AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಡಿತೂ ಜಾಕ್​ಪಾಟ್.. 24 ವರ್ಷದ ಅನಂತುಗೆ 12 ಕೋಟಿ ರೂ ವಿಜಯ

ಅದೃಷ್ಟ ಮನುಷ್ಯನಿಗೆ ಹೇಗೆಲ್ಲಾ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಇಡುಕ್ಕಿ ಜಿಲ್ಲೆಯ ಬಡ ಕುಟುಂಬದ 24 ವರ್ಷದ ಯುವಕ 12 ಕೋಟಿ ರೂ.ಗಳ ಕೇರಳ ಸರ್ಕಾರದ ಓಣಂ ಬಂಪರ್ ಲಾಟರಿಯ ಪ್ರಥಮ ಬಹುಮಾನವನ್ನು ಗೆದ್ದಿದ್ದಾನೆ. ದೇವಾಲಯದ ಗುಮಾಸ್ತ ಅನಂತ ವಿಜಯ! ಎರ್ನಾಕುಲಂನ ದೇವಾಲಯವೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಅನಂತು ವಿಜಯನ್ ಎಂಬ ಯುವಕ ಕಳೆದ ತಿಂಗಳು ಟಿಬಿ 173964 ಲಾಟರಿ ಟಿಕೆಟ್ ಅನ್ನು ಖರೀದಿಸಿದ್ದ. ಭಾನುವಾರ ಸಂಜೆ ಡ್ರಾ ಪ್ರಕ್ರಿಯೆ ನಡೆದಿತ್ತು. ಮತ್ತು ರಾತ್ರಿ […]

ಹೊಡಿತೂ ಜಾಕ್​ಪಾಟ್.. 24 ವರ್ಷದ ಅನಂತುಗೆ 12 ಕೋಟಿ ರೂ ವಿಜಯ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 22, 2020 | 11:59 AM

ಅದೃಷ್ಟ ಮನುಷ್ಯನಿಗೆ ಹೇಗೆಲ್ಲಾ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಇಡುಕ್ಕಿ ಜಿಲ್ಲೆಯ ಬಡ ಕುಟುಂಬದ 24 ವರ್ಷದ ಯುವಕ 12 ಕೋಟಿ ರೂ.ಗಳ ಕೇರಳ ಸರ್ಕಾರದ ಓಣಂ ಬಂಪರ್ ಲಾಟರಿಯ ಪ್ರಥಮ ಬಹುಮಾನವನ್ನು ಗೆದ್ದಿದ್ದಾನೆ.

ದೇವಾಲಯದ ಗುಮಾಸ್ತ ಅನಂತ ವಿಜಯ! ಎರ್ನಾಕುಲಂನ ದೇವಾಲಯವೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಅನಂತು ವಿಜಯನ್ ಎಂಬ ಯುವಕ ಕಳೆದ ತಿಂಗಳು ಟಿಬಿ 173964 ಲಾಟರಿ ಟಿಕೆಟ್ ಅನ್ನು ಖರೀದಿಸಿದ್ದ. ಭಾನುವಾರ ಸಂಜೆ ಡ್ರಾ ಪ್ರಕ್ರಿಯೆ ನಡೆದಿತ್ತು. ಮತ್ತು ರಾತ್ರಿ ಅನಂತುಗೆ ಕರೆ ಬಂದಾಗ ಅವನಿಗೆ ಶಾಕ್ ಆಗಿದೆ. ಯಾಕೆಂದರೆ ಅವನು ಖರೀದಿಸಿದ್ದ ಟಿಕೆಟ್ 12 ಕೋಟಿಯ ಮೊದಲ ಬಹುಮಾನಕ್ಕೆ ಕಾರಣವಾಗಿತ್ತು.

ನನಗೆ ಕರೆ ಬಂದಾಗ ತಮಾಷೆ ಅಂದುಕೊಂಡಿದ್ದೆ: ಅನಂತ ವಿಜಯ  ನನಗೆ ಕರೆ ಬಂದಾಗ ಯಾರೋ ನನ್ನೊಂದಿಗೆ ತಮಾಷೆ ಮಾಡುತ್ತಿದ್ದಾರೆಂದು ಭಾವಿಸಿದೆ. ಆದರೆ ನಾನು ಸುದ್ದಿಯನ್ನು ಪರಿಶೀಲಿಸಿದಾಗ ನನಗೆ ನಂಬಲಾಗಲಿಲ್ಲ. ಭಾನುವಾರ ಬೆಳಿಗ್ಗೆ ಓಣಂ ಬಂಪರ್ ನನ್ನ ಭವಿಷ್ಯವನ್ನು ಬದಲಾಯಿಸಿದೆ ಎಂದು ಅನಂತು ವಿಜಯನ್ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಡುಕ್ಕಿ ಜಿಲ್ಲೆಯ ದೂರದ ಪ್ರದೇಶದಲ್ಲಿ ತನ್ನ ಹೆತ್ತವರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದ ಅವರು ಸರಿಯಾದ ಸಮಯದಲ್ಲಿ ಜಾಕ್‌ಪಾಟ್‌ಗೆ ಹೊಡೆದಿರುವುದು ಈ ಬಡ ಕುಟುಂಬಕ್ಕೆ ದೊಡ್ಡ ಸಹಾಯವಾಗಿದೆ ಎಂದು ಅನಂತು ಹೇಳಿದ್ರು.

ಅಕೌಂಟಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅವರ ಸಹೋದರಿ ಕೋವಿಡ್​ನಿಂದಾಗಿ ಕೆಲಸ ಕಳೆದುಕೊಂಡಿದ್ದರು. ಮತ್ತು ವರ್ಣಚಿತ್ರಕಾರರಾಗಿರುವ ಅವರ ತಂದೆ ಸಹ ಕೆಲವು ತಿಂಗಳಿಂದ ಕೆಲಸವಿಲ್ಲದೆ ಮನೆ ನಡೆಸಲು ಕಷ್ಟ ಪಡುತ್ತಿದ್ದರು. ಇದೀಗ.. ಈ ಜಾಕ್​ಪಾಟ್ ಲಾಟರಿಯಿಂದ ಇವರ ಬಾಳು ಬಂಗಾರವಾಗಿದೆ.

ಇನ್ನು ಲಾಟರಿ ಹೊಡೆದ ಬಳಿಕ ಅನಂತ್ ಆ ಹಣವನ್ನು ಸರಿಯಾಗಿ ಉಪಯೋಗಿಸುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದಾರೆ. “ನನ್ನ ಮೊದಲ ಆದ್ಯತೆಯೆಂದರೆ ಈಗಿನ ಪ್ರದೇಶದಿಂದ ಸ್ಥಳಾಂತರಗೊಂಡು ಎರ್ನಾಕುಲಂ ಬಳಿ ಒಂದು ಸಣ್ಣ ಮನೆಯನ್ನು ಖರೀದಿಸುವುದು ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

300 ರೂ ಟಿಕೆಟ್ ಖರೀದಿಸಿ, ಅದೃಷ್ಟವನ್ನೇ ಪಣಕ್ಕಿಟ್ಟು.. 12 ಕೋಟಿ ಹಣ ತಮ್ಮದಾಗಿಸಿಕೊಂಡರು! ಇನ್ನು ಅನಂತು ವಿಜಯನ್​ಗೆ ಇದೇ ಮೊದಲ ಬಾರಿಗೆ ಲಾಟರಿ ಹೊಡೆದಿರೋದಲ್ಲ. ಈ ಹಿಂದೆ ಕೂಡ 5 ಸಾವಿರದ ಲಾಟರಿ ಹೊಡೆದಿತ್ತು. ಹಾಗಾಗಿ ಅನಂತು ಆಗಾಗ ಲಾಟರಿ ಖರೀದಿಸುತ್ತಿದ್ದರು. ಓಣಂ ಬಂಪರ್‌ನ ಒಂದು ಟಿಕೆಟ್‌ನ ಬೆಲೆ 300 ರೂಪಾಯಿ ಇದೆಯಂತೆ. 300 ರೂ ಟಿಕೆಟ್ ಖರೀದಿಸಿ 12 ಕೋಟಿ ಹಣವನ್ನು ಅನಂತು ತಮ್ಮದಾಗಿಸಿಕೊಂಡಿದ್ದಾರೆ.

ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ