AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾವೇ ಭಾರತಕ್ಕೆ ದೊಡ್ಡ ಮಟ್ಟದ ಸಾಲ ತೀರಿಸಬೇಕಿದೆ!

USA: ಅಮೆರಿಕಾ ದೇಶ ಚೀನಾಕ್ಕೆ 1 ಟ್ರಿಲಿಯನ್ ಡಾಲರ್, ಜಪಾನ್​ಗೆ 1 ಟ್ರಿಲಿಯನ್ ಡಾಲರ್ ಹಾಗೂ ಭಾರತಕ್ಕೆ 216 ಬಿಲಿಯನ್ ಡಾಲರ್ ನೀಡುವುದು ಬಾಕಿ ಉಳಿದಿದೆ. ಒಟ್ಟಾರೆ 2020ರಲ್ಲಿ ಅಮೆರಿಕಾ 23.4 ಟ್ರಿಲಿಯನ್ ಡಾಲರ್ ಸಾಲ ಹೊಂದಿದ್ದು, ಆಮೆರಿಕಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 72,309 ಡಾಲರ್ ಸಾಲ ಇದೆ

ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾವೇ ಭಾರತಕ್ಕೆ ದೊಡ್ಡ ಮಟ್ಟದ ಸಾಲ ತೀರಿಸಬೇಕಿದೆ!
ಸಂಗ್ರಹ ಚಿತ್ರ
Skanda
|

Updated on: Feb 27, 2021 | 1:37 PM

Share

ಇರುವೆಗೆ ಇರುವೆ ಭಾರ, ಆನೆಗೆ ಆನೆ ಭಾರ ಎಂಬ ಮಾತಿದೆ. ಎಷ್ಟೇ ಶ್ರೀಮಂತರಾದರೂ ಅದಕ್ಕೆ ತಕ್ಕನಾದ ಖರ್ಚು, ವೆಚ್ಚ, ಸಾಲಗಳಿರುತ್ತವೆ. ಈ ಮಾತಿಗೆ ತಕ್ಕಂತೆ ವಿಶ್ವದ ದೊಡ್ಡಣ ಅಮೆರಿಕಾ ಭಾರತದ ಬಳಿ ಪಡೆದಿರುವ ದೊಡ್ಡ ಮೊತ್ತದ ಸಾಲವೊಂದನ್ನು ಹಿಂದಿರುಗಿಸುವುದು ಬಾಕಿ ಇದೆಯಂತೆ. ಈ ಬಗ್ಗೆ ಸ್ವತಃ ಆಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​​ನಲ್ಲಿ ಆಮೆರಿಕಾ ಕಾಂಗ್ರೆಸ್ ಸದಸ್ಯ ಆಲೆಕ್ಸ್ ಮೂನಿ ಹೇಳಿಕೆ ನೀಡಿದ್ದು, ಭಾರತಕ್ಕೆ ಆಮೆರಿಕಾ ಬರೋಬ್ಬರಿ 216 ಬಿಲಿಯನ್ ಡಾಲರ್ ಹಣವನ್ನು ‌ನೀಡುವುದು ಬಾಕಿ‌‌ ಇದೆ ಎಂದು ತಿಳಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಸೆನೆಟರ್ ಆಗಿರುವ ಆಲೆಕ್ಸ್ ಮೂನಿ ಆಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​​ನಲ್ಲಿ ಮಾತನಾಡುತ್ತಾ, ಕೊರೊನಾ ವೈರಸ್ ಸಂಕಷ್ಟ ಪರಿಹಾರಕ್ಕೆ 2 ಟ್ರಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ನೀಡುವ ಬಗ್ಗೆ ವಿರೋಧಿಸಿದರು. ಅದೇ ಭಾಷಣದ ವೇಳೆ ಅಮೆರಿಕಾದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಆಲೆಕ್ಸ್ ಮೂನಿ ಆಮೆರಿಕಾ ಯಾವ ಯಾವ ದೇಶಕ್ಕೆ ಎಷ್ಟು ಹಣ ನೀಡುವುದು ಬಾಕಿ ಇದೆ ಎಂದು ಹೇಳಿದ್ದಾರೆ.

ಅಮೆರಿಕಾ ದೇಶ ಚೀನಾಕ್ಕೆ 1 ಟ್ರಿಲಿಯನ್ ಡಾಲರ್, ಜಪಾನ್​ಗೆ 1 ಟ್ರಿಲಿಯನ್ ಡಾಲರ್ ಹಾಗೂ ಭಾರತಕ್ಕೆ 216 ಬಿಲಿಯನ್ ಡಾಲರ್ ನೀಡುವುದು ಬಾಕಿ ಉಳಿದಿದೆ. ಒಟ್ಟಾರೆ 2020ರಲ್ಲಿ ಅಮೆರಿಕಾ 23.4 ಟ್ರಿಲಿಯನ್ ಡಾಲರ್ ಸಾಲ ಹೊಂದಿದ್ದು, ಆಮೆರಿಕಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 72,309 ಡಾಲರ್ ಸಾಲ ಇದೆ ಎಂದು ಆಲೆಕ್ಸ್ ಮೂನಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಭಾರತ ನ್ಯಾಯಾಂಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಕಾಟ್ಜು, ಸಮರ್ಥಿಸಿದ ಲಂಡನ್ ಕೋರ್ಟ್

ದುಬೈ ರಾಜಕುಮಾರಿ ಲತೀಫಾ ಯಾರು? ಅವಳು ಬದುಕಿರುವುದಕ್ಕೆ ವಿಶ್ವಸಂಸ್ಥೆ ಸಾಕ್ಷ್ಯ ಕೇಳುತ್ತಿರುವುದೇಕೆ?

Follow Us
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್