ಪಾಪಾ ಕಾಗೆಗಳು ಏನು ಮಾಡಿದವು ಇವರಿಗೆ? 10 ಲಕ್ಷ ಕಾಗೆಗಳನ್ನು ಸಾಯಿಸುವಂತೆ ಆದೇಶಿಸಿದೆ ಕೀನ್ಯಾ ಸರ್ಕಾರ!
Indian crows in Kenya: ಈ ಕಾಗೆಗಳ ಹಾವಳಿ ಬಗ್ಗೆ ರೈತರು ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಬೆಳೆಗಳನ್ನು ಮೊಳಕೆಯಲ್ಲೇ ಚಿವುಟಿ ತಿನ್ನುವ ಆಕ್ರಮಣಕಾರಿ ಪಕ್ಷಿ ಪ್ರಭೇದಗಳು ಈ ಕಾಗೆಗಳಾಗಿವೆ ಎಂದು ದೂರಿದ್ದಾರೆ. ಹಾಗಾಗಿ ಕೀನ್ಯಾ ಕೀಟ ನಿಯಂತ್ರಣ ಮತ್ತು ಉತ್ಪನ್ನಗಳ ಮಂಡಳಿಯು ಕಾಗೆಗಳನ್ನು ಕೊಲ್ಲಲು ಹೋಟೆಲ್ ಮಾಲೀಕರಿಗೆ ವಿಷ ಆಮದು ಮಾಡಿಕೊಳ್ಳಲು ಹಸಿರು ನಿಶಾನೆ ತೋರಿಸಿದೆ. ಜೊತೆಗೆ ಪಕ್ಷಿಗಳನ್ನು ಕೊಲ್ಲಲು ಯಾಂತ್ರಿಕ ವಿಧಾನ ಬಳಸಲು ಉತ್ಸುಕವಾಗಿದೆ ಎಂದೂ ತಿಳಿದುಬಂದಿದೆ.
ಕೀನ್ಯಾದಲ್ಲಿ ಭಾರತೀಯ ಕಾಗೆಗಳಿಗೆ (Indian crows) ಕೆಟ್ಟ ಸುದ್ದಿ ಬಡಿದಿದೆ. ಮುಂದಿನ ಆರು ತಿಂಗಳಲ್ಲಿ ಒಂದು ಮಿಲಿಯನ್ ಕಾಗೆಗಳನ್ನು ಕೊಲ್ಲುವುದಾಗಿ ಆ ದೇಶ ಪ್ರತಿಜ್ಞೆ ಮಾಡಿದೆ. ಹೌದು ಕೀನ್ಯಾ ಸರ್ಕಾರವು (Kenya govt) ಭಾರತೀಯ ಮೂಲದ ಈ ಪಕ್ಷಿ ಪ್ರಭೇದದ ಮೇಲೆ ಯುದ್ಧವನ್ನು ಘೋಷಿಸಿದೆ. 2024 ರ ಅಂತ್ಯದ ವೇಳೆಗೆ ಅವುಗಳಲ್ಲಿ ಒಂದು ಮಿಲಿಯನ್ ಅನ್ನು ತೊಡೆದುಹಾಕಲು ಕ್ರಿಯಾ ಯೋಜನೆಯನ್ನು ಪ್ರಕಟಿಸಿದೆ. ಭಾರತೀಯ ಮೂಲದ ಕಾಗೆಗಳು ನಮ್ಮ ಪರಿಸರ ವ್ಯವಸ್ಥೆಗೆ ಮಾರಕವಾಗಿದೆ ಎಂದು ಸ್ಪಷ್ಟಪಡಿಸಿರುವ ಕೀನ್ಯಾ ವನ್ಯಜೀವಿ ಸೇವೆ (KWS) ಇಂಡಿಯನ್ ಹೌಸ್ ಕ್ರೌಸ್ (ಕೊರ್ವಸ್ ಸ್ಪ್ಲೆಂಡೆನ್ಸ್) ಈ ಕಾಗೆಗಳು ತುಂಬಾ ಆಕ್ರಮಣಕಾರಿಯಾಗಿವೆ. ದಶಕಗಳಿಂದಲೂ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸ್ಥಳೀಯ ಪಕ್ಷಿಗಳ ಸಂತತಿ ಮೇಲೆ ಮೇಲೆ ಭೀಕರ ಪರಿಣಾಮ ಬೀರುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
KWS ಮಹಾನಿರ್ದೇಶಕ ಮತ್ತು ಸಮುದಾಯ ಸೇವೆಯ ನಿರ್ದೇಶಕ ಚಾರ್ಲ್ಸ್ ಮುಸ್ಯೋಕಿ, ಕೀನ್ಯಾದ ಕರಾವಳಿ ಪ್ರದೇಶದಲ್ಲಿ ಹೊಟೇಲ್ ಉದ್ಯಮಿಗಳು ಮತ್ತು ರೈತರು ಕಾಗೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಕಾಗೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಕೆಡಬ್ಲ್ಯೂಎಸ್ ಪ್ರಕಾರ ಭಾರತೀಯ ಕಾಗೆಗಳು ಅಳಿವಿನಂಚಿನಲ್ಲಿರುವ ಸ್ಥಳೀಯ ಪಕ್ಷಿ ಪ್ರಭೇದಗಳನ್ನು ಬೇಟೆಯಾಡುವ ಅಪಾಯಕಾರಿ ಪ್ರವೃತ್ತಿ ಬೆಳೆಸಿಕೊಂಡಿರುವುದು ಸ್ಥಳೀಯ ಜನರಿಗೆ ಆತಂಕ ತಂದೊಡ್ಡಿದೆ.
ಭಾರತೀಯ ಪ್ರಭೇದಗಳು ಕೀನ್ಯಾದ ಕರಾವಳಿಯಲ್ಲಿ ಸಣ್ಣ ಸಣ್ಣ ಸ್ಥಳೀಯ ಪಕ್ಷಿಗಳ ಗೂಡುಗಳನ್ನು ನಾಶಪಡಿಸುವ ಮೂಲಕ ಮತ್ತು ಅವುಗಳ ಮೊಟ್ಟೆಗಳು ಮತ್ತು ಮರಿಗಳನ್ನು ಬೇಟೆಯಾಡುವ ಮೂಲಕ ಅದರ ಸಂತತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಸ್ಥಳೀಯ ಪಕ್ಷಿಗಳಾದ ಸ್ಕೇಲಿ ಬ್ಯಾಬ್ಲರ್‌ಗಳು (ಟರ್ಡೋಯಿಡ್ಸ್ ಸ್ಕ್ವಾಮುಲಾಟಾ), ಪೈಡ್ ಕಾಗೆಗಳು (ಕೊರ್ವಸ್ ಆಲ್ಬಸ್), ಇಲಿ-ಬಣ್ಣದ ಸನ್‌ಬರ್ಡ್ಸ್ (ಸೈನೋಮಿಟ್ರಾ ವೆರಾಕ್ಸಿ), ನೇಕಾರ ಹಕ್ಕಿಗಳು (ಪ್ಲೋಸಿಡೆ), ಸಾಮಾನ್ಯ ಮೇಣದಬತ್ತಿಗಳು (ಎಸ್ಟ್ರಿಲ್ಡಾ ಆಸ್ಟ್ರಿಲ್ಡ್) ಮತ್ತು ವಿವಿಧ ಜಲವಾಸಿ ಪಕ್ಷಿಗಳು ಕಾಗೆಯಿಂದ ತೀವ್ರ ಬಾಧೆಗೆ ತುತ್ತಾದ ಪಕ್ಷಿಗಳಾಗಿವೆ.
Also Read: ಕಾಗೆಗಳಿಗೆ ಪಿಂಡ ಇಡುವುದೇಕೆ? ಈ ಸಂಪ್ರದಾಯಕ್ಕೂ ಶ್ರೀರಾಮನಿಗೂ ಇದೆ ಸಂಬಂಧ!
ಭಾರತೀಯ ಮೂಲದ ಕಾಗೆ, ಬೂದು-ಕುತ್ತಿಗೆಯ ಕಾಗೆ, ಸಿಲೋನ್ ಕಾಗೆ ಮತ್ತು ಕೊಲಂಬೊ ಕಾಗೆ ಮುಂತಾದ ವಿವಿಧ ಹೆಸರುಗಳಿಂದ ಕೂಡ ಇಲ್ಲಿನ ಕಾಗೆಗಳನ್ನು ಕರೆಯಲ್ಪಡುತ್ತದೆ – ಭಾರತ ಮತ್ತು ಏಷ್ಯಾದ ಇತರ ಭಾಗಗಳಿಂದ ಇವು ಹುಟ್ಟು ಪಡೆದುಕೊಂಡಿವೆ.
ಭಾರತೀಯ ಕಾಗೆಗಳು 1940 ರ ದಶಕದಲ್ಲಿ ಪೂರ್ವ ಆಫ್ರಿಕಾಕ್ಕೆ ವಲಸೆ ಬಂದುದಾಗಿವೆ ಎಂದು ತಿಳಿದುಬಂದಿದೆ. ಕೀನ್ಯಾದಲ್ಲಿ ಮಾತ್ರವಲ್ಲದೆ ಉಷ್ಣವಲಯದಾದ್ಯಂತ ಗಮನಾರ್ಹ ಆಕ್ರಮಣಕಾರಿ ಸಾಮರ್ಥ್ಯವನ್ನು ಇವು ಪ್ರದರ್ಶಿಸುತ್ತಿವೆ. ಆಕ್ರಮಣಕಾರಿ ಕಾಗೆಗಳ ಜನಸಂಖ್ಯೆಯು ಸಂರಕ್ಷಿತ ರಾಷ್ಟ್ರೀಯ ಮೀಸಲು ಪ್ರದೇಶಗಳಂತಹ ವಿಶೇಷ ಆವಾಸಸ್ಥಾನಗಳನ್ನು ಆಕ್ರಮಿಸಬಹುದೆಂದು ಸಂರಕ್ಷಣಾಕಾರರು ಭೀತಿ ವ್ಯಕ್ತಪಡಿಸಿದ್ದಾರೆ. ಅಪರೂಪದ, ಅನನ್ಯ ಅಥವಾ ಕೊನೆಯ ಜಾತಿಯ ನಶಿಸುತ್ತಿರುವ ತಳಿಗಳಾದ ಸೊಕೊಕೆ ಸ್ಕೋಪ್ಸ್ ಗೂಬೆ (ಓಟಸ್ ಅರೇನೇ) ನಂತಹವು ಭಾರೀ ಹಾನಿಯನ್ನುಂಟುಮಾಡುತ್ತದೆ.
ಡಯಾಸ್ಪೊರಾ ರವಾನೆ ಮತ್ತು ಕೃಷಿ ರಫ್ತುಗಳ ನಂತರ ಪ್ರವಾಸೋದ್ಯಮವು ಕೀನ್ಯಾದ ವಿದೇಶಿ ವಿನಿಮಯ ಗಳಿಕೆಯ ಮೂರನೇ ಅತಿ ದೊಡ್ಡ ಶಕ್ತಿಯಾಗಿದೆ. ಭಾರತೀಯ ಕಾಗೆಗಳು ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮಗಳಿಗೆ ಗಮನಾರ್ಹ ತೊಂದರೆಯನ್ನು ಉಂಟುಮಾಡುತ್ತಿವೆ. ಪ್ರವಾಸಿಗರು ಹೋಟೆಲು ಪ್ರದೇಶಗಳಲ್ಲಿ ಊಟ ಮಾಡುವುದಕ್ಕೂ ಅಡ್ಡಿಪಡಿಸುತ್ತವೆ ಎಂದು ಕೀನ್ಯಾ ಹೋಟೆಲ್ ಮಾಲೀಕರು ದೂರಿದ್ದಾರೆ.
ಇದನ್ನೂ ಓದಿ: June 2024 Festival Calendar – ಜೂನ್ 2024 ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಈ ಕಾಗೆಗಳ ಹಾವಳಿ ಬಗ್ಗೆ ರೈತರು ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಬೆಳೆಗಳನ್ನು ಮೊಳಕೆಯಲ್ಲೇ ಚಿವುಟಿ ತಿನ್ನುವ ಆಕ್ರಮಣಕಾರಿ ಪಕ್ಷಿ ಪ್ರಭೇದಗಳು ಈ ಕಾಗೆಗಳಾಗಿವೆ ಎಂದು ದೂರಿದ್ದಾರೆ.
ಇನ್ನು ಆಕ್ರಮಣಕಾರಿ ಕಾಗೆ ಪ್ರಭೇದವನ್ನು ನಿಯಂತ್ರಿಸಲು ಕೀನ್ಯಾ ಸರ್ಕಾರವು ಯೋಜನೆ ಪ್ರಾರಂಭಿಸಿರುವುದು ಇದೇ ಮೊದಲಲ್ಲ. 20 ವರ್ಷಗಳ ಹಿಂದೆ ಹಿಂದಿನ ಇಂತಹುದೇ ಪ್ರಯತ್ನವು ಕಾಗೆಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ KWS ಪ್ರಕಾರ, ಕಾಗೆಗಳು ಮಾನವ ಸ್ಥಳಗಳೊಂದಿಗೆ ಗಮನಾರ್ಹವಾದ ಹೊಂದಾಣಿಕೆ ಸ್ವಭಾವವನ್ನು ಹೊಂದಿವೆ. ಅವುಗಳ ಸಂಖ್ಯೆ ಏರುಗತಿಯಲ್ಲೇ ಇದೆ. ಈ ಘಾತೀಯ ಏರಿಕೆಯಿಂದಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸುವುದು ಈಗ ಅಗತ್ಯವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಕೀನ್ಯಾ ಕೀಟ ನಿಯಂತ್ರಣ ಮತ್ತು ಉತ್ಪನ್ನಗಳ ಮಂಡಳಿಯು (ಪಿಸಿಪಿಬಿ) ಕಾಗೆಗಳನ್ನು ಕೊಲ್ಲಲು ಹೋಟೆಲ್ ಮಾಲೀಕರಿಗೆ ಪರವಾನಗಿ ಪಡೆದ ವಿಷವನ್ನು ಆಮದು ಮಾಡಿಕೊಳ್ಳಲು ಹಸಿರು ನಿಶಾನೆ ತೋರಿಸಿದೆ. ಜೊತೆಗೆ ಪಕ್ಷಿಗಳನ್ನು ಕೊಲ್ಲಲು ಯಾಂತ್ರಿಕ ವಿಧಾನಗಳನ್ನು ಬಳಸಲು ಉತ್ಸುಕವಾಗಿದೆ ಎಂದೂ ತಿಳಿದುಬಂದಿದೆ.
ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ