ಕೊರೊನಾ ಎಫೆಕ್ಟ್: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಇಳಿಕೆ!
ಅಮೆರಿಕಾದಲ್ಲಿ ಕಲಿಯುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಇಳಿಕೆ ಕಂಡಿದೆ. 2019-20ನೇ ಸಾಲಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. 4.4ರಷ್ಟು ಇಳಿಕೆ ಕಾಣುವ ಮೂಲಕ ದಶಕದಲ್ಲೇ ಅತ್ಯಂತ ದೊಡ್ಡ ಕುಸಿತ ದಾಖಲಾಗಿದೆ. ಅಮೆರಿಕಾ ಸರ್ಕಾರ ಸೋಮವಾರ ಬಿಡುಗಡೆಗೊಳಿಸಿದ ಪ್ರಾಥಮಿಕ ಅಧ್ಯಯನದ ವರದಿಯಲ್ಲಿ ಈ ವಿಚಾರ ತಿಳಿದುಬಂದಿದೆ. ಭಾರತ ಮಾತ್ರವಲ್ಲ, ಅಮೆರಿಕಾದಲ್ಲಿ ಇತರ ರಾಷ್ಟ್ರಗಳ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣದಲ್ಲೂ ವ್ಯತ್ಯಯ ಉಂಟಾಗಿದೆ. 2020ರಲ್ಲಿ ಒಟ್ಟು ಶೇ. 42ರಷ್ಟು ದಾಖಲಾತಿ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಹೊರದೇಶದಲ್ಲಿ ಕಲಿಯಲು ಮನಸು ಮಾಡಿಲ್ಲ. ಹೊಸ […]
ಅಮೆರಿಕಾದಲ್ಲಿ ಕಲಿಯುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಇಳಿಕೆ ಕಂಡಿದೆ. 2019-20ನೇ ಸಾಲಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. 4.4ರಷ್ಟು ಇಳಿಕೆ ಕಾಣುವ ಮೂಲಕ ದಶಕದಲ್ಲೇ ಅತ್ಯಂತ ದೊಡ್ಡ ಕುಸಿತ ದಾಖಲಾಗಿದೆ. ಅಮೆರಿಕಾ ಸರ್ಕಾರ ಸೋಮವಾರ ಬಿಡುಗಡೆಗೊಳಿಸಿದ ಪ್ರಾಥಮಿಕ ಅಧ್ಯಯನದ ವರದಿಯಲ್ಲಿ ಈ ವಿಚಾರ ತಿಳಿದುಬಂದಿದೆ.
ಭಾರತ ಮಾತ್ರವಲ್ಲ, ಅಮೆರಿಕಾದಲ್ಲಿ ಇತರ ರಾಷ್ಟ್ರಗಳ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣದಲ್ಲೂ ವ್ಯತ್ಯಯ ಉಂಟಾಗಿದೆ. 2020ರಲ್ಲಿ ಒಟ್ಟು ಶೇ. 42ರಷ್ಟು ದಾಖಲಾತಿ ಕಡಿಮೆಯಾಗಿದೆ.
ವಿದ್ಯಾರ್ಥಿಗಳು ಹೊರದೇಶದಲ್ಲಿ ಕಲಿಯಲು ಮನಸು ಮಾಡಿಲ್ಲ. ಹೊಸ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ಒಂದು ವರ್ಷದ ಶೈಕ್ಷಣಿಕ ಅವಧಿಯಲ್ಲಿ ಬದಲಾವಣೆ ಉಂಟಾಗಿದೆ. ಮುಂದಿನ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಮೊದಲಿನಂತಾಗುವ ನಿರೀಕ್ಷೆ ಇದೆ ಎಂದು ಅಮೆರಿಕಾದ ಶೇ. 90ರಷ್ಟು ವಿಶ್ವವಿದ್ಯಾನಿಲಯಗಳು ಅಭಿಪ್ರಾಯಪಟ್ಟಿವೆ.
ಅಮೆರಿಕಾದ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮತ್ತು ಅಮೆರಿಕಾ ರಾಜ್ಯ ಇಲಾಖೆ ಜಂಟಿಯಾಗಿ ನಡೆಸಿದ ಈ ಸಮೀಕ್ಷೆಯ ಪ್ರಕಾರ, ಒಂದು ಮಿಲಿಯನ್ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ, ಶೇ. 18ರಷ್ಟು ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಇದೀಗ ಈ ಸಂಖ್ಯೆಯಲ್ಲಿ ಶೇ. 4.4ರಷ್ಟು ವಿದ್ಯಾರ್ಥಿಗಳ ಇಳಿಕೆಯಾಗಿದೆ. 2005-06ರ ಬಳಿಕ ಕಂಡುಬಂದ ಅತ್ಯಂತ ದೊಡ್ಡ ಕುಸಿತ ಇದಾಗಿದೆ. 2005-06ರಲ್ಲಿ ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.5ರಷ್ಟು ಇಳಿಕೆಯಾಗಿತ್ತು.
Published On - 12:59 pm, Tue, 17 November 20