Iondon Bridge: ಲಂಡನ್‌ನ ಸೌತ್‌ವಾರ್ಕ್‌ ರೈಲ್ವೆ ನಿಲ್ದಾಣದಲ್ಲಿ ಭಾರಿ ಬೆಂಕಿ!

ಲಂಡನ್‌ನ ಸೌತ್‌ವಾರ್ಕ್‌ನ ಯೂನಿಯನ್ ಸ್ಟ್ರೀಟ್‌ನಲ್ಲಿರುವ ರೈಲ್ವೆ ಕಮಾನುಗಳ ಅಡಿಯಲ್ಲಿ ಬುಧವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಈ ಪ್ರದೇಶಕ್ಕೆ ರೈಲುಗಳನ್ನು ಬರುವುದನ್ನು ನಿಲ್ಲಿಸಲಾಗಿದೆ.

Iondon Bridge: ಲಂಡನ್‌ನ ಸೌತ್‌ವಾರ್ಕ್‌ ರೈಲ್ವೆ ನಿಲ್ದಾಣದಲ್ಲಿ ಭಾರಿ ಬೆಂಕಿ!
Southwark railway station
Edited By:

Updated on: Aug 17, 2022 | 5:16 PM

ಲಂಡನ್‌: ಲಂಡನ್‌ನ ಸೌತ್‌ವಾರ್ಕ್‌ನ ಯೂನಿಯನ್ ಸ್ಟ್ರೀಟ್‌ನಲ್ಲಿರುವ ರೈಲ್ವೆ ಕಮಾನುಗಳ ಅಡಿಯಲ್ಲಿ ಬುಧವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಈ ಪ್ರದೇಶಕ್ಕೆ ರೈಲುಗಳನ್ನು ಬರುವುದನ್ನು ನಿಲ್ಲಿಸಲಾಗಿದೆ. ಅಲ್ಲಿಂದ ಅನೇಕರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಲಂಡನ್ ಅಗ್ನಿಶಾಮಕ ದಳ ತಿಳಿಸಿದೆ. ಯೂನಿಯನ್ ಸ್ಟ್ರೀಟ್‌ನಲ್ಲಿ ಬೆಂಕಿಯನ್ನು ನಿಭಾಯಿಸಲು ಒಟ್ಟು ಹತ್ತು ಅಗ್ನಿಶಾಮಕ ಇಂಜಿನ್‌ಗಳು ಮತ್ತು ಸುಮಾರು 70 ಅಗ್ನಿಶಾಮಕ ಸಿಬ್ಬಂದಿಯನ್ನು ಸೇವೆಗೆ ನಿಯೋಜಿಸಲಾಗಿದೆ.

ಹಲವು ಗಂಟೆಗಳ ನಂತರ ಬೆಂಕಿಯನ್ನು ನಂದಿಸುವ ಮೂಲಕ ಬೆಂಕಿಯ ಉರಿಯು ಕಡಿಮೆಯಾಗಿದೆ. ಸೌತ್‌ವಾರ್ಕ್‌ನಲ್ಲಿ ರೈಲ್ವೇ ಕಮಾನುಗಳ ಅಡಿಯಲ್ಲಿ ಬೆಂಕಿಯನ್ನು ನಂದಿಸಲಾಗಿದ್ದು. ಸಿಬ್ಬಂದಿಗಳನ್ನು ಕಾರ್ಯಚಾರಣೆಯನ್ನು ಮಾಡುತ್ತಿದ್ದಾರೆ. ಯಾವುದೇ ಗಾಯಗಳ ವರದಿಗಳಿಲ್ಲ. ನಮ್ಮ ಅಗ್ನಿಶಾಮಕ ತನಿಖಾಧಿಕಾರಿಗಳು ಈಗ ಬೆಂಕಿಯ ಕಾರಣದ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಲಂಡನ್ ಅಗ್ನಿಶಾಮಕ ದಳ ಟ್ವೀಟ್ ಮಾಡಿದೆ.

ಇದನ್ನೂ ಓದಿ
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಸೌತ್‌ವಾರ್ಕ್ ಮತ್ತು ಲಂಡನ್ ಬ್ರಿಡ್ಜ್ ನಿಲ್ದಾಣಗಳ ಮೂಲಕ ಹಾದು ಹೋಗುವ ಜುಬಿಲಿ ಲೈನ್‌ನಲ್ಲಿನ ಸೇವೆಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದ್ದು, ಲಂಡನ್‌ನ ದಕ್ಷಿಣಕ್ಕೆ ಸೇವೆ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ.

ಸೇವೆಗಳನ್ನು ಪುನರಾರಂಭಿಸುವ ಮೊದಲು ಟ್ರ್ಯಾಕ್‌ಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನೆಟ್‌ವರ್ಕ್ ರೈಲ್ ವಕ್ತಾರರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ದೃಶ್ಯಾವಳಿಗಳು ರೈಲ್ವೆ ಕಮಾನು ಅಡಿಯಲ್ಲಿ ದೊಡ್ಡ ಹೊಗೆ ಬರುತ್ತಿರುವುದನ್ನು ನೋಡಬಹುದು, ಅಗ್ನಿಶಾಮಕ ದಳವು ಸಂಪೂರ್ಣ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದೆ. ಸೌತ್‌ವಾರ್ಕ್‌ನಲ್ಲಿರುವ ರೈಲ್ವೇ ಕಮಾನುಗಳ ಕೆಳಗಿರುವ ಕಾರ್ ಪಾರ್ಕ್‌ಗೆ ಬೆಂಕಿ ವ್ಯಾಪಿಸಿದೆ ಎಂದು ವರದಿಗಳು ತಿಳಿಸಿವೆ, ಅಲ್ಲಿ ಹಲವಾರು ಎಲೆಕ್ಟ್ರಿಕ್ ಕಾರುಗಳು ಹೊತ್ತಿ ಉರಿಯುತ್ತಿವೆ ಎಂದು ಹೇಳಲಾಗಿದೆ.

ಈ ಪ್ರದೇಶದಲ್ಲಿರುವ ನಿವಾಸಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿದ್ದು, ಕೆಲವೊಂದು ನಿವಾಸಿಗಳಿಗೆ ತಮ್ಮ ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚುವಂತೆ ಒತ್ತಾಯಿಸಲಾಗಿದೆ ಎಂದು ಮಿರರ್‌ನಲ್ಲಿ ವರದಿಯಾಗಿದೆ.

 

Published On - 5:15 pm, Wed, 17 August 22