ಬಂಪರ್ ಲಾಟರಿ: ದುಬೈನಲ್ಲಿ 24 ಕೋಟಿ ಗೆದ್ದ ಕನ್ನಡಿಗ ಶಿವಮೂರ್ತಿ ಕೃಷ್ಣಪ್ಪ, ಗೆದ್ದ ಹಣದಲ್ಲಿ ಏನು ಮಾಡಲಿದ್ದಾರೆ ಗೊತ್ತಾ?
ಳೆದ 15 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿರುವ ಕರ್ನಾಟಕದ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಎಂಬುವವರು ಲಕ್ಕಿ ಡ್ರಾನಲ್ಲಿ 12 ದಶಲಕ್ಷ ದಿರ್ಹಾಮ್‌ಗಳನ್ನು ( ರೂಪಾಯಿ ಬೆಲೆಯಲ್ಲಿ 24 ಕೋಟಿ) ಗೆದ್ದಿದ್ದಾರೆ.
ದುಬೈ: ಕಳೆದ 15 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿರುವ ಕರ್ನಾಟಕದ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಎಂಬುವವರು ಲಕ್ಕಿ ಡ್ರಾನಲ್ಲಿ 12 ದಶಲಕ್ಷ ದಿರ್ಹಾಮ್‌ಗಳನ್ನು ( ರೂಪಾಯಿ ಬೆಲೆಯಲ್ಲಿ 24 ಕೋಟಿ) ಗೆದ್ದಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಶಿವಮೂರ್ತಿ ಕೃಷ್ಣಪ್ಪ ಕಳೆದ 15 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ. ಕೃಷ್ಣಪ್ಪ ಅವರು ಫೆಬ್ರವರಿ 17 ರಂದು ವಿಜೇತ ಟಿಕೆಟ್ ಸಂಖ್ಯೆ 202511 ಅನ್ನು ಖರೀದಿಸಿದ್ದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಗಳಿಸಿದ ಹಣದಿಂದ ಮನೆ ನಿರ್ಮಿಸಲು ಬಯಸುತ್ತೇನೆ ನಾನು ಗೆದ್ದಿರುವ ಹಣದಿಂದ ನನ್ನ ಕುಟುಂಬಕ್ಕೆ ಮತ್ತೆ ನನ್ನ ಊರಿನಲ್ಲಿ ಒಂದು ದೊಡ್ಡ ಮನೆ ನಿರ್ಮಿಸಲು ನಾನು ಬಯಸುತ್ತೇನೆ. ನನಗೆ 10 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ.ಆದ್ದರಿಂದ ಹಣದ ಹೆಚ್ಚಿನ ಭಾಗವನ್ನು ಅವರ ಭವಿಷ್ಯಕ್ಕಾಗಿ ಠೇವಣಿ ಇಡಲಾಗುತ್ತದೆ ಎಂದು ಅವರು ಹೇಳಿದರು.
ಕಳೆದ ಮೂರು ವರ್ಷಗಳಿಂದ ಪ್ರತಿ ತಿಂಗಳು ಟಿಕೆಟ್ ಖರೀದಿ ಕಳೆದ ಒಂದು ವರ್ಷದಿಂದ ನಾನು ಸ್ವಂತವಾಗಿ ಟಿಕೆಟ್ ಖರೀದಿಸುತ್ತಿದ್ದೇನೆ. ಸಾಮಾನ್ಯ ಟಿಕೆಟ್ ಖರೀಧಿದಾರರಿಗೆ ಸಂಘಟಕರು ವಿಶೇಷ ಕೊಡುಗೆ ನೀಡಿದ್ದರಿಂದ ಈ ಬಾರಿ ನಾನು ಎರಡು ಟಿಕೆಟ್ ಖರೀದಿಸಿದೆ ಎಂದು ಅವರು ಹೇಳಿದರು. ಈ ಹಿಂದೆ ಹಲವಾರು ಭಾರತೀಯರು ಸಹ ಈ ಬಹುಮಾನ ಗೆದ್ದಿದ್ದಾರೆ.
ಈ ಸಂತಸದ ವಿಚಾರವನ್ನು ಕೃಷ್ಣಪ್ಪ ಅವರಿಗೆ ತಿಳಿಸಲು ಕರೆ ಮಾಡಿದ್ದ ಕಾರ್ಯಕ್ರಮ ಆಯೋಜಕ ರಿಚರ್ಡ್ ಜೊತೆ ಮಾತಾನಾಡಿದ ಕೃಷ್ಣಪ್ಪ, ನಾನು ಮನೆಯಲ್ಲಿ ಲೈವ್ ನೋಡುತ್ತಿದ್ದೇನೆ. ನನಗೆ ಈಗಲೂ ನಂಬಲಿಕೆ ಆಗುತ್ತಿಲ್ಲಾ.ನನ್ನನ್ನು ಜಯಶೀಲನಾಗಿಸಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:Mandya Youth Wins Kerala Lottery ಮಂಡ್ಯದ ಯುವಕನನ್ನು ಕೋಟ್ಯಾಧಿಪತಿ ಮಾಡಿದ ಕೇರಳದ ಲಾಟರಿ