ ಮೋದಿ ಅವರು ಶುಕ್ರವಾರ ಇಟಲಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದರು. ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಭಾರತ ಬೆಂಬಲಿಸುತ್ತದೆ ಎಂದು ಪ್ರಧಾನಿ ಝೆಲೆನ್ಸ್‌ಕಿ ಅವರಿಗೆ ತಿಳಿಸಿದರು. ರಾಜತಾಂತ್ರಿಕತೆ ಮತ್ತು ಮಾತುಕತೆಯಿಂದ ಮಾತ್ರ ಈ ಯುದ್ಧವನ್ನು ಕೊನೆಗೊಳಿಸಬಹುದು.

ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ