ಕೊರೊನಾ ಕಾಟ ನಿಯಂತ್ರಣಕ್ಕೆ ಬಂತಾ? ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 15,223 ಹೊಸ ಪ್ರಕರಣ, 151 ಮಂದಿ ಸಾವು

ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1,92,308 ಆಗಿದ್ದು ಇಲ್ಲಿಯವರೆಗೆ 1,02,65,706 ಜನರು ಚೇತರಿಸಿಕೊಂಡಿದ್ದಾರೆ.

  • TV9 Web Team
  • Published On - 12:08 PM, 21 Jan 2021
ಕೊರೊನಾ ಕಾಟ ನಿಯಂತ್ರಣಕ್ಕೆ ಬಂತಾ? ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 15,223 ಹೊಸ ಪ್ರಕರಣ, 151 ಮಂದಿ ಸಾವು
ಸಾಂದರ್ಭಿಕ ಚಿತ್ರ

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 15,223 ಜನರಿಗೆ ಕೊರೊನಾ ಸೋಂಕು ತಗಲಿದ್ದು, ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,06,10,883 ಕ್ಕೇರಿದೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್​ನಿಂದ 151 ಜನರು ಮೃತಪಟ್ಟಿದ್ದು ದೇಶದಲ್ಲಿ ಈವರೆಗೆ 1,52,869 ಜನರ ಸಾವಿಗೀಡಾಗಿದ್ದಾರೆ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1,92,308 ಆಗಿದ್ದು ಇಲ್ಲಿಯವರೆಗೆ 1,02,65,706 ಜನರು ಚೇತರಿಸಿಕೊಂಡಿದ್ದಾರೆ.

ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ 96.75 ಶೇಕಡಾ ಇದೆ. ಅದೇ ವೇಳೆ ಸಾವಿನ ಪ್ರಮಾಣ ಶೇ. 1.44 ಆಗಿದೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 7 ರಂದು 20 ಲಕ್ಷ ದಾಟಿತ್ತು. ಆಗಸ್ಟ್ 23ಕ್ಕೆ 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ ದಾಟಿತ್ತು.

ಸೆಪ್ಟೆಂಬರ್ 28ರಂದು 60 ಲಕ್ಷ, ಅಕ್ಟೋಬರ್ 11ರಂದು 70 ಲಕ್ಷ , ಅಕ್ಟೋಬರ್ 29ರಂದು 80 ಲಕ್ಷ, ನವೆಂಬರ್ 20ರಂದು 90 ಲಕ್ಷ ಮತ್ತು ಡಿಸೆಂಬರ್19ರಂದು 1ಕೋಟಿ ಗಡಿದಾಟಿತ್ತು. ಐಸಿಎಂಆರ್ ಪ್ರಕಾರ ಜನವರಿ 20ರ ವರೆಗೆ 18,93,47,782 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.

ತೆಲಂಗಾಣದಲ್ಲಿ ಕೊರೊನಾ ಲಸಿಕೆ ಪಡೆದ ವ್ಯಕ್ತಿ ಸಾವು: ಔಷಧಕ್ಕೂ ಸಾವಿಗೂ ಸಂಬಂಧ ಇಲ್ಲ ಎಂದ ವೈದ್ಯರು