ಶ್ವೇತಭವನಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಎಂಟ್ರಿ! ನೀರಾ ಟಂಡನ್ ಅಧ್ಯಕ್ಷ ಜೋ ಬೈಡನ್ಗೆ ಹಿರಿಯ ಸಲಹೆಗಾರ್ತಿ!
Indian-American Neera Tanden: ಭಾರತೀಯ ಮೂಲದವರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಭಾರತೀಯ ಮೂಲದ ಮಹಿಳೆಯೊಬ್ಬರು ಶ್ವೇತಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೀರಾ ಟಂಡನ್ ಅವರನ್ನು ತಮ್ಮ ಹಿರಿಯ ಸಲಹೆಗಾರ್ತಿಯನ್ನಾಗಿ ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದಾರೆ
ವಾಷಿಂಗ್ಟನ್: ಭಾರತೀಯ ಮೂಲದವರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಭಾರತೀಯ ಮೂಲದ ಮಹಿಳೆಯೊಬ್ಬರು ಶ್ವೇತಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೀರಾ ಟಂಡನ್ ಅವರನ್ನು ತಮ್ಮ ಹಿರಿಯ ಸಲಹೆಗಾರ್ತಿಯನ್ನಾಗಿ ಅಧ್ಯಕ್ಷ ಜೋ ಬೈಡನ್ ನೇಮಿಸಿಕೊಂಡಿದ್ದಾರೆ.
ಭಾರತೀಯ ಮೂಲದ ನೀರಾ ಟಂಡನ್ (Indian-American Neera Tanden) ಅವರು ಶ್ವೇತಭವನದಲ್ಲಿ ಮ್ಯಾನೇಜ್ಮೆಂಟ್ ಅಂಡ್ ಬಡ್ಜೆಟ್ ಆಫೀಸ್ (Office of Management and Budget -OMB) ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಉಮೇದುವಾರಿಕೆಯನ್ನು ವಾಪಸ್ ಪಡದ ಬಳಿಕ ಅಧ್ಯಕ್ಷ ಜೋ ಬೈಡನ್ ಅಧಿಕೃತವಾಗಿ ಹೊಸ ನೇಮಕ ಘೋಷಣೆ ಮಾಡಿದ್ದಾರೆ.
ಮೆಸಾಚ್ಯುಸೆಟ್ಸ್ನಲ್ಲಿ ಜನಿಸಿದ ನೀರಾ ಟಂಡನ್ (50 ವರ್ಷ) OMB ವಿಭಾಗದಲ್ಲಿ ಅಮೆರಿಕದ ಅಧ್ಯಕ್ಷರಿಗೆ ಸಲಹೆಗಾರ್ತಿಯಾಗಿ ನೇಮಕವಾದ ಮೊದಲ ದಕ್ಷಿಣ ಏಷ್ಯಾ ಮಹಿಳೆ ಎನಿಸಿದ್ದಾರೆ. ನೀರಾ ಪತಿ ಬೆಂಜಮಿನ್ ಎಡ್ವರ್ಡ್ಸ್ ಚಿತ್ರ ಕಲಾವಿದರಾಗಿದ್ದಾರೆ. ಒಬಾಮಾ-ಬೈಡನ್ ಅಧ್ಯಕ್ಷೀಯ ಚುನಾವಣಾ ಪ್ರಚಾರ ವೇಳೆ ದೇಶೀಯ ನೀತಿನಿರೂಪಣೆ ಹೊಣೆ ಹೊತ್ತಿದ್ದರು. ಹಿಲರಿ ಕ್ಲಿಂಟನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇನ್ನು 2016ರಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ನೀರಾ ಟಂಡನ್ ಅವರ ಬುದ್ಧಿಮತ್ತೆ, ಚಾತುರ್ಯ ಮತ್ತು ರಾಜಕೀಯ ಜ್ಞಾನ ಅವರನ್ನುಈ ಹುದ್ದೆಯ ವರೆಗೂ ತಂದಿದೆ. ಅಧ್ಯಕ್ಷ ಜೋ ಬೈಡನ್ ಅವರಿಗೆ ಹಿರಿಯ ಸಲಹೆಗಾರ್ತಿಯಾಗುವ ಮೂಲಕ ಅಮೆರಿಕದ ಅಧ್ಯಕ್ಷರಿಗೆ ಬಲ ತುಂಬಲಿದ್ದಾರೆ. ಅವರ ಅನುಭವದಿಂದ ಅಮೆರಿಕಕ್ಕೆ ಉತ್ತಮ ಸೇವೆ ಲಭಿಸಲಿದೆ ಎಂದು ಫೌಂಡರ್ ಫಾರ್ ದಿ ಅಮರಿಕನ್ ಪ್ರೋಗ್ರೆಸ್ (CAP) ಜಾನ್ ಪೊಡೆಸ್ತಾ ಪ್ರಕಟಣೆಯಲ್ಲಿ ಆಶಿಸಿದ್ದಾರೆ.
ನೀರಾ ಟಂಡನ್ ಆರು ತಿಂಗಳ ಹಿಂದೆ ಮಾಡಿದ್ದ ಹಳೆಯ ಟ್ವೀಟ್ ಇಲ್ಲಿದೆ:
After my parents were divorced when I was young, my mother relied on public food and housing programs to get by. Now, I’m being nominated to help ensure those programs are secure, and ensure families like mine can live with dignity. I am beyond honored.
— Neera Tanden (@neeratanden) November 30, 2020
(Indian American Neera Tanden joins White House as a senior adviser to President Joe Biden)
ವಿವಿಧ ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ 200ಕ್ಕೂ ಹೆಚ್ಚು ಭಾರತೀಯ ಮೂಲದವರು; ಪಟ್ಟಿ ಬಿಡುಗಡೆ ಮಾಡಿದ ಎನ್ಜಿಒ
Published On - 10:28 am, Sat, 15 May 21