Nepal Political Crisis: ಕೆಪಿ ಶರ್ಮಾ ಒಲಿಗೆ ಮತ್ತೆ ಒಲಿದ ನೇಪಾಳದ ಪ್ರಧಾನಿ ಪಟ್ಟ

KP Sharma Oli: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ರಾಜೀನಾಮೆ ಕೊಟ್ಟ ಒಂದು ವಾರದಲ್ಲಿ ಕೆ.ಪಿ. ಶರ್ಮಾ ಒಲಿ ಅವರನ್ನು ಮತ್ತೆ ಪ್ರಧಾನಿ ಆಗಿ ನೇಮಿಸಲಾಗಿದೆ. ಇಂದು ಮಧ್ಯಾಹ್ನ ಅವರು ಮತ್ತೆ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದರು.

Nepal Political Crisis: ಕೆಪಿ ಶರ್ಮಾ ಒಲಿಗೆ ಮತ್ತೆ ಒಲಿದ ನೇಪಾಳದ ಪ್ರಧಾನಿ ಪಟ್ಟ
ಕೆ.ಪಿ.ಶರ್ಮಾ ಓಲಿ
Follow us
|

Updated on:May 14, 2021 | 4:20 PM

ಸಂಸತ್ತಿನಲ್ಲಿ ವಿಶ್ವಾಸ ಮತ ಸೋತು ಕೆಲದಿನಗಳ ಹಿಂದೆ ರಾಜೀನಾಮೆ ಕೊಟ್ಟಿದ್ದ ಕೆಪಿ ಶರ್ಮಾ ಒಲಿ ಅವರಿಗೆ ನೇಪಾಳದ ಪ್ರಧಾನಿ ಪಟ್ಟ ಮತ್ತೆ ಒಲಿದು ಬಂದಿದೆ. ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚಿಸುವಲ್ಲಿ ವಿಫಲವಅದ ಹಿನ್ನೆಲೆಯಲ್ಲಿ, ಓಲಿ ನೇಪಾಳದ ಪ್ರಧಾನ ಮಂತ್ರಿಯಾಗಿ ಶುಕ್ರವಾರ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಹೊಸ ಸರ್ಕಾರ ರಚಿಸಲು ಸಂಸತ್ತಿನಲ್ಲಿ ಬಹುಮತದ ಸ್ಥಾನಗಳನ್ನು ಪಡೆಯಲು ಪ್ರತಿಪಕ್ಷಗಳು ವಿಫಲವಾದ ಕಾರಣ ಗುರುವಾರ ರಾತ್ರಿ ಅವರನ್ನು ಮತ್ತೆ ನೇಮಕ ಮಾಡಿದ ನಂತರ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರು ಶಿತಲ್ ನಿವಾಸ್‌ನಲ್ಲಿ ನಡೆದ ಸಮಾರಂಭದಲ್ಲಿ 69 ವರ್ಷದ ಓಲಿ ಅವರಿಗೆ ಪ್ರಮಾಣವಚನ ಮತ್ತು ಅಧಿಕಾರದ ಗೌಪ್ಯತೆಯ ವಚನ ಬೋಧಿಸಿದರು. ಕಳೆದ ಸೋಮವಾರ, ಸಿಪಿಎನ್-ಯುಎಂಎಲ್ ಅಧ್ಯಕ್ಷರಾದ ಓಲಿ ಅವರು ಸೋಮವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ನಿರ್ಣಾಯಕ ವಿಶ್ವಾಸ ಮತವನ್ನು ಗಳಿಸುವಲ್ಲಿ ವಿಫಲರಾದರು. ಸಂವಿಧಾನದ ಪ್ರಕಾರ ಮುಂದಿನ 30 ದಿನಗಳಲ್ಲಿ ಓಲಿ ಸದನದಲ್ಲಿ ವಿಶ್ವಾಸ ಮತ ಗೆಲ್ಲಬೇಕಾಗುತ್ತದೆ ಮತ್ತು ಅದು ವಿಫಲವಾದರೆ, ಸಂವಿಧಾನದ 76 (5) ನೇ ವಿಧಿ ಅಡಿಯಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಪ್ರಯತ್ನವನ್ನು ಮಾಡಲು ಅವಕಾಶವಿದೆ. ಓಲಿ, ಈ ಹಿಂದೆ ಅವರು ಅಕ್ಟೋಬರ್ 11, 2015 ರಿಂದ ಆಗಸ್ಟ್ 3, 2016 ರವರೆಗೆ ಮತ್ತು ಮತ್ತೆ ಫೆಬ್ರವರಿ 15, 2018 ರಿಂದ ಮೇ 13, 2021 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಸೋಮವಾರ ಒಲಿ ಅವರು ಸದನದಲ್ಲಿ ವಿಶ್ವಾಸಮತವನ್ನು ಕಳೆದುಕೊಂಡ ನಂತರ ಗುರುವಾರ ರಾತ್ರಿ 9 ಗಂಟೆಯೊಳಗೆ ಹೊಸ ಸರ್ಕಾರ ರಚಿಸಲು ನೇಪಾಳದ ಅಧ್ಯಕ್ಷ, ಬಿದ್ಯಾ ದೇವಿ ಭಂಡಾರಿ ಪ್ರತಿಗಳಿಗೆ ಸೂಚಿಸಿದ್ದರು. ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷ ಪುಷ್ಪಕಮಲ್ ದಹಲ್ “ಪ್ರಚಂಡ” ಅವರ ಬೆಂಬಲ ಪಡೆದ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇಬಾ ಅವರು ಗುರುವಾರ ತನಕ ಮುಂದಿನ ಪ್ರಧಾನಿಯಾಗಲು ಬೇಕಾಗುವ ವಿಶ್ವಾಸ ಮತಗಳನ್ನು ಪಡೆಯುವ ಭರವಸೆ ಹೊಂದಿದ್ದರು.

ಆದರೆ ಮಾಧವ್ ಕುಮಾರ್ ನೇಪಾಳ್​, ಓಲಿಯೊಂದಿಗಿನ ಕೊನೆಯ ನಿಮಿಷದ ಭೇಟಿಯ ನಂತರ ಯು-ಟರ್ನ್ ತೆಗೆದುಕೊಂಡಂತೆ, ಮುಂದಿನ ಪ್ರಧಾನಿಯಾಗಬೇಕೆಂಬ ದೇಬಾ ಅವರ ಕನಸು ಚೂರುಚೂರಾಯಿತು. ಸಿಪಿಎನ್-ಯುಎಂಎಲ್ 271 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ 121 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದೆ. ಬಹುಮತದ ಸರ್ಕಾರ ರಚಿಸಲು ಪ್ರಸ್ತುತ 136 ಮತಗಳು ಬೇಕಾಗುತ್ತವೆ. ಆಡಳಿತಾರೂಢ ನೇಪಾಳಿ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಅಧಿಕಾರಕ್ಕಾಗಿ ನಡೆದ ಜಗಳದ ಮಧ್ಯೆ, ಅಧ್ಯಕ್ಷ ಭಂಡಾರಿ ಅವರು ಸದನವನ್ನು ವಿಸರ್ಜಿಸಿ, ಏಪ್ರಿಲ್ 30 ಮತ್ತು ಮೇ 10 ರಂದು ಪ್ರಧಾನಿ ಓಲಿಯವರ ಶಿಫಾರಸ್ಸಿನ ಮೇರೆಗೆ ಹೊಸ ಚುನಾವಣೆಗಳನ್ನು ಘೋಷಿಸಿದ ನಂತರ ನೇಪಾಳ ರಾಜಕೀಯ ಬಿಕ್ಕಟ್ಟಿನಲ್ಲಿ ಮುಳುಗಿತು. ಸದನವನ್ನು ವಿಸರ್ಜಿಸಿದ ಕ್ರಮವನ್ನು ಪ್ರತಿಭಟಿಸಿ ‘ಪ್ರಚಂಡ’ ನೇತೃತ್ವದ ಎನ್‌ಸಿಪಿಯು ಪ್ರತಿಭಟನೆ ಶುರು ಮಾಡಿತು. ಅಧ್ಯಕ್ಷರು ವಿಸರ್ಜಿಸಿದ ಸದನವನ್ನು ಫೆಬ್ರವರಿಯಲ್ಲಿ, ಸುಪ್ರೀಂ ಕೋರ್ಟ್ ಪುನಃ ಸ್ಥಾಪಿಸಿತ್ತು.

ಇದನ್ನೂ ಓದಿ:

ವಿಶ್ವಾಸಮತ ಕಳೆದುಕೊಂಡ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ

Yash: ನೇಪಾಳದಲ್ಲೂ ಯಶ್​ ಹವಾ! ದೇಶ-ಭಾಷೆ ಮೀರಿದ ಅಭಿಮಾನಕ್ಕೆ ಇಲ್ಲಿದೆ ಲೇಟೆಸ್ಟ್​​ ಉದಾಹರಣೆ

(Nepal Political Crisis OP Sharma Oli has been sworn in as Prime Minister within a week after he resigned)

Published On - 4:17 pm, Fri, 14 May 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್