AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AIIMS ಕಲಬುರಗಿಗೆ ದಕ್ಕಬೇಕಿದ್ದ ಏಮ್ಸ್ ಹುಬ್ಬಳ್ಳಿಗೆ ಶಿಫ್ಟ್​.. ಕಲ್ಯಾಣ ಕರ್ನಾಟಕದಲ್ಲಿ ಜನ ಆಕ್ರೋಶ

AIIMS goes to Hubli from Kalaburagi ದೇಶದಲ್ಲಿ ಅತಿ ದೊಡ್ಡದು ಎಂಬ ಖ್ಯಾತಿ ಪಡೆದ ಕಲಬುರಗಿಯ ಇಎಸ್​ಐಸಿಯಲ್ಲೇ ಏಮ್ಸ್ ಸ್ಥಾಪಿಸಲು ಈ ಹಿಂದೆ ಸಿಎಂ ಯಡಿಯೂರಪ್ಪ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದ್ದರು. ಆದ್ರೆ ಇದೀಗ ಹುಬ್ಬಳ್ಳಿ ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

AIIMS ಕಲಬುರಗಿಗೆ ದಕ್ಕಬೇಕಿದ್ದ ಏಮ್ಸ್ ಹುಬ್ಬಳ್ಳಿಗೆ ಶಿಫ್ಟ್​.. ಕಲ್ಯಾಣ ಕರ್ನಾಟಕದಲ್ಲಿ ಜನ ಆಕ್ರೋಶ
ಕಲಬುರಗಿಯ ಇಎಸ್​ಐಸಿ ಆಸ್ಪತ್ರೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Feb 09, 2021 | 12:27 PM

Share

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ಸಿಕ್ಕಿದೆ. ಕಲಬುರಗಿಗೆ ದಕ್ಕಬೇಕಿದ್ದ ಏಮ್ಸ್ ಹುಬ್ಬಳ್ಳಿಗೆ ಎತ್ತಂಗಡಿಯಾಗಲಿದೆ. ಕಲಬುರಗಿ ನಗರದ ಇಎಸ್​ಐ ಮೆಡಿಕಲ್ ಹಬ್​ನ್ನು ಏಮ್ಸ್ ಆಗಿ ಪರಿವರ್ತನೆಯ ಆಸೆಗೆ ಎಳ್ಳು ನೀರು ಬಿಟ್ಟಿದೆ. ದೇಶದಲ್ಲಿ ಅತಿ ದೊಡ್ಡದು ಎಂಬ ಖ್ಯಾತಿ ಪಡೆದ ಕಲಬುರಗಿಯ ಇಎಸ್​ಐಸಿಯಲ್ಲೇ ಏಮ್ಸ್ ಸ್ಥಾಪಿಸಲು ಈ ಹಿಂದೆ ಸಿಎಂ ಯಡಿಯೂರಪ್ಪ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದ್ದರು. ಆದ್ರೆ ಇದೀಗ ಹುಬ್ಬಳ್ಳಿ ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಸರ್ಕಾರ ನಿನ್ನೆ ಲೋಕಸಭೆಯಲ್ಲಿ ಈ‌ ವಿಷಯ ಬಹಿರಂಗ ಪಡಿಸಿದೆ. ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವ ಅಶ್ವಿನಕುಮಾರ್ ಚೌಬೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಬಗ್ಗೆ ದೃಢಪಟ್ಟಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಕಲ್ಯಾಣ ಕರ್ನಾಟಕಕ್ಕೆ ಮಲತಾಯಿ ಧೋರಣೆ ತಾಳಿರುವುದು ಬಹಿರಂಗವಾಗಿದೆ. ಹೀಗಾಗಿ ಏಮ್ಸ್ ಎತ್ತಂಗಡಿ ಮಾಡಿರುವುದಕ್ಕೆ ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಸೀಸ ಕಾರಣ: ಏಮ್ಸ್ ವರದಿ ಬಹಿರಂಗ

Published On - 12:07 pm, Tue, 9 February 21