ಇರಾನ್-ಇಸ್ರೇಲ್ ಯುದ್ಧ ಯಾವಾಗ ಕೊನೆಗೊಳ್ಳುತ್ತೆ? ಟ್ರಂಪ್ ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ಯುದ್ಧದ ಅಂತ್ಯದ ಬಗ್ಗೆ ಮಾತನಾಡಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಸೇರಿ ತೀರ್ಮಾನ ಕೈಗೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಖಮೇನಿ ಹತ್ಯೆಗೀಡಾದ ನಂತರ ಸಂಘರ್ಷ ತೀವ್ರಗೊಂಡಿದೆ. ಇದೀಗ ಖಮೇನಿ ಮಗ ಮೊಜ್ತಬಾ ಉತ್ತರಾಧಿಕಾರಿಯಾಗಿದ್ದಾರೆ. ಯುದ್ಧದಲ್ಲಿ ಉಭಯ ದೇಶಗಳಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿವೆ.

ಇರಾನ್-ಇಸ್ರೇಲ್ ಯುದ್ಧ ಯಾವಾಗ ಕೊನೆಗೊಳ್ಳುತ್ತೆ? ಟ್ರಂಪ್ ಹೇಳಿದ್ದೇನು?
ಟ್ರಂಪ್-ನೆತನ್ಯಾಹು
Image Credit source: Reuters

Updated on: Mar 09, 2026 | 10:16 AM

ವಾಷಿಂಗ್ಟನ್, ಮಾರ್ಚ್​ 09: ಇರಾನ್​(Iran) ಜತೆಗಿನ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂಬ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಸೇರಿ ತೆಗೆದುಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ದಿ ಟೈಮ್ಸ್​​ ಆಫ್​ ಇಸ್ರೇಲ್​​ಗೆ ನೀಡಿದ್ದ ಸಂದರ್ಶನದಲ್ಲಿ ಟ್ರಂಪ್ ಮಾತನಾಡಿ, ತಾನು ಮತ್ತು ನೆತನ್ಯಾಹು ಇಲ್ಲದೇ ಇದ್ದಿದ್ದರೆ ಇಸ್ಲಾಮಿಕ್ ಗಣರಾಜ್ಯ ಇಸ್ರೇಲ್ ಅನ್ನು ನಾಶಮಾಡುತ್ತಿತ್ತು ಎಂದು ಹೇಳಿದ್ದಾರೆ.

ಇರಾನ್, ಇಸ್ರೇಲ್ ಮತ್ತು ಅದರ ಸುತ್ತಲಿನ ಎಲ್ಲವನ್ನೂ ನಾಶಮಾಡಲು ಹೊರಟಿತ್ತು. ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ, ಇಸ್ರೇಲ್ ಅನ್ನು ನಾಶಮಾಡಲು ಬಯಸಿದ ದೇಶವನ್ನು ನಾವು ನಾಶಪಡಿಸಿದ್ದೇವೆ ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ಇರಾನ್ ಜತೆಗಿನ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ತಾವು ಮಾತ್ರ ನಿರ್ಧರಿಸುತ್ತಾರೋ ಅಥವಾ ನೆತನ್ಯಾಹು ಕೂಡ ತಮ್ಮ ಅಭಿಪ್ರಾಯ ತಿಳಿಸುತ್ತಾರೋ ಎಂಬ ಪ್ರಶ್ನೆಗೆ ಟ್ರಂಪ್ ಪ್ರತುಕ್ರಿಯಿಸಿದ್ದಾರೆ. ನಾವಿಬ್ಬರೂ ಮಾತುಕತೆ ನಡೆಸುತ್ತಿದ್ದೇವೆ ಎಂದರು.

ನಾನು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ, ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ನೆತನ್ಯಾಹು ಅವರ ಅಭಿಪ್ರಾಯವನ್ನು ಹೇಳಬಹುದಾದರೂ ಟ್ರಂಪ್ ಅವರ ನಿರ್ಧಾರವು ಅಂತಿಮವಾಗಿರುತ್ತದೆ . ಅಮೆರಿಕ ತನ್ನ ದಾಳಿಯನ್ನು ನಿಲ್ಲಿಸಲು ನಿರ್ಧರಿಸಿದ ನಂತರವೂ ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಮುಂದುವರೆಸಬಹುದೇ ಎಂಬ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯಿಸಿ ಅದು ಅಗತ್ಯ ಎಂದು ನನಗೆ ಅನಿಸುತ್ತಿಲ್ಲ ಎಂದರು.

ಮತ್ತಷ್ಟು ಓದಿ: ಇರಾನ್​ ರಾಜಧಾನಿ ಮೇಲೆ ಇಸ್ರೇಲ್ ವಾಯುದಾಳಿ: ತೈಲ ಡಿಪೋಗಳು ಸ್ಫೋಟ, ಬಾನೆತ್ತರಕ್ಕೆ ಚಿಮ್ಮಿದ ಬೆಂಕಿ

ಫೆಬ್ರವರಿ 28 ಎಂದು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಮೇಲೆ ದಾಳಿ ಮಾಡಿದ್ದವು, ಇದು ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯ ಹತ್ಯೆಗೆ ಕಾರಣವಾಗಿತ್ತು.
ಇರಾನ್​ನ ತಜ್ಞರ ಸಭೆಯು ಖಮೇನಿಯ ಮಗ ಮೊಜ್ತಬಾ ಅವರನ್ನು ದೇಶದ ಮುಂದಿನ ಸರ್ವೋಚ್ಚ ನಾಯಕನನ್ನಾಗಿ ನೇಮಿಸಿದೆ.

ಈ ಯುದ್ಧದಲ್ಲಿ ಇರಾನ್‌ನಲ್ಲಿ ಕನಿಷ್ಠ 1,230 ಜನರು, ಲೆಬನಾನ್‌ನಲ್ಲಿ ಕನಿಷ್ಠ 397 ಜನರು ಮತ್ತು ಇಸ್ರೇಲ್‌ನಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 1 ರಂದು ಸೌದಿ ಅರೇಬಿಯಾದಲ್ಲಿ ಸೈನಿಕರ ಮೇಲೆ ಇರಾನ್ ನಡೆಸಿದ ದಾಳಿಯಿಂದ ಗಾಯಗೊಂಡು ಸೇನಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us