Mandya Youth Wins Kerala Lottery ಮಂಡ್ಯದ ಯುವಕನನ್ನು ಕೋಟ್ಯಾಧಿಪತಿ ಮಾಡಿದ ಕೇರಳದ ಲಾಟರಿ
Kerala Lottery ಸ್ನೇಹಿತರ ಒತ್ತಾಯದ ಮೇರೆಗೆ ಮಂಡ್ಯದ ಯುವಕ 100 ರೂ. ಕೊಟ್ಟು ಭಾಗ್ಯಧರ ಲಾಟರಿಯನ್ನು ಕೊಂಡಿದ್ದರು. ಕೊಂಡ ಲಾಟರಿಯಲ್ಲಿ ಬಂಪರ್ ಬಹುಮಾನ ಸಿಕ್ಕಿದೆ.
ಮಂಡ್ಯ: ಕುಟುಂಬಸ್ಥರ ಜೊತೆ ಸ್ನೇಹಿತರ ಮದುವೆಗಾಗಿ ಹೋಗಿದ್ದ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಯುವಕನಿಗೆ ಕೇರಳದ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿದೆ. ಸ್ನೇಹಿತರ ಮದುವೆಗಾಗಿ ಶನಿವಾರ ಕೇರಳದ ಪುಥನಾಥಣಿಗೆ ಸೋಮನಹಳ್ಳಿಯ ಉದ್ಯಮಿ ಪುತ್ರ ಸೋಹನ್ ಬಲರಾಮ್ ತೆರಳಿದ್ದರು.
ಭೇಟಿ ಮಾಡಿ ವಾಪಸ್ಸು ಬರುವಾಗ ಸ್ನೇಹಿತರ ಒತ್ತಾಯದ ಮೇರೆಗೆ 100 ರೂ. ಕೊಟ್ಟು ಭಾಗ್ಯಧರ ಲಾಟರಿ ಕೊಂಡಿದ್ದರು. ಕೊಂಡಿದ್ದ ಲಾಟರಿ ಸಂಖ್ಯೆಗೆ ಒಂದು ಕೋಟಿ ರೂ. ಬಂಪರ್ ಬಹುಮಾನ ಸಿಕ್ಕಿದೆ.
ಸ್ನೇಹಿತರೊಬ್ಬರ ಲಾಟರಿ ಅಂಗಡಿಯಲ್ಲಿ 100 ರೂ. ಕೊಟ್ಟು ಒಂದು ಟಿಕೆಟ್ ಖರೀದಿಸಿದ್ದೆ. ಒಂದು ಕೋಟಿ ರೂ ಬಹುಮಾನ ನಿರೀಕ್ಷೆ ಮಾಡಿರಲಿಲ್ಲ. ಬಹುಮಾನ ಬಂದಿರುವುದು ಖುಷಿ ತಂದಿದೆ. ಹಣವನ್ನ ಬಿಸಿನೆಸ್ಗೆ ಬಳಸಿಕೊಳ್ಳುತ್ತೇನೆ ಎಂದು ಸೋಹನ್ ಹೇಳಿದರು.
ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು 12 ಕೋಟಿ ಬಂಪರ್ ಬಹುಮಾನ! ಡಬಲ್ ಧಮಾಕಾ! ಯಾಕೆ ಗೊತ್ತಾ?
Published On - 12:08 pm, Tue, 9 February 21