‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ

|

Updated on: Mar 05, 2021 | 11:07 AM

‘ನಾಸಾದ ಡಾ.ಸ್ವಾತಿ ಮೋಹನ್ ನಾಸಾದ ರೋವರ್ಸ್ ನೌಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದೀರಿ, ದೇಶದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತ ಮೂಲದವರು. ಅಲ್ಲದೆ, ನನ್ನ ಭಾಷಣ ಬರಹಗಾರರಾದ ವಿನಯ್ ರೆಡ್ಡಿ ಅವರು ಭಾರತೀಯ ಮೂಲದವರೇ ಆಗಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತೀಯರ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ
ಭಾರತೀಯ ಮೂಲದ ಅಮೆರಿಕನ್ನರ ಕುರಿತು ಶ್ಲಾಘನೆ ವ್ಯಕ್ತವಾಗಿದೆ.
Follow us on

ವಾಷಿಂಗ್ಟನ್ ಡಿ ಸಿ: ‘ಭಾರತೀಯ ಮೂಲದ ಅಮೆರಿಕನ್ನರು ಆಡಳಿತದ ಹುದ್ದೆಗಳನ್ನು ಅಲಂಕರಿಸಿ ಅಮೆರಿಕವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡೆನ್ ಹರ್ಷ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷರಾಗಿ ನಿಯುಕ್ತಿಗೊಂಡ 50 ದಿನಗಳಲ್ಲಿ 55 ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಮಹತ್ವದ ಸ್ಥಾನಗಳಿಗೆ ನೇಮಿಸಿರುವ ಜೋ ಬೈಡೆನ್, ಭಾರತೀಯ ಮೂಲದ ಪ್ರಜೆಗಳು ಅಮೆರಿಕದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವ ಪಾತ್ರದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಮಂಗಳನ ಅಂಗಳಕ್ಕೆ ಪಾದಾರ್ಪಣೆ ಮಾಡಿರುವ ನಾಸಾ ಸಂಸ್ಥೆಯ ರೋವರ್ ನೌಕೆಯ ಬೆನ್ನೆಲುಬಾಗಿ ಭಾರತ ಮೂಲದ ಡಾ.ಸ್ವಾತಿ ಮೋಹನ್ ಈ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಕುರಿತು ನಾಸಾದ ತಂತ್ರಜ್ಞಾನಿಗಳ ಜತೆ ವರ್ಚುವಲ್ ಸಂವಾದ ನಡೆಸಿದ ಅವರು, ಭಾರತೀಯ ಮೂಲದವರನ್ನು ಶ್ಲಾಘಿಸಿದ್ದಾರೆ. ಅಲ್ಲದೇ, ಭಾರತೀಯ ಮೂಲದ ಅಮೆರಿಕನ್ನರು ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಮೆರಿಕನ್ನರನ್ನು ಸಹ ಮೀರಿಸುತ್ತಿದ್ದಾರೆ’ ಎಂಬ ಅಭಿಪ್ರಾಯ ವ್ಯಪ್ತಪಡಿಸಿದ್ದಾರೆ.

‘ನಾಸಾದ ಡಾ.ಸ್ವಾತಿ ಮೋಹನ್ ನಾಸಾದ ರೋವರ್ಸ್ ನೌಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದೀರಿ, ದೇಶದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತ ಮೂಲದವರು. ಅಲ್ಲದೆ, ನನ್ನ ಭಾಷಣ ಬರಹಗಾರರಾದ ವಿನಯ್ ರೆಡ್ಡಿ ಅವರು ಭಾರತೀಯ ಮೂಲದವರೇ ಆಗಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತೀಯರ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಯಾರೀಕೆ ಡಾ.ಸ್ವಾತಿ ಮೋಹನ್?

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ (National Aeronautics and Space Administration – NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ವಾಹನ ‘ಪರ್ಸೆವೆರೆನ್ಸ್ ರೋವರ್’ (Perseverance Rover) ಮಂಗಳ ಗ್ರಹವನ್ನು ಸ್ಪರ್ಶಿಸಿದಾಗ ಆ ವಿವರವನ್ನು ಮೊದಲು ಖಚಿತಪಡಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್. ಏಳು ತಿಂಗಳ ಬಾಹ್ಯಾಕಾಶ ಯಾನದ ಬಳಿಕ, ಗುರುವಾರ ಮಂಗಳನಲ್ಲಿಗೆ ನೌಕೆ ಕಾಲಿರಿಸಿದಾಗ ‘ರೋವರ್ ಮಂಗಳ ಗ್ರಹಕ್ಕೆ ತಲುಪಿದೆ. ಪ್ರಾಚೀನ ಜೀವಗಳ ಕುರುಹನ್ನು ಹುಡುಕಲು ತಯಾರಾಗಿದೆ’ ಎಂದು ವಿವರಣೆ ನೀಡಿದ್ದರು ಅವರು.

ಅತಿ ಕಠಿಣ ಎನಿಸಿಕೊಂಡಿರುವ ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಇವರು. ರೋವರ್​ನ ಆ್ಯಟಿಟ್ಯೂಡ್ ಕಂಟ್ರೋಲ್ ಹಾಗೂ ಲ್ಯಾಂಡಿಂಗ್ ಸಿಸ್ಟಮ್​ನ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿ, ನೌಕೆ ಮಂಗಳ ಗ್ರಹ ಸ್ಪರ್ಶಿಸುತ್ತಿದ್ದಂತೆ ಅದರ ವಿವರಣೆಯನ್ನು ನೀಡಿದ್ದರು.

ಕಾರ್ನೆಲ್ ಯುನಿವರ್ಸಿಟಿಯಲ್ಲಿ ಪದವಿ ಪಡೆದ ಡಾ. ಸ್ವಾತಿ, ಪರ್ಸೆವೆರೆನ್ಸ್ ಮಾರ್ಸ್ ಮಿಷನ್​ನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ನಾಸಾದ ಇತರ ಯೋಜನೆಗಳಲ್ಲಿಯೂ ಸ್ವಾತಿ ಪಾಲ್ಗೊಂಡಿದ್ದರು. ಶನಿ ಗ್ರಹಕ್ಕೆ ಬಾಹ್ಯಾಕಾಶ ಯಾನ ಕೈಗೊಂಡ ನಾಸಾದ ಕ್ಯಾಸ್ಸಿನಿ ಮಿಷನ್ ತಂಡದಲ್ಲೂ ಅವರು ಕಾರ್ಯನಿರ್ವಹಿಸಿದ್ದರು.

ಡಾ. ಸ್ವಾತಿ ಮೋಹನ್ ಬಾಲ್ಯದಲ್ಲೇ ಭಾರತದಿಂದ ಆಮೆರಿಕಾಕ್ಕೆ ತೆರಳಿದ್ದರು. ಅಮೆರಿಕಾದ ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿಯಲ್ಲಿ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದರು. ತಮ್ಮ 9ನೇ ವಯಸ್ಸಿನಲ್ಲಿ ನೋಡಿದ ಅಮೆರಿಕಾದ ಸೈನ್ಸ್ ಫಿಕ್ಷನ್ ಸರಣಿ ‘ಸ್ಟಾರ್ ಟ್ರೆಕ್’ ಮೂಲಕ ವಿಜ್ಞಾನ, ಬಾಹ್ಯಾಕಾಶದ ಬಗ್ಗೆ ಆಸಕ್ತಿ ಮೂಡಿಸಿಕೊಂಡರು. ತಮ್ಮ 16ನೇ ವಯಸ್ಸಿನವರೆಗೆ ಶಿಶುವೈದ್ಯೆ ಆಗಬೇಕು ಅಂದುಕೊಂಡಿದ್ದ ಸ್ವಾತಿ ಮೋಹನ್, ಬಳಿಕ ಇಂಜಿನಿಯರ್ ಆಗಿ ಬಾಹ್ಯಾಕಾಶ ವಿಷಯದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ತೋರಿದರು.

ಇದನ್ನೂ ಓದಿ: ವಿಶ್ವದ ಸೂತ್ರ ಚೀನಾದ ಕೈಗೆ ಸಿಗಲು ಅವಕಾಶ ಕೊಡಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್

ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾವೇ ಭಾರತಕ್ಕೆ ದೊಡ್ಡ ಮಟ್ಟದ ಸಾಲ ತೀರಿಸಬೇಕಿದೆ!

Published On - 11:06 am, Fri, 5 March 21