ಬೆಂಗಳೂರು ಮೂಲದ ಡಾ. ಪಿಂಚಿ ಶ್ರೀನಿವಾಸನ್​ಗೂ ಅಮೆರಿಕಾದಲ್ಲಿ ವೆಹಿಕಲ್ ಪರೇಡ್ ಗೌರವ

ಬೆಂಗಳೂರು ಮೂಲದ ಡಾ. ಪಿಂಚಿ ಶ್ರೀನಿವಾಸನ್​ಗೂ ಅಮೆರಿಕಾದಲ್ಲಿ ವೆಹಿಕಲ್ ಪರೇಡ್ ಗೌರವ

ವಾಷಿಂಗ್ ಟನ್: ಹಂತಕ ಮಹಾಮಾರಿ ಕೊರೊನಾ ವೈರಸ್​ನಿಂದ ತತ್ತರಿಸಿರುವ ಅಮೆರಿಕಾಗೆ ಈಗ ವೈದ್ಯರು ಸಾಕ್ಷಾತ್ ದೇವರಾಗಿದ್ದಾರೆ. ಅದ್ರಲ್ಲೂ ಅಮೆರಿಕಾದಲ್ಲಿ ಕರ್ನಾಟಕದ ವೈದ್ಯರು ಕೂಡ ಕೊರೊನಾ ವಿರುದ್ಧ ಹೋರಾಡ್ತಿದ್ದಾರೆ. ಹೀಗಾಗಿ ವೈದ್ಯರ ಮನೆ ಮುಂದೆ ಸ್ಥಳೀಯ ಜನರು ವೆಹಿಕಲ್ ಪರೇಡ್ ನಡೆಸಿ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇತ್ತೀಚೆಗೆ ಮೈಸೂರು ಮೂಲದ ವೈದ್ಯೆ ಉಮಾರಾಣಿ ಅವರಿಗೆ ವೆಹಿಕಲ್ ಪರೇಡ್ ನಡೆಸಿ ಗೌರವ ನೀಡಿದ್ದರು. ಈಗ ಅದೇ ರೀತಿಯ ಮತ್ತೊಬ್ಬ ಕನ್ನಡಿಗರಿಗೆ ಗೌರವ ಸಿಕ್ಕಿದೆ. ನ್ಯೂಯಾರ್ಕ್​ನ ವೆಲ್ ಕಾರ್ನೆಲ್ ಮೆಡಿಸಿನ್ ಆಸ್ಪತ್ರೆಯಲ್ಲಿ ಪ್ರೊಫೆಸರ್ ಹಾಗೂ ನ್ಯೂಯಾರ್ಕ್ ನ ಮೌಂಟ್ ಸಿನಾಯಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡ್ತಿರುವ ಡಾಕ್ಟರ್ ಪಿಂಚಿ ಶ್ರೀನಿವಾಸನ್ ಅವರಿಗೂ ಕೂಡ ವೆಹಿಕಲ್ ಪರೇಡ್ ನಡೆಸಿ ಗೌರವ ಸಲ್ಲಿಸಿದ್ದಾರೆ.

ಬೆಂಗಳೂರಿನವರಾದ ಡಾಕ್ಟರ್ ಪಿಂಚಿ ಶ್ರೀನಿವಾಸನ್ ಗುಲ್ಬರ್ಗದ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪದವಿ ಪಡೆದಿದ್ದಾರೆ.

Published On - 7:53 am, Tue, 28 April 20

Click on your DTH Provider to Add TV9 Kannada