AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು 12 ಕೋಟಿ ಬಂಪರ್ ಬಹುಮಾನ! ಡಬಲ್ ಧಮಾಕಾ! ಯಾಕೆ ಗೊತ್ತಾ?

ನೆರೆಯ ತಮಿಳುನಾಡಿನ ತೆಂಕಸಿ ಮೂಲದ ಶರಾಫುದ್ದೀನ್ ಎ. ಎಂಬ 46 ವರ್ಷದ ಲಾಟರಿ ಮಾರಾಟಗಾರ ಇಂದು ಅಚ್ಚರಿಗೆ ಕಾರಣನಾಗಿದ್ದಾನೆ. ಇದ್ದ ಎಲ್ಲಾ ಲಾಟರಿಗಳು ಮಾರಾಟವಾಗಿ ಕೇವಲ ತನ್ನ ಬಳಿಯೇ ಉಳಿದಿದ್ದ ಲಾಟರಿ ಟಿಕೆಟ್​ ಪ್ರಥಮ ಬಹುಮಾನ ತಂದುಕೊಟ್ಟಿದೆ. ಇದರಿಂದ ಶರಾಫುದ್ದೀನ್​ ರಾತ್ರೋರಾತ್ರಿ 12 ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.

ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು 12 ಕೋಟಿ ಬಂಪರ್ ಬಹುಮಾನ! ಡಬಲ್ ಧಮಾಕಾ! ಯಾಕೆ ಗೊತ್ತಾ?
ಲಾಟರಿ ಮೂಲಕ 12 ಕೋಟಿ ಗೆದ್ದ ಶರಾಫುದ್ದೀನ್.ಎ.
ಆಯೇಷಾ ಬಾನು
|

Updated on:Jan 21, 2021 | 3:32 PM

Share

ತಿರುವನಂತಪುರಂ: ಅದೃಷ್ಟ ಅಂದ್ರೆ ಇದೇ ಇರಬೇಕು.. ಮಾರಾಟವಾಗದೇ ಉಳಿದಿದ್ದ ಆ ಒಂದೇ ಒಂದು ಟಿಕೆಟ್​ನಿಂದ ಲಾಟರಿ ಮಾರುತ್ತಿದ್ದ ವ್ಯಕ್ತಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿಬಿಟ್ಟಿದ್ದಾನೆ! ಹೌದು, ಕೇರಳ ಸರ್ಕಾರದ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಬಂಪರ್ ಡ್ರಾಗಾಗಿ ಟಿಕೆಟ್​ಗಳನ್ನು ಆತ  ಮಾರಾಟ ಮಾಡುತ್ತಿದ್ದ. ಆದ್ರೆ ಒಂದೇ ಒಂದು  ಟಿಕೆಟ್ ಮಾರಾಟವಾಗದೇ ಆತನ ಬಳಿಯೇ ಉಳಿದುಬಿಟ್ಟಿತು. ಆದ್ರೆ ಅದೇ ಲಾಟರಿ ಟಿಕೆಟ್​ಗೆ ಅದೃಷ್ಟ ಖುಲಾಯಿಸಿದೆ. ಹಾಗಾಗಿ ಆ ಸಾಮಾನ್ಯ ಲಾಟರಿ ಟಿಕೆಟ್​ ಮಾರಾಟಗಾರ ಮೊದಲ ಬಹುಮಾನ ಗೆದ್ದು 12 ಕೋಟಿ ರೂಪಾಯಿಯ ಒಡೆಯನಾಗಿದ್ದಾನೆ.

ನೆರೆಯ ತಮಿಳುನಾಡಿನ ತೆಂಕಾಶಿ ಮೂಲದ ಶರಾಫುದ್ದೀನ್ ಎ. ಎಂಬ 46 ವರ್ಷದ ಲಾಟರಿ ಮಾರಾಟಗಾರ ಇಂದು ಎಲ್ಲ ಲಾಟರಿ ಪ್ರಿಯರಿಗೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಇದ್ದ ಎಲ್ಲಾ ಲಾಟರಿಗಳು ಮಾರಾಟವಾಗಿ ಕೇವಲ ತನ್ನ ಬಳಿಯೇ ಉಳಿದಿದ್ದ ಲಾಟರಿ ಟಿಕೆಟ್​ ಪ್ರಥಮ ಬಹುಮಾನ ತಂದುಕೊಟ್ಟಿದೆ. ಇದರಿಂದ ಶರಾಫುದ್ದೀನ್ ರಾತ್ರೋರಾತ್ರಿ 12 ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.

ಶರಾಫುದ್ದೀನ್, ತಮಿಳುನಾಡಿನ ಗಡಿಯಲ್ಲಿರುವ ಕೊಲ್ಲಂ ಜಿಲ್ಲೆಯ ಆರ್ಯಂಕಾವ್ ಬಳಿಯ ಎರಾವಿಧರ್ಮಪುರಂನಲ್ಲಿರುವ ಸರ್ಕಾರಿ ಜಮೀನಿನಲ್ಲಿರುವ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾನೆ. ಗಲ್ಫ್ ರಿಟರ್ನ್ಡ್​ ಆಗಿರುವ ಶರಾಫುದ್ದೀನ್ ಕುಟುಂಬದಲ್ಲಿ 6 ಸದಸ್ಯರಿದ್ದಾರೆ. ತಾಯಿ, ಇಬ್ಬರು ಸಹೋದರರು, ಹೆಂಡತಿ ಮತ್ತು ಮಗ. ಶರಾಫುದ್ದೀನ್ ಮಗ ಪರ್ವೇಜ್ ಮುಷರಫ್ 10ನೇ ತರಗತಿ ಓದುತ್ತಿದ್ದಾನೆ. ಕೊರೊನಾ ಸಮಯದಲ್ಲಿ ಕುಟುಂಬ ನಡೆಸೋದು ಕಷ್ಟವಾಗಿತಂತೆ. ಸದ್ಯ ಈಗ 12 ಕೋಟಿ ಗೆದ್ದಿದ್ದು ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ.

ಸ್ವಂತ ಮನೆ ಕಟ್ಟಿಸಬೇಕು 12 ಕೋಟಿ ರೂಪಾಯಿಯ ಅಮೂಲ್ಯ ಸಂತೋಷವನ್ನು ಹಂಚಿಕೊಂಡ ಶರಾಫುದ್ದೀನ್ “ನಾನು ನನ್ನ ಸ್ವಂತ ಮನೆ ಕಟ್ಟಿಸಬೇಕು. ಉಳಿದ ಬಹುಮಾನದ ಹಣದೊಂದಿಗೆ ನನ್ನ ಸಾಲವನ್ನೆಲ್ಲಾ ತೀರಿಸಿ ಸಣ್ಣ ಉದ್ಯಮವನ್ನು ಪ್ರಾರಂಭಿಸಬೇಕು ಎಂದು ಹೇಳಿಕೊಂಡಿದ್ದಾರೆ. 9 ವರ್ಷಗಳ ಕಾಲ ಸೌದಿ ಅರೇಬಿಯಾದ ರಿಯಾದ್​ನಲ್ಲಿ ಕಾರ್ಯನಿರ್ವಹಿಸಿ 2013ರಲ್ಲಿ ಹಿಂತಿರುಗಿದ ಬಳಿಕ ಆರ್ಯಂಕವ್ ಸುತ್ತಾಮುತ್ತಾ ಲಾಟರಿ ಮಾರಾಟವನ್ನು ಆರಂಭಿಸಿದ್ದರು.

ಈ ಹಿಂದೆ ಕೂಡ ಶರಾಫುದ್ದೀನ್ ಲಾಟರಿ ಟಿಕೆಟ್​ನಿಂದ ಸಣ್ಣಪುಟ್ಟ ಬಹುಮಾನಗಳನ್ನು ಗೆದ್ದಿದ್ದಾರಂತೆ. ಆದ್ರೆ ಇದೇ ಮೊದಲ ಬಾರಿಗೆ ಅದೃಷ್ಟ ವೊಲಿದು ಬಂದಿದ್ದು ಇಷ್ಟು ಭಾರಿ ಮೊತ್ತದ ಹಣ ಗೆದ್ದಿರೋದಂತೆ. ಮಂಗಳವಾರ ತಿರುವನಂತಪುರಂನಲ್ಲಿರುವ ಲಾಟರಿ ನಿರ್ದೇಶನಾಲಯಕ್ಕೆ ಹೋಗಿ ತಾವು ಗೆದ್ದ ಲಾಟರಿಯನ್ನು ತೋರಿಸಿದ್ದಾರೆ. 30 % ತೆರಿಗೆ ಕಡಿತ ಹಾಗೂ 10 % ಏಜೆಂಟ್ ಕಮಿಷನ್ ಕಡಿತದ ನಂತರ ಶರಾಫುದ್ದೀನ್​ಗೆ ಸುಮಾರು 7.50 ಕೋಟಿ ಹಣ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಡಬಲ್ ಧಮಾಕಾ! ಊಪರ್​ವಾಲಾ ಜಬ್ ಭೀ ದೇತಾ ಹೈ ತೊ ಛಪ್ಪರ್ ಫಾಡ್​​ಕೆ  ದೇತಾ ಹೈ.. 12 ಕೋಟಿ ರೂಪಾಯಿ ಲಾಟರಿ ಗೆದ್ದ ಶರಾಫುದ್ದೀನ್​ಗೆ ಈಗ ಡಬಲ್ ಧಮಾಕಾ! ಹೇಗೆ ಅಂತೀರಾ? ಇಂಟರೆಸ್ಟಿಂಗ್​ ಆಗಿದೆ ಓದಿ.. ಈ ಶರಾಫುದ್ದೀನೇ ಸ್ವತಃ ಆ ಬಂಪರ್​ ಪ್ರೈಜ್​ನ ಲಾಟರಿ ಮಾರಾಟ ಮಾಡಿರುವುದು. ಹಾಗಾಗಿ ಲಾಟರಿ ನಿಯಮಗಳ ಪ್ರಕಾರ ಈ ಲಾಟರಿ ನಡೆಸುವ ಕೇರಳ ಸರ್ಕಾರ ಟಿಕೆಟ್​ ಮಾರಾಟಗಾರರಿಗೆ ಏಜೆಂಟ್​ ಕಮೀಷನ್​ ಇಂತಿಷ್ಟು ಅಂತಾ ನೀಡುತ್ತದೆ. ಅದೂ ಈಗ ಶರಾಫುದ್ದೀನ್ ಅವರಿಗೇ ಸಂದಾಯವಾಗುತ್ತದೆ. ಅಲ್ಲಿ ಒಟ್ಟಾರೆ 12 ಕೋಟಿ ಮೊತ್ತದಲ್ಲಿ ತೆರಿಗೆ ತೆಗೆದು ಒಂದಷ್ಟು ಬಹುಮಾನ ಬಂದ್ರೆ.. ಅದರ ಜೊತೆಗೆ 12 ಕೋಟಿ ಮೊತ್ತದ ಟಿಕೆಟ್​​ನ ಕಮೀಷನ್​ ಸಹ ಇದೇ ಶರಾಫುದ್ದೀನ್​ಗೆ ಸೇರುತ್ತದೆ! ಊಪರ್​ವಾಲಾ ಜಬ್ ಭೀ ದೇತಾ ಹೈ ತೊ ಛಪ್ಪರ್ ಫಾಡ್​​ಕೆ  ದೇತಾ ಹೈ..

ಅಂಬಜ್ಜೀ! ನಿಮ್ಗೆ 94 ಕೋಟಿ ಲಾಟರಿ ಬಂದಿದೆ ಅಂದಿದ್ದಕ್ಕೆ.. ದಿಡಗ್ಗನೆ ಎದ್ದ ಅಜ್ಜಿ ಮಾಡಿದ್ದಾದರೂ ಏನು!?

Published On - 3:16 pm, Thu, 21 January 21