ಶ್ವೇತಭವನಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಎಂಟ್ರಿ! ನೀರಾ ಟಂಡನ್ ಅಧ್ಯಕ್ಷ ಜೋ ಬೈಡನ್​ಗೆ ಹಿರಿಯ ಸಲಹೆಗಾರ್ತಿ!

|

Updated on: May 15, 2021 | 10:37 AM

Indian-American Neera Tanden: ಭಾರತೀಯ ಮೂಲದವರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಭಾರತೀಯ ಮೂಲದ ಮಹಿಳೆಯೊಬ್ಬರು ಶ್ವೇತಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೀರಾ ಟಂಡನ್ ಅವರನ್ನು ತಮ್ಮ ಹಿರಿಯ ಸಲಹೆಗಾರ್ತಿಯನ್ನಾಗಿ ಅಧ್ಯಕ್ಷ ಜೋ ಬೈಡನ್​ ನೇಮಿಸಿದ್ದಾರೆ

ಶ್ವೇತಭವನಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಎಂಟ್ರಿ! ನೀರಾ ಟಂಡನ್ ಅಧ್ಯಕ್ಷ ಜೋ ಬೈಡನ್​ಗೆ ಹಿರಿಯ ಸಲಹೆಗಾರ್ತಿ!
ನೀರಾ ಟಂಡನ್ ಅಧ್ಯಕ್ಷ ಜೋ ಬೈಡನ್​ಗೆ ಹಿರಿಯ ಸಲಹೆಗಾರ್ತಿ!
Follow us on

ವಾಷಿಂಗ್ಟನ್: ಭಾರತೀಯ ಮೂಲದವರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಭಾರತೀಯ ಮೂಲದ ಮಹಿಳೆಯೊಬ್ಬರು ಶ್ವೇತಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೀರಾ ಟಂಡನ್ ಅವರನ್ನು ತಮ್ಮ ಹಿರಿಯ ಸಲಹೆಗಾರ್ತಿಯನ್ನಾಗಿ ಅಧ್ಯಕ್ಷ ಜೋ ಬೈಡನ್​ ನೇಮಿಸಿಕೊಂಡಿದ್ದಾರೆ.

ಭಾರತೀಯ ಮೂಲದ ನೀರಾ ಟಂಡನ್ (Indian-American Neera Tanden) ಅವರು ಶ್ವೇತಭವನದಲ್ಲಿ ಮ್ಯಾನೇಜ್ಮೆಂಟ್​ ಅಂಡ್​ ಬಡ್ಜೆಟ್​ ಆಫೀಸ್​ (Office of Management and Budget -OMB) ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಉಮೇದುವಾರಿಕೆಯನ್ನು ವಾಪಸ್​ ಪಡದ ಬಳಿಕ ಅಧ್ಯಕ್ಷ ಜೋ ಬೈಡನ್​ ಅಧಿಕೃತವಾಗಿ ಹೊಸ ನೇಮಕ ಘೋಷಣೆ ಮಾಡಿದ್ದಾರೆ.

ಮೆಸಾಚ್ಯುಸೆಟ್ಸ್​​ನಲ್ಲಿ ಜನಿಸಿದ ನೀರಾ ಟಂಡನ್ (50 ವರ್ಷ) OMB ವಿಭಾಗದಲ್ಲಿ ಅಮೆರಿಕದ ಅಧ್ಯಕ್ಷರಿಗೆ  ಸಲಹೆಗಾರ್ತಿಯಾಗಿ ನೇಮಕವಾದ ಮೊದಲ ದಕ್ಷಿಣ ಏಷ್ಯಾ ಮಹಿಳೆ ಎನಿಸಿದ್ದಾರೆ. ನೀರಾ ಪತಿ ಬೆಂಜಮಿನ್ ಎಡ್ವರ್ಡ್ಸ್​ ಚಿತ್ರ ಕಲಾವಿದರಾಗಿದ್ದಾರೆ.  ಒಬಾಮಾ-ಬೈಡನ್ ಅಧ್ಯಕ್ಷೀಯ ಚುನಾವಣಾ ಪ್ರಚಾರ ವೇಳೆ ದೇಶೀಯ ನೀತಿನಿರೂಪಣೆ ಹೊಣೆ ಹೊತ್ತಿದ್ದರು. ಹಿಲರಿ ಕ್ಲಿಂಟನ್​ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇನ್ನು 2016ರಲ್ಲಿ ಡೊನಾಲ್ಡ್​ ಟ್ರಂಪ್​ ವಿರುದ್ಧ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ನೀರಾ ಟಂಡನ್ ಅವರ ಬುದ್ಧಿಮತ್ತೆ, ಚಾತುರ್ಯ ಮತ್ತು ರಾಜಕೀಯ ಜ್ಞಾನ ಅವರನ್ನುಈ ಹುದ್ದೆಯ ವರೆಗೂ ತಂದಿದೆ. ಅಧ್ಯಕ್ಷ ಜೋ ಬೈಡನ್​ ಅವರಿಗೆ ಹಿರಿಯ ಸಲಹೆಗಾರ್ತಿಯಾಗುವ ಮೂಲಕ ಅಮೆರಿಕದ ಅಧ್ಯಕ್ಷರಿಗೆ ಬಲ ತುಂಬಲಿದ್ದಾರೆ. ಅವರ ಅನುಭವದಿಂದ ಅಮೆರಿಕಕ್ಕೆ ಉತ್ತಮ ಸೇವೆ ಲಭಿಸಲಿದೆ ಎಂದು ಫೌಂಡರ್​ ಫಾರ್​ ದಿ ಅಮರಿಕನ್​ ಪ್ರೋಗ್ರೆಸ್​ (CAP) ಜಾನ್ ಪೊಡೆಸ್ತಾ ಪ್ರಕಟಣೆಯಲ್ಲಿ ಆಶಿಸಿದ್ದಾರೆ.

ನೀರಾ ಟಂಡನ್ ಆರು ತಿಂಗಳ ಹಿಂದೆ ಮಾಡಿದ್ದ ಹಳೆಯ ಟ್ವೀಟ್​ ಇಲ್ಲಿದೆ:

(Indian American Neera Tanden joins White House as a senior adviser to President Joe Biden)

ವಿವಿಧ ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ 200ಕ್ಕೂ ಹೆಚ್ಚು ಭಾರತೀಯ ಮೂಲದವರು; ಪಟ್ಟಿ ಬಿಡುಗಡೆ ಮಾಡಿದ ಎನ್​ಜಿಒ

Published On - 10:28 am, Sat, 15 May 21