AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ಜೊತೆಗಿನ ಯುದ್ಧದ ಅಂತ್ಯಕ್ಕೆ ಭಾರತದ ಶಾಂತಿ ಪ್ರಸ್ತಾಪವೇ ಅತ್ಯಂತ ಸಮಗ್ರವಾಗಿದೆ; ಉಕ್ರೇನ್ ಶ್ಲಾಘನೆ

ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು 4 ಪ್ರಮುಖ ದೇಶಗಳು ತಮ್ಮ ಕದನ ವಿರಾಮದ ಯೋಜನೆಗಳನ್ನು ಮುನ್ನೆಲೆಗೆ ತಂದಿವೆ. ಅದರಲ್ಲಿ ಭಾರತದ ಪ್ರಸ್ತಾಪ ಅತ್ಯಂತ ಸಮಗ್ರವಾಗಿದೆ ಎಂದು ಉಕ್ರೇನ್ ಹೇಳಿದೆ. ಇದರ ತಾಂತ್ರಿಕ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲವಾದರೂ, ಉಕ್ರೇನ್ ಇದನ್ನು ಅತ್ಯುತ್ತಮ ಪ್ರಸ್ತಾಪ ಎಂದು ಕರೆದಿದೆ. ಉಕ್ರೇನ್ ಕಪ್ಪು ಸಮುದ್ರದಲ್ಲಿ ಇಂಧನ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾದಾಟ ನಿಲ್ಲಿಸಲು ಸಿದ್ಧವಿದ್ದು, ಮುಂಚೂಣಿ ಯುದ್ಧ ಸರಣಿಯಲ್ಲಿ ಬೇರಾವ ಷರತ್ತುಗಳಿಲ್ಲದೆ ಕದನ ವಿರಾಮ ಸಾರಲು ಪರಿಶೀಲಿಸುತ್ತಿದೆ ಎಂದು ಹೇಳಿದೆ.

ರಷ್ಯಾ ಜೊತೆಗಿನ ಯುದ್ಧದ ಅಂತ್ಯಕ್ಕೆ ಭಾರತದ ಶಾಂತಿ ಪ್ರಸ್ತಾಪವೇ ಅತ್ಯಂತ ಸಮಗ್ರವಾಗಿದೆ; ಉಕ್ರೇನ್ ಶ್ಲಾಘನೆ
Zelensky With Pm ModiImage Credit source: AP
ಸುಷ್ಮಾ ಚಕ್ರೆ
|

Updated on: Oct 03, 2026 | 6:17 PM

Share

ಕೈವ್, ಅಕ್ಟೋಬರ್ 3: ರಷ್ಯಾ ಮತ್ತು ಉಕ್ರೇನ್ ನಡುವಿನ ದೀರ್ಘಕಾಲದ ಯುದ್ಧವನ್ನು ಕೊನೆಗೊಳಿಸಲು ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ಬಂದಿರುವ 4 ಪ್ರಮುಖ ರಾಷ್ಟ್ರಗಳ ರಾಜತಾಂತ್ರಿಕ ಯೋಜನೆಗಳಲ್ಲಿ ಭಾರತದ ಪ್ರಸ್ತಾಪವೇ ಅತ್ಯಂತ ಸಮಗ್ರವಾಗಿದೆ ಎಂದು ಉಕ್ರೇನ್ ಹೇಳಿದೆ. ಈ ಬಗ್ಗೆ ಕೈವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ ಆ್ಯಂಡ್ರಿ ಸಿಬಿಹಾ, ಪ್ರಸ್ತುತ ಉಕ್ರೇನ್ ಮುಂದೆ 4 ಅಂತಾರಾಷ್ಟ್ರೀಯ ಶಾಂತಿ ಪ್ರಸ್ತಾಪಗಳಿವೆ. ಅವುಗಳಲ್ಲಿ ಭಾರತದ ಪ್ರಸ್ತಾಪ ನಾಲ್ಕೂ ಯೋಜನೆಗಳಲ್ಲಿ ಅತ್ಯಂತ ಸಮಗ್ರ ಯೋಜನೆಯಾಗಿದೆ ಎಂದಿದ್ದಾರೆ. ಮೊದಲ ಬಾರಿಗೆ ಭಾರತವು ಈ ಯುದ್ಧವನ್ನು ಕೊನೆಗೊಳಿಸಲು ಸಕ್ರಿಯ ಮಧ್ಯಸ್ಥಿಕೆ ವಹಿಸಲು ಆಸಕ್ತಿ ವ್ಯಕ್ತಪಡಿಸಿದೆ. ಆದರೆ, ಭಾರತದ ಪ್ರಸ್ತಾಪಗಳೇನು ಎಂಬುದರ ಬಗ್ಗೆ ಉಕ್ರೇನ್ ಪೂರ್ತಿ ಮಾಹಿತಿ ಬಹಿರಂಗಪಡಿಸಿಲ್ಲ.

ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧವನ್ನು ಕೊನೆಗೊಳಿಸಲು ಜಾಗತಿಕ ಮಟ್ಟದಲ್ಲಿ ಸಲ್ಲಿಕೆಯಾಗಿರುವ 4 ಪ್ರಮುಖ ಶಾಂತಿ ಪ್ರಸ್ತಾಪಗಳಲ್ಲಿ ಭಾರತ ನೀಡಿರುವ ಪ್ರಸ್ತಾಪವೇ ಅತ್ಯಂತ ಸಮಗ್ರವಾಗಿದೆ ಎಂದು ಉಕ್ರೇನ್ ಬಹಿರಂಗವಾಗಿ ಪ್ರಶಂಸಿಸಿದೆ. 2022ರ ಫೆಬ್ರವರಿಯಲ್ಲಿ ಯುದ್ಧ ಪ್ರಾರಂಭವಾದ ನಂತರ ರಷ್ಯಾ-ಉಕ್ರೇನ್ ನಡುವೆ ಮಧ್ಯಸ್ಥಿಕೆ ವಹಿಸುವ ಭಾರತದ ರಾಜತಾಂತ್ರಿಕ ನಿಲುವಿನಲ್ಲಿ ಕಂಡುಬಂದಿರುವ ಅತ್ಯಂತ ಮಹತ್ವದ ಬದಲಾವಣೆ ಇದಾಗಿದೆ. ಶಾಂತಿ ಪ್ರಕ್ರಿಯೆಯಲ್ಲಿ ಸಕ್ರಿಯ ಮಧ್ಯಸ್ಥಿಕೆ ವಹಿಸಲು ಭಾರತ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಮುಕ್ತ ಮನಸ್ಸು ತೋರಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಪ್ರಸ್ತಾಪ: ಎರಡೂ ದೇಶಗಳು ಪರಸ್ಪರ ಇಂಧನ ಹಾಗೂ ವಿದ್ಯುತ್ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ನಿಲ್ಲಿಸಲು ಕದನ ವಿರಾಮ ಒಪ್ಪಂದ ರೂಪಿಸುವುದು.

ಟರ್ಕಿ ಮತ್ತು ಈಜಿಪ್ಟ್ ಪ್ರಸ್ತಾಪಗಳು: ಕಪ್ಪು ಸಮುದ್ರದಲ್ಲಿ ದಾಳಿಗಳನ್ನು ಸ್ಥಗಿತಗೊಳಿಸಿ, ಉಕ್ರೇನಿಯನ್ ಧಾನ್ಯ ಹಾಗೂ ಕೃಷಿ ಉತ್ಪನ್ನಗಳ ರಫ್ತಿಗೆ ಸುರಕ್ಷಿತ ನೌಕಾ ಮಾರ್ಗ ಒದಗಿಸುವುದು.

ಇದನ್ನೂ ಓದಿ:ಇಂಧನ ಘಟಕಗಳ ಮೇಲಿನ ದಾಳಿ ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಂದ: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ 

ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿ ತಡೆಯುವ ಕದನ ವಿರಾಮಕ್ಕೆ ಉಕ್ರೇನ್ ಸಮ್ಮತಿಸಬೇಕಾದರೆ, ಅದನ್ನು ಕಪ್ಪು ಸಮುದ್ರದ ಜಲಮಾರ್ಗಗಳಲ್ಲಿನ ದಾಳಿ ತಡೆಯುವ ಕದನ ವಿರಾಮಕ್ಕೂ ಕಡ್ಡಾಯವಾಗಿ ಅನ್ವಯಿಸಬೇಕು ಎಂದು ಉಕ್ರೇನ್ ವಿದೇಶಾಂಗ ಸಚಿವ ಆ್ಯಂಡ್ರಿ ಸಿಬಿಹಾ ಪ್ರಮುಖ ಷರತ್ತನ್ನು ವಿಧಿಸಿದ್ದಾರೆ.

ಉಕ್ರೇನ್‌ನ ಪ್ರಮುಖ ಷರತ್ತು:

ಉಕ್ರೇನ್ ಕೇವಲ ಇಂಧನ ನೆಲೆಗಳ ಮೇಲಿನ ದಾಳಿ ನಿಲ್ಲಿಸುವ ಅಮೆರಿಕದ ಪ್ರಸ್ತಾಪವನ್ನು ಪ್ರತ್ಯೇಕವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಸಚಿವ ಸಿಬಿಹಾ ಸ್ಪಷ್ಟಪಡಿಸಿದ್ದಾರೆ. “ನಾವು ಇಂಧನ ಮತ್ತು ಕಪ್ಪು ಸಮುದ್ರದ ಮೇಲಿನ ಕದನ ವಿರಾಮಕ್ಕೆ ಸಿದ್ಧರಿದ್ದೇವೆ. ಆದರೆ ಈ ಎರಡೂ ಪ್ರಸ್ತಾಪಗಳನ್ನು ಒಟ್ಟಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಉಕ್ರೇನ್ ಇದಕ್ಕೆ ಒಪ್ಪಿಗೆ ನೀಡಲಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ಪುಟಿನ್, ಉಕ್ರೇನ್ ಯುದ್ಧ ಅಂತ್ಯಕ್ಕೆ ಮೋದಿ ಬಳಿ ಉತ್ತಮ ಪ್ಲ್ಯಾನ್​ಗಳಿವೆ ಎಂದ ರಷ್ಯಾ ಅಧ್ಯಕ್ಷ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಪ್ರಧಾನಿ ನರೇಂದ್ರ ಮೋದಿ “ಯುದ್ಧ ಕೊನೆಗೊಳಿಸುವ ಕುರಿತು ಸದಾ ಪ್ರಸ್ತಾಪಿಸುತ್ತಾರೆ ಮತ್ತು ಅವರ ಬಳಿ ಅತ್ಯುತ್ತಮ ಕಲ್ಪನೆಗಳಿವೆ” ಎಂದು ಹೇಳಿದ ಬೆನ್ನಲ್ಲೇ ಉಕ್ರೇನ್ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ