AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧ ನಿಲ್ಲಿಸಲು ಭಾರತದ ಹೊಸ ಹೆಜ್ಜೆ: ರಷ್ಯಾ–ಉಕ್ರೇನ್‌ಗೆ 3 ಅಂಶಗಳ ಕದನ ವಿರಾಮ ಪ್ರಸ್ತಾವನೆ

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಭಾರತ 3 ಅಂಶಗಳ ಕದನ ವಿರಾಮ ಪ್ರಸ್ತಾವನೆ ಮುಂದಿಟ್ಟಿದೆ. ಇಂಧನ, ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಿಸುವುದು, ಕಪ್ಪು ಸಮುದ್ರದ ಮೂಲಕ ಧಾನ್ಯ ಸಾಗಣೆ ಸುರಕ್ಷಿತಗೊಳಿಸುವುದು ಮತ್ತು ವಾಣಿಜ್ಯ ಹಡಗುಗಳ ಭದ್ರತೆ ಇದರ ಪ್ರಮುಖ ಅಂಶಗಳು. ಉಕ್ರೇನ್ ಈ ಯೋಜನೆಯನ್ನು ಸಮಗ್ರವೆಂದು ಶ್ಲಾಘಿಸಿದೆ. ಭಾರತದ ರಾಜತಾಂತ್ರಿಕ ಪ್ರಯತ್ನಗಳು ಜಾಗತಿಕ ಶಾಂತಿಗೆ ಮಹತ್ವದ ಹೆಜ್ಜೆಯಾಗಿದೆ.

ಯುದ್ಧ ನಿಲ್ಲಿಸಲು ಭಾರತದ ಹೊಸ ಹೆಜ್ಜೆ: ರಷ್ಯಾ–ಉಕ್ರೇನ್‌ಗೆ 3 ಅಂಶಗಳ ಕದನ ವಿರಾಮ ಪ್ರಸ್ತಾವನೆ
ನರೇಂದ್ರ ಮೋದಿ Image Credit source: Foreign Policy
ನಯನಾ ರಾಜೀವ್
|

Updated on: Oct 07, 2026 | 12:18 PM

Share

ಕೈವ್, ಅಕ್ಟೋಬರ್ 07: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ಭಾರತ ಮೂರು ಅಂಶಗಳ ಕದನ ವಿರಾಮ ಯೋಜನೆ ಮುಂದಿಟ್ಟಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಯುದ್ಧ ಐದನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಸಂಘರ್ಷವನ್ನು ಕಡಿಮೆ ಮಾಡುವ ಪ್ರಯತ್ನಗಳಲ್ಲಿ ಭಾರತ ತನ್ನ ಪಾತ್ರವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಇತ್ತೀಚಿನ ಭೇಟಿ ಹಾಗೂ ರಾಜತಾಂತ್ರಿಕ ಮಾತುಕತೆಗಳ ಭಾಗವಾಗಿ ಈ ಪ್ರಸ್ತಾವನೆಯನ್ನು ಉಕ್ರೇನ್‌ಗೆ ಹಸ್ತಾಂತರಿಸಲಾಗಿದೆ. ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಅವರು ಈ ಮಾಹಿತಿಯನ್ನು ದೃಢಪಡಿಸಿದ್ದು, “ಟರ್ಕಿ, ಈಜಿಪ್ಟ್ ಮತ್ತು ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಿಂದ ನಮಗೆ ಬಂದಿರುವ 4 ಪ್ರಸ್ತಾವನೆಗಳಲ್ಲಿ ಭಾರತದ ಯೋಜನೆಯೇ ಅತ್ಯಂತ ಸಮಗ್ರವಾಗಿದೆ” ಎಂದು ಪ್ರಶಂಸಿಸಿದ್ದಾರೆ.

ಇಂಧನ ಮತ್ತು ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಿಸುವುದು:

ರಷ್ಯಾ ಮತ್ತು ಉಕ್ರೇನ್ ಪರಸ್ಪರರ ಇಂಧನ ಘಟಕಗಳು ಹಾಗೂ ಪ್ರಮುಖ ಮೂಲಸೌಕರ್ಯಗಳ ಮೇಲೆ ನಡೆಸುವ ದಾಳಿಯನ್ನು ನಿಲ್ಲಿಸುವುದು ಮೊದಲ ಅಂಶವಾಗಿದೆ.

ಕಪ್ಪು ಸಮುದ್ರದ ಮೂಲಕ ಧಾನ್ಯ ಮತ್ತು ಇಂಧನ ಸಾಗಣೆಗೆ ಅವಕಾಶ:

ಕಪ್ಪು ಸಮುದ್ರದ ಬಂದರುಗಳ ಮೂಲಕ ಧಾನ್ಯ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ವಾಣಿಜ್ಯ ಸಾಗಣೆ ಅಡೆತಡೆಯಿಲ್ಲದೆ ನಡೆಯುವಂತೆ ಮಾಡುವುದು ಎರಡನೇ ಅಂಶವಾಗಿದೆ.

ಮತ್ತಷ್ಟು ಓದಿ: ಚಂದ್ರನ ಮೇಲೂ ಪರಮಾಣು ಶಕ್ತಿ ಪೈಪೋಟಿ: ಅಮೆರಿಕ, ಚೀನಾ, ರಷ್ಯಾ ನಡುವೆ ಹೊಸ ಸ್ಪರ್ಧೆ

ವಾಣಿಜ್ಯ ಹಡಗುಗಳ ಸುರಕ್ಷತೆ: ಕಪ್ಪು ಸಮುದ್ರದ ಮೂಲಕ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಯದಂತೆ ಕ್ರಮ ಕೈಗೊಳ್ಳುವುದು ಮೂರನೇ ಅಂಶವಾಗಿದೆ.

ಭಾರತ: ಭಾರತವು ಇಂಧನ ರಕ್ಷಣೆ, ಧಾನ್ಯ ಸರಬರಾಜು ಮತ್ತು ಹಡಗು ಸಾಗಣೆ ಸುರಕ್ಷತೆಯನ್ನು ಒಟ್ಟಾಗಿಸಿ ಸಮಗ್ರ ಪ್ಯಾಕೇಜ್ ರೂಪದಲ್ಲಿ ಪ್ರಸ್ತಾಪಿಸಿದೆ.

ಉಕ್ರೇನ್ ಹೇಳಿದ್ದೇನು?

ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ, ಕದನ ವಿರಾಮದ ವಿವಿಧ ಮಾದರಿಗಳನ್ನು ಪರಿಗಣಿಸಲು ಕೈವ್ ಸಿದ್ಧವಿದೆ ಎಂದು ಹೇಳಿದ್ದಾರೆ. ಆದರೆ ಕೇವಲ ನೆಲದ ಮೇಲಿನ ಯುದ್ಧವನ್ನು ನಿಲ್ಲಿಸುವುದಷ್ಟೇ ಸಾಕಾಗುವುದಿಲ್ಲ. ಇಂಧನ ಮೂಲಸೌಕರ್ಯ, ಬಂದರುಗಳು ಮತ್ತು ಕಪ್ಪು ಸಮುದ್ರದಲ್ಲಿನ ಸಾಗಣೆಯ ಸುರಕ್ಷತೆಯನ್ನೂ ಒಪ್ಪಂದದಲ್ಲಿ ಸೇರಿಸಬೇಕು ಎಂದು ಅವರು ಹೇಳಿದ್ದಾರೆ.

ಟರ್ಕಿ, ಈಜಿಪ್ಟ್ ಮತ್ತು ಅಮೆರಿಕದಿಂದಲೂ ಉಕ್ರೇನ್‌ಗೆ ವಿವಿಧ ಕದನ ವಿರಾಮ ಪ್ರಸ್ತಾವನೆಗಳು ಬಂದಿವೆ ಎಂದು ವರದಿಯಾಗಿದೆ. ಆದರೆ ಭಾರತದ ಪ್ರಸ್ತಾವನೆ ಇಂಧನ, ಮೂಲಸೌಕರ್ಯ ಮತ್ತು ಸಮುದ್ರ ಮಾರ್ಗದ ಸುರಕ್ಷತೆ ಸೇರಿದಂತೆ ಹಲವು ವಿಷಯಗಳನ್ನು ಒಟ್ಟಿಗೆ ಒಳಗೊಂಡಿದೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.

ರಷ್ಯಾ ಬಗ್ಗೆ ಭಾರತದ ನಿಲುವು

ರಷ್ಯಾ–ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ಆರಂಭದಿಂದಲೂ ಮಾತುಕತೆ ಮತ್ತು ರಾಜತಾಂತ್ರಿಕ ಪರಿಹಾರಕ್ಕೆ ಒತ್ತು ನೀಡಿದೆ. ಭಾರತ ರಷ್ಯಾದೊಂದಿಗೆ ದೀರ್ಘಕಾಲದ ರಕ್ಷಣಾ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿದ್ದರೂ, ಯುದ್ಧವನ್ನು ನಿಲ್ಲಿಸಿ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಲುವನ್ನು ಮುಂದುವರಿಸಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಇತ್ತೀಚಿನ ಹೇಳಿಕೆಯಲ್ಲಿ ಭಾರತ ಕೇವಲ ಶಾಂತಿಗೆ ಕರೆ ನೀಡುವುದಕ್ಕೆ ಸೀಮಿತವಾಗಿಲ್ಲ. ಮಾಸ್ಕೋ ಮತ್ತು ಕೈವ್ ಎರಡರೊಂದಿಗೂ ಯುದ್ಧವನ್ನು ಕಡಿಮೆ ಮಾಡುವ ಕುರಿತು ಪ್ರಾಯೋಗಿಕ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಪುಟಿನ್ ಕೂಡ ಮೋದಿ ಪ್ರಯತ್ನವನ್ನು ಶ್ಲಾಘಿಸಿದ್ದರು

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ರಷ್ಯಾ–ಉಕ್ರೇನ್ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಶ್ಲಾಘಿಸಿದ್ದರು. ಮೋದಿ ಅವರು ಪರಸ್ಪರ ಒಪ್ಪಿಕೊಳ್ಳಬಹುದಾದ ಪರಿಹಾರಗಳನ್ನು ಹುಡುಕುವ ಉದ್ದೇಶ ಹೊಂದಿದ್ದಾರೆ ಎಂದು ಪುಟಿನ್ ಹೇಳಿದ್ದರು.

ಇದೀಗ ಭಾರತದ ಮೂರು ಅಂಶಗಳ ಪ್ರಸ್ತಾವನೆಗೆ ಉಕ್ರೇನ್‌ನ ಪ್ರತಿಕ್ರಿಯೆ ಮತ್ತು ರಷ್ಯಾದ ನಿಲುವು ಮುಂದಿನ ಬೆಳವಣಿಗೆಯಲ್ಲಿ ಪ್ರಮುಖವಾಗಲಿದೆ. ಸದ್ಯ ಇದು ಕದನ ವಿರಾಮದ ಪ್ರಸ್ತಾವನೆಯಾಗಿದ್ದು, ಅಂತಿಮ ಶಾಂತಿ ಒಪ್ಪಂದವಲ್ಲ.

ಭಾರತದ ರಾಜತಾಂತ್ರಿಕ ನಿಲುವು:

ಯುದ್ಧದ ಆರಂಭದಿಂದಲೂ ಶಾಂತಿ ಮತ್ತು ಮಾತುಕತೆಯ ಪರವಾಗಿರುವ ಭಾರತ, ಕೇವಲ ಸಲಹೆ ನೀಡುವುದನ್ನು ಮೀರಿ ಎರಡೂ ದೇಶಗಳೊಂದಿಗೆ ನೇರ ಸಂಪರ್ಕ ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ, ಸಂಘರ್ಷ ಬಗೆಹರಿಸಲು ಪ್ರಧಾನಿ ಮೋದಿ ಅತ್ಯುತ್ತಮ ಹಾಗೂ ಸ್ವೀಕಾರಾರ್ಹ ಉಪಕ್ರಮಗಳನ್ನು ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!