Abbas-Ali Soleimani: ಇರಾನ್​​ನ ಹಿರಿಯ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆ

|

Updated on: Apr 26, 2023 | 3:13 PM

ಇರಾನ್​​ನ ಹಿರಿಯ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಅವರನ್ನು ಹತ್ಯೆ ಮಾಡಲಾಗಿದೆ.

Abbas-Ali Soleimani: ಇರಾನ್​​ನ ಹಿರಿಯ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆ
ಅಬ್ಬಾಸ್-ಅಲಿ ಸೊಲೈಮಾನಿ
Follow us on

ಇರಾನ್​​ನ ಹಿರಿಯ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ (Abbas-Ali Soleimani) ಅವರನ್ನು ಹತ್ಯೆ ಮಾಡಲಾಗಿದೆ. ಇರಾನ್​​ನಲ್ಲಿ ನಡೆದ​​ ದಾಳಿಯಲ್ಲಿ ಇರಾನ್ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಇರಾನ್‌ನ ಪ್ರಬಲ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಅವರನ್ನು ಸಶಸ್ತ್ರ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆಯಾದಾಗ ಬ್ಯಾಂಕ್‌ನೊಳಗಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಬಂದು ಬ್ಯಾಂಕ್ ಗಾರ್ಡ್​​ನಿಂದ ಕಾವಲುಗಾರನ ಬಂದೂಕನ್ನು ಕಸಿದುಕೊಂಡು ಅಯತೊಲ್ಲಾ ಅಬ್ಬಾಸ್-ಅಲಿ ಸೊಲೈಮಾನಿ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಅಬ್ಬಾಸ್-ಅಲಿ ಸೊಲೈಮಾನಿ ಅವರು ದೇಶದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ತಜ್ಞರ ಸಭೆಯ ಸದಸ್ಯರಾಗಿದ್ದರು. ಇರಾನ್ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಅವರ ಮೇಲೆ ಬುಧವಾರದಂದು ಉತ್ತರ ಪ್ರಾಂತ್ಯದ ಮಜಂದರಾನ್‌ನ ಬಾಬೋಲ್ಸರ್ ನಗರದಲ್ಲಿ ದಾಳಿ ನಡೆದಿದೆ. ದಾಳಿ ನಡೆದ ಕೂಡಲೇ ದಾಳಿ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

Published On - 3:05 pm, Wed, 26 April 23