ಈಗಾಗಲೇ ಜಗತ್ತು ಎರಡು ಭಯಾನಕ ವಿಶ್ವಯುದ್ಧಗಳನ್ನು ಕಂಡಿದೆ. ಅದರ ದುಷ್ಪರಿಣಾಮದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಇದೀಗ ಮುಂದಿನ 48 ಗಂಟೆಗಳಲ್ಲಿ ಮೂರನೇ ವಿಶ್ವಯುದ್ಧ(World War 3) ನಡೆಯಬಹುದು ಎನ್ನುವ ಭವಿಷ್ಯವಾಣಿಯು ಜಗತ್ತನ್ನೇ ಆತಂಕಕ್ಕೆ ತಳ್ಳಿದೆ. ನಾಸ್ಟ್ರಾಡಾಮಸ್ ಹಾಗೂ ಬಾಬಾ ವಾಂಗಾ ಸೇರಿದಂತೆ ಅನೇಕರು ಭವಿಷ್ಯ ನುಡಿದಿದ್ದಾರೆ, ಆದರೆ ಮೂರನೇ ಯುದ್ಧದ ಕುರಿತು ಭವಿಷ್ಯ ಸತ್ಯವಾಗುವುದೇ ಎಂಬುದು ಮಾತ್ರ ಎಲ್ಲರ ಮನದಲ್ಲಿರುವ ಪ್ರಶ್ನೆಯಾಗಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕ ದಾಳಿಗಳು, ಉತ್ತರ ಕೊರಿಯಾ ಸೈನಿಕರು ದಕ್ಷಿಣ ಕೊರಿಯಾ ಗಡಿ ರೇಖೆಗಳನ್ನು ದಾಟುವುದು, ಇಸ್ರೇಲ್-ಲೆಬನಾನ್, ರಷ್ಯಾ-ಉಕ್ರೇನ್ ನಡುವಿನ ಯುದ್ಧಗಳು ಇವೆಲ್ಲವೂ ಮೂರನೇ ವಿಶ್ವಯುದ್ಧದ ಮುನ್ನುಡಿ ಎಂದು ಖ್ಯಾತ ಜ್ಯೋತಿಷಿ ಕುಶಾಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
2024ರ ವರ್ಷವು ಜಗತ್ತಿನಾದ್ಯಂತದ ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಕಳವಳಕಾರಿ ಸನ್ನಿವೇಶ ಎದುರಿಸಲಿದೆ. ಮುಖ್ಯವಾಗಿ ಮೇ 8ರ ಸುತ್ತಮುತ್ತಲಿನ ಸನ್ನಿವೇಶವು- ಕೊರಿಯಾ, ಚೀನಾ- ತೈವಾನ್, ಇಸ್ರೇಲ್ ಹಾಗೂ ಮಧ್ಯಪ್ರಾಚ್ಯದ ಇತರೆ ದೇಶಗಳನ್ನು ಒಳಗೊಂಡ ಮಧ್ಯಪ್ರಾಚ್ಯ ಯುದ್ಧ ಮತ್ತು ಉಕ್ರೇನ್- ರಷ್ಯಾದಂತಹ ಯುದ್ಧ ಪಡೆಗಳ ನಡುವೆ ತೀವ್ರ ಸ್ವರೂಪದ ಸಂಘರ್ಷ ನಡೆಯುವ ಸೂಚನೆ ನೀಡಿದೆ.
ಮತ್ತಷ್ಟು ಓದಿ: Ukraine Peace Summit: ಉಕ್ರೇನ್ನ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗಿ, ರಷ್ಯಾಗಿಲ್ಲ ಆಹ್ವಾನ
ಜೂನ್ 18ರಿಂದ ಮೂರನೇ ವಿಶ್ವಯುದ್ಧ ಪ್ರಾರಂಭವಾಗಲಿದೆ ಎಂದು ಭವಿಷ್ಯನುಡಿದಿದ್ದಾರೆ. ಜೂನ್ 9ರಂದು ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಭಾರತೀಯ ಭದ್ರತಾ ಪಡೆಗಳು ಉಗ್ರರನ್ನು ತಸ್ಥಗೊಳಿಸಿವೆ. ಮೂರನೇ ಜಾಗತಿಕ ಯುದ್ಧವು ಯಾವಾಗ ನಡೆಯಬಹುದು ಎಂಬ ದಿನಾಂಕವನ್ನು ಸಹ ಅವರು ಅಂದಾಜಿಸಿದ್ದಾರೆ. 2024ರ ಜೂನ್ 18ರ ಮಂಗಳವಾರದಂದು ಮೂರನೇ ವಿಶ್ವಯುದ್ಧಕ್ಕೆ ಉತ್ತೇಜನ ನೀಡುವಂತಹ ಪ್ರಬಲ ಗ್ರಹ ಪ್ರಚೋದಕ ಉಂಟಾಗಲಿದೆ ಎಂದು ಹೇಳಿದ್ದಾರೆ.
ಜೂನ್ 10 ಮತ್ತು 29ರ ದಿನಾಂಕಗಳಲ್ಲಿ ಕೂಡ ಈ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಜೂನ್ 18 ಅತಿ ಪ್ರಬಲ ಸಂಭಾವ್ಯತೆ ಹೊಂದಿದೆ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಮೂರನೇ ವಿಶ್ವಯುದ್ಧ ನಡೆಯಲಿದೆಯೇ ಎನ್ನುವ ಅನುಮಾನ ದಟ್ಟವಾಗಿ ಕಾಡಿದೆ. ಕೆಲವು ದೇಶಗಳ ಆಡಳಿತದ ಅಧಿಕಾರ ಹೊಂದಿರುವ ಕೆಲವು ವ್ಯಕ್ತಿಗಳಿಗೆ ಮುಂದೆ ಎದುರಾಗುತ್ತಿರುವ ಪ್ರಮುಖ ಆತಂಕಕಾರಿ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ