ಶಾಲಾ ಆವರಣದಲ್ಲಿ ಇರಾನ್ ಫೈಟರ್ ಜೆಟ್ ಪತನ; ಇಬ್ಬರು ಸಿಬ್ಬಂದಿ, ಓರ್ವ ನಾಗರಿಕ ಸಾವು

ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಬಿಕ್ಕಟ್ಟು ನಿರ್ವಹಣಾ ಘಟಕದ ಮುಖ್ಯಸ್ಥ ಹೊನವರ್ ಅವರು ನಗರದ ಕೇಂದ್ರ ಜಿಲ್ಲೆ ಮೊನಾಜೆಮ್‌ನಲ್ಲಿ ಬೆಳಿಗ್ಗೆ 9:00 ಗಂಟೆಗೆ ವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿತ್ತು ಎಂದು ಹೇಳಿದರು.

ಶಾಲಾ ಆವರಣದಲ್ಲಿ ಇರಾನ್ ಫೈಟರ್ ಜೆಟ್ ಪತನ; ಇಬ್ಬರು ಸಿಬ್ಬಂದಿ, ಓರ್ವ ನಾಗರಿಕ  ಸಾವು
ಇರಾನ್​​ನ ಫೈಟರ್ ಜೆಟ್ ಪತನ
Edited By:

Updated on: Feb 22, 2022 | 1:12 PM

ಟೆಹ್ರಾನ್: ಇರಾನ್‌ನ ಎಫ್-5 ಫೈಟರ್ ಜೆಟ್ ( Iranian F-5 fighter jet) ಸೋಮವಾರ ವಾಯುವ್ಯ ನಗರದ ತಬ್ರಿಜ್‌ನಲ್ಲಿ(Tabriz) ಶಾಲೆಯ ಆವರಣಕ್ಕೆ ಅಪ್ಪಳಿಸಿದ್ದು ಇಬ್ಬರು ಸಿಬ್ಬಂದಿ ಮತ್ತು ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಅದೃಷ್ಟವಶಾತ್ ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಶಾಲೆಯನ್ನು ಮುಚ್ಚಲಾಗಿದೆ” ಎಂದು ಸ್ಥಳೀಯ ಅಧಿಕಾರಿ ಮೊಹಮ್ಮದ್-ಬಾಘರ್ ಹೊನಾರ್ವರ್ ರಾಜ್ಯ ದೂರದರ್ಶನಕ್ಕೆ ತಿಳಿಸಿದರು. ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಬಿಕ್ಕಟ್ಟು ನಿರ್ವಹಣಾ ಘಟಕದ ಮುಖ್ಯಸ್ಥ ಹೊನವರ್ ಅವರು ನಗರದ ಕೇಂದ್ರ ಜಿಲ್ಲೆ ಮೊನಾಜೆಮ್‌ನಲ್ಲಿ ಬೆಳಿಗ್ಗೆ 9:00 ಗಂಟೆಗೆ (0530 GMT) ವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿತ್ತು ಎಂದು ಹೇಳಿದರು. ಸ್ಥಳೀಯ ರೆಡ್ ಕ್ರೆಸೆಂಟ್ ಸಂಸ್ಥೆಯ ಮುಖ್ಯಸ್ಥರು ವಿಮಾನವು ಹೊರಗಿನ ಗೋಡೆಗೆ ಅಪ್ಪಳಿಸಿತು ಮತ್ತು ಸತ್ತವರಲ್ಲಿ ಒಬ್ಬರು ಹತ್ತಿರದ ನಿವಾಸಿ ಎಂದು ಹೇಳಿದರು. ಅಪಘಾತದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ಜನಸಂದಣಿಯು ನೋಡುತ್ತಿದ್ದಂತೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸುತ್ತಿರುವುದನ್ನು ಅಧಿಕೃತ ಸುದ್ದಿ ಸಂಸ್ಥೆ ಐಆರ್​​ಎನ್​​ನ ವಿಡಿಯೊ ತುಣುಕಿನಲ್ಲಿ ಕಾಣಬಹುದು.  ಶಾಲೆಯ ಕಪ್ಪುಬಣ್ಣದ ಮುಂಭಾಗದ ಅವಶೇಷಗಳ ನಡುವೆ ಯುದ್ಧವಿಮಾನದ ಸುಟ್ಟ ಅವಶೇಷಗಳನ್ನು ನೋಡಬಹುದಾಗಿದೆ.  ವಿಮಾನವನ್ನು ತಬ್ರಿಜ್‌ನಲ್ಲಿರುವ ಶಾಹಿದ್ ಫಕೌರಿ ವಾಯುನೆಲೆಯಲ್ಲಿ ಇರಿಸಲಾಗಿತ್ತು ಎಂದು ಬೇಸ್ ಕಮಾಂಡರ್ ಜನರಲ್ ರೆಜಾ ಯೂಸೆಫಿ ಮಾಧ್ಯಮದವರಿಗೆ ತಿಳಿಸಿದರು. ತರಬೇತಿ ಕಾರ್ಯಾಚರಣೆಯಿಂದ ಹಿಂತಿರುಗುತ್ತಿರುವಾಗ ತಾಂತ್ರಿಕ ಸಮಸ್ಯೆಯಿಂದಾಗಿ ಲ್ಯಾಂಡಿಂಗ್‌ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.


ಇರಾನ್‌ನ ವಾಯುಪಡೆಯು ಸುಮಾರು 300 ಯುದ್ಧವಿಮಾನಗಳನ್ನು ಹೊಂದಿದೆ, ಹೆಚ್ಚಾಗಿ ರಷ್ಯಾದ MiG-29 ಮತ್ತು ಸುಖೋಯ್-25 ಯುದ್ಧವಿಮಾನಗಳು ಸೋವಿಯತ್ ಯುಗದ ಹಿಂದಿನವು, ಜೊತೆಗೆ ಚೀನಾದ F-7ಗಳು ಮತ್ತು ಫ್ರೆಂಚ್ ಮಿರಾಜ್ F1 ಗಳನ್ನು ಹೊಂದಿದೆ.

ನೌಕಾಪಡೆಯು ಕೆಲವು ಅಮೆರಿಕನ್ F-4 ಮತ್ತು F-5 ಜೆಟ್‌ಗಳನ್ನು ಸಹ ಒಳಗೊಂಡಿದೆ.  ಅದು 1979 ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಹೊರಹಾಕಲ್ಪಟ್ಟ ಪಾಶ್ಚಿಮಾತ್ಯ ಬೆಂಬಲಿತ ಶಾ ಆಡಳಿತಕ್ಕಿಂತಲೂ ಹಳೇದು.
ಇವುಗಳಲ್ಲಿ ಕೆಲವು ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ತಜ್ಞರು ಹೇಳುತ್ತಾರೆ. ಆಗಸ್ಟ್ 2006 ರಲ್ಲಿ, ಇರಾನ್ “ಅಜರಾಖ್ಶ್” (ಮಿಂಚು) ಎಂಬ ಹೆಸರಿನ ಹೊಸ ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಿದೆ ಎಂದು ಘೋಷಿಸಿತು, ಇದು F-5 ಅನ್ನು ಹೋಲುತ್ತದೆ.

ಒಂದು ವರ್ಷದ ನಂತರ ಅದು ಅಮೆರಿಕನ್ F-18 ಅನ್ನು ಹೋಲುತ್ತದೆ ಎಂದು ಹೇಳುವ ಮೂಲಕ ಅದನ್ನು “ಸೇಘೆ” (ಥಂಡರ್) ಎಂದು ಕರೆಯುವ ಮತ್ತೊಂದು ಸ್ವದೇಶಿ ಜೆಟ್ ಅನ್ನು ನಿರ್ಮಿಸಿದೆೆ. ಆದರೆ ಕೆಲವು ಪಾಶ್ಚಿಮಾತ್ಯ ಮಿಲಿಟರಿ ತಜ್ಞರು ಸೈಘೆ F-5 ನ ವ್ಯುತ್ಪನ್ನವಾಗಿದೆ ಎಂದು ಹೇಳಿದ್ದಾರೆ. ಸೋಮವಾರದ ಫೈಟರ್ ಜೆಟ್ ಅಪಘಾತವು ಡಿಸೆಂಬರ್ 2019 ರಿಂದ ಇರಾನ್ ವರದಿ ಮಾಡಿದ ಮಿಲಿಟರಿ ವಿಮಾನವನ್ನು ಒಳಗೊಂಡ ಮೊದಲ ಅಪಘಾತವಾಗಿದೆ.

ಇದನ್ನೂ ಓದಿ:  ಸಂಯಮದಿಂದ ಸಮಸ್ಯೆ ಪರಿಹರಿಸಿಕೊಳ್ಳಿ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧಿವೇಶನದಲ್ಲಿ ಉಕ್ರೇನ್​-ರಷ್ಯಾಕ್ಕೆ ಭಾರತದ ಸಲಹೆ