AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಸೂತ್ರ ಚೀನಾದ ಕೈಗೆ ಸಿಗಲು ಅವಕಾಶ ಕೊಡಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್

‘ಚೀನಾದ ನೆರೆರಾಷ್ಟ್ರಗಳು ಮುಕ್ತ ಮತ್ತು ಸ್ವತಂತ್ರವಾಗಿ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಅವಕಾಶ ಒದಗಿಸುತ್ತೇವೆ. ವಿದೇಶಿ ರಾಜಕೀಯ ಶಕ್ತಿಗಳು ಈ ದೇಶಗಳ ಆಡಳಿತದಲ್ಲಿ ಮೂಗು ತೂರಿಸದಿರುವಂತೆ ಮಾಡಲು ಪ್ರಯತ್ನಿಸಿ, ಸ್ಥಳೀಯ ಆಡಳಿತಗಳಿಗೆ ಬಲ ತುಂಬುವ ಕೆಲಸ ಮಾಡುತ್ತೇವೆ’ ಎಂದು ಜೋ ಬೈಡೆನ್ ಆಡಳಿತ ತನ್ನ ನಿರ್ಧಾರ ಪ್ರಕಟಿಸಿದೆ.

ವಿಶ್ವದ ಸೂತ್ರ ಚೀನಾದ ಕೈಗೆ ಸಿಗಲು ಅವಕಾಶ ಕೊಡಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್
ತೈವಾನ್, ಹಾಂಗ್​ಕಾಂಗ್ ಮತ್ತು ಟಿಬೇಟ್​ಗಳ ಸ್ವಾಯತ್ತತೆಗೆ ಬೆಂಬಲ ನೀಡುತ್ತೇವೆ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 04, 2021 | 9:26 PM

ವಾಷಿಂಗ್ಟನ್: ಅಮೆರಿಕದ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸಿ ದೇಶವನ್ನು ಮತ್ತೊಮ್ಮೆ ಜಾಗತಿಕ ನಾಯಕನಾಗಿ ಹೊರಹೊಮ್ಮುವಂತೆ ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ವಿಶ್ವ ನಾಯಕತ್ವವನ್ನು ವಹಿಸಿಕೊಳ್ಳುವುದು ಅಮೆರಿಕವೇ ಹೊರತು ಚೀನಾ ಅಲ್ಲ ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಬಿಡುಗಡೆಯಾದ ಅಮೆರಿಕಾ ಮಧ್ಯಂತರ ರಾಷ್ಟ್ರೀಯ ಭದ್ರತಾ ಕಾರ್ಯಸೂಚಿಯಲ್ಲಿ ಈ ವಿಷಯಗಳನ್ನು ವಿವರಿಸಲಾಗಿದೆ. ಭಾರತದಂತಹ ದೇಶಗಳ ನೀತಿ ನಿಯಮಗಳನ್ನು ಗೌರವಿಸುವ ಮೂಲಕ ಜಾಗತಿಕವಾಗಿ ನಾಯಕನಾಗಿ ಹೊರಹೊಮ್ಮುವುದಾಗಿ ಜೋ ಬೈಡೆನ್ ಆಡಳಿತ ವಿವರಿಸಿದೆ.

‘ಅಮೆರಿಕವನ್ನು ಮತ್ತೊಮ್ಮೆ ಜಾಗತಿಕ ನಾಯಕನನ್ನಾಗಿ ರೂಪಿಸಲು ಒಂದು ದೊಡ್ಡ ಅವಕಾಶ ನಮಗೆ ದೊರೆತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದ್ದು ಇತರ ದೇಶಗಳನ್ನು ಗೌರವಿಸಿ ಅಮೆರಿಕಾದ ಗತವೈಭವವನ್ನು ಪುನಃಸ್ಥಾಪಿಸುವುದಾಗಿ ರಾಷ್ಟ್ರೀಯ ಭದ್ರತಾ ಕಾರ್ಯಪದ್ಧತಿಯ ದಾಖಲೆಗಳು ಉಲ್ಲೇಖಿಸಿವೆ. ರಾಷ್ಟ್ರೀಯ ಹಿತಾಸಕ್ತಿ, ಅಮೆರಿಕನ್ನರ ಜೀವನ ಭದ್ರತೆ, ಆರ್ಥಿಕವಾಗಿ ಬೆಳೆಯಲು ಇರುವ ಅವಕಾಶಗಳ ಪ್ರಮಾಣವನ್ನು ಇನ್ನಷ್ಟುಉನ್ನತ ಸ್ಥರಕ್ಕೆ ಏರಿಸಲು ಸರಿಯಾದ ವೇಳೆಯೆಂದು ಭಾವಿಸಿದ್ದಾಗಿ ಹೇಳಲಾಗಿದೆ. ಅಮೆರಿಕ ಒಂದರಲ್ಲಷ್ಟೇ ಅಲ್ಲದೇ, ಹೊರದೇಶಗಳಲ್ಲಿಯೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ’ ಎಂದು ತಿಳಿಸಿದೆ.

ಮುಂದುವರೆದು ತನ್ನ ನೀತಿಗಳನ್ನು ವಿವರಿಸಿರುವ ಅಮೆರಿಕಾ, ‘ಚೀನಾದ ನೆರೆರಾಷ್ಟ್ರಗಳು ಮುಕ್ತ ಮತ್ತು ಸ್ವತಂತ್ರವಾಗಿ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಅವಕಾಶ ಒದಗಿಸುತ್ತೇವೆ. ವಿದೇಶಿ ರಾಜಕೀಯ ಶಕ್ತಿಗಳು ಈ ದೇಶಗಳ ಆಡಳಿತದಲ್ಲಿ ಮೂಗು ತೂರಿಸದಿರುವಂತೆ ಮಾಡಲು ಪ್ರಯತ್ನಿಸಿ, ಸ್ಥಳೀಯ ಆಡಳಿತಗಳಿಗೆ ಬಲ ತುಂಬುವ ಕೆಲಸ ಮಾಡುತ್ತೇವೆ’ ಎಂದು ಜೋ ಬೈಡೆನ್ ಆಡಳಿತ ತನ್ನ ನಿರ್ಧಾರ ಪ್ರಕಟಿಸಿದೆ.

ವಿವಿಧ ಪ್ರಾಂತ್ಯಗಳಲ್ಲಿ ಮಾನವ ಹಕ್ಕು ರಕ್ಷಿಸುತ್ತೇವೆ ತೈವಾನ್, ಹಾಂಗ್​ಕಾಂಗ್ ಮತ್ತು ಟಿಬೆಟ್ ವಿಷಯಗಳ ಕುರಿತು ಪ್ರಸ್ತಾಪಿಸಿರುವ ಅಮೆರಿಕಾ, ಈ ಪ್ರದೇಶಗಳಲ್ಲಿ ಮಾನವಹಕ್ಕು, ಪ್ರಜಾಪ್ರಭುತ್ವ ಮತ್ತು ಆತ್ಮಗೌರವವನ್ನು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದೆ.  ಚೀನಾದ ಜತೆ ವ್ಯವಹರಿಸುವ ಅಮೆರಿಕ ಕಂಪನಿಗಳು ‘ಅಮೆರಿಕದ ಮೌಲ್ಯ’ಗಳನ್ನು ಬಿಟ್ಟುಕೊಡದೇ ಇರಲು ಅಗತ್ಯವಿರುವ ಅವಕಾಶವನ್ನು ಒದಗಿಸುವುದಾಗಿ ಹೇಳಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಗಳ ವಿರುದ್ಧ ತನ್ನ ನಡೆ ಇರಲಿದೆ ಎಂಬ ಸುಳುಹು ನೀಡಿದೆ ಅಮೆರಿಕ.

ಅಮೆರಿಕದಲ್ಲಿ ಹೊಸ ಸರ್ಕಾರ ಮತ್ತು ಅಧ್ಯಕ್ಷರು ನೇಮಕವಾದ ಸಂದರ್ಭದಲ್ಲಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್​ಗೆ ಚೀನಾ ಅಧ್ಯಕ್ಷ ಷಿ ಚಿನ್​ಪಿಂಗ್ ಶುಭ ಕೋರುವ ಬದಲು, ಜೋ ಬೈಡೆನ್ ಅವರೇ ಚೀನಾದ ಸಾಂಪ್ರದಾಯಿಕ ಚಾಂದ್ರಮಾನ ನೂತನ ವರ್ಷಕ್ಕೆ ಚೀನೀಯರಿಗೆ ಶುಭಾಶಯ ತಿಳಿಸಿದ್ದರು.

ದೂರವಾಣಿಯಲ್ಲೂ ಅಸಮಧಾನ ಹೊರಹಾಕಿದ್ದ ಜೋ ಬೈಡೆನ್ ಭದ್ರತೆಯ ಬಗ್ಗೆ ಗಮನಹರಿಸಲು ಪೆಂಟಗಾನ್ ಟಾಸ್ಕ್ ಫೋರ್ಸ್ (Pentagon Task Force) ರಚಿಸಿದ ಕೆಲ ಗಂಟೆಗಳ ನಂತರ ಅಮೆರಿಕ-ಚೀನಾ ದೇಶಗಳ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ ನಡೆದಿತ್ತು. ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡೆನ್ ಇಂಡೋ ಫೆಸಿಫಿಕ್ (Indo-Pacific) ಸಮುದ್ರ ವಲಯದಲ್ಲಿ ಮುಕ್ತ ಮತ್ತು ಸ್ವತಂತ್ರ ವಾತಾವರಣ ನೆಲಗೊಳ್ಳಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಚೀನಾ ಅಧ್ಯಕ್ಷರ ಬಳಿಯೂ ಅವರು ಇದೇ ವಿಷಯ ಪ್ರಸ್ತಾಪಿಸಿದ್ದರು.

ಇಷ್ಟೇ ಅಲ್ಲದೇ, ಹಾಂಗ್​ಕಾಂಗ್​ನಲ್ಲಿ (Hong Kong) ಪ್ರಜಾಪ್ರಭುತ್ವದ ದಮನಕಾರಿ ನಡೆಗಳನ್ನು ಚೀನಾ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಜೋ ಬೈಡೆನ್ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಚೀನಾದ ಅನೈತಿಕ ವ್ಯಾಪಾರಿ ಪದ್ಧತಿಗಳ ಕುರಿತು ಸಹ ಅಮೆರಿಕದ ನೂತನ ಅಧ್ಯಕ್ಷ ಭಿನ್ನಮತ ವ್ಯಕ್ತಪಡಿಸಿದ್ದರು. ಹಾಂಗ್​ಕಾಂಗ್​ನಲ್ಲಿ ಪ್ರೊ ಡೆಮಾಕ್ರಟಿಕ್ ಹೋರಾಟಗಾರರ ಮೇಲೆ ಚೀನಾ ನಡೆಸುತ್ತಿರುವ ದಬ್ಬಾಳಿಕೆಯನ್ನು ಸಹ ಅಮೆರಿಕ ಆಡಳಿತ ಖಂಡಿಸಿದ್ದು, ಮಾನವ ಹಕ್ಕುಗಳ ರಕ್ಷಣೆಗೆ ಬದ್ಧ ನಿಲುವು ತೋರಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾವೇ ಭಾರತಕ್ಕೆ ದೊಡ್ಡ ಮಟ್ಟದ ಸಾಲ ತೀರಿಸಬೇಕಿದೆ!

ಇದನ್ನೂ ಓದಿ: ತೆಲಂಗಾಣದಲ್ಲಿ ವಿದ್ಯುತ್ ಸೇವೆ ಕಡಿತಗೊಳಿಸಲು ಚೀನಾ ಹ್ಯಾಕರ್​ಗಳ ಪ್ರಯತ್ನ?

VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ