ಅಮೆರಿಕ ಏರ್​ಬೇಸ್ ಮೇಲೆ ಮತ್ತೊಂದು ರಾಕೆಟ್ ದಾಳಿ

|

Updated on: Jan 15, 2020 | 2:05 PM

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಜನರಲ್ ಖಾಸಿಂ ಸುಲೇಮಾನಿ ಹತ್ಯೆ ನಂತರ ಸಂಘರ್ಷ ತಾರಕಕ್ಕೇರಿದೆ. ಇರಾನ್, ಅಮೆರಿಕ ಏರ್​ಬೇಸ್ ಮೇಲೆ ಮತ್ತೊಂದು ರಾಕೆಟ್ ದಾಳಿ ನಡೆಸಿದೆ. ಇರಾಕ್​ನಲ್ಲಿರೋ ಅಲ್-ತಾಜಿ ಏರ್​ಬೇಸ್​ ಮೇಲೆ ಎರಡು ರಾಕೆಟ್​ಗಳಿಂದ ಅಟ್ಯಾಕ್ ಮಾಡಿದೆ. ಅಲ್-ತಾಜಿ ವಾಯುನೆಲೆಯ ವಾಯುನೆಲೆಯಲ್ಲಿ ಇರಾಕ್ ಮತ್ತು ಅಮೆರಿಕ ಸೈನಿಕರಿದ್ದರು. ಇರಾನ್ ಸೇನೆ ರಾಕೆಟ್ ದಾಳಿಯನ್ನು ಖಚಿತಪಡಿಸಿದೆ. ವಿಪಕ್ಷಗಳ ವಿರುದ್ಧ ಟ್ರಂಪ್ ಗರಂ: ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿದಾಳಿ ಎಚ್ಚರಿಕೆ […]

ಅಮೆರಿಕ ಏರ್​ಬೇಸ್ ಮೇಲೆ ಮತ್ತೊಂದು ರಾಕೆಟ್ ದಾಳಿ
ಸಾಂದರ್ಭಿಕ ಚಿತ್ರ
Follow us on

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಜನರಲ್ ಖಾಸಿಂ ಸುಲೇಮಾನಿ ಹತ್ಯೆ ನಂತರ ಸಂಘರ್ಷ ತಾರಕಕ್ಕೇರಿದೆ. ಇರಾನ್, ಅಮೆರಿಕ ಏರ್​ಬೇಸ್ ಮೇಲೆ ಮತ್ತೊಂದು ರಾಕೆಟ್ ದಾಳಿ ನಡೆಸಿದೆ. ಇರಾಕ್​ನಲ್ಲಿರೋ ಅಲ್-ತಾಜಿ ಏರ್​ಬೇಸ್​ ಮೇಲೆ ಎರಡು ರಾಕೆಟ್​ಗಳಿಂದ ಅಟ್ಯಾಕ್ ಮಾಡಿದೆ. ಅಲ್-ತಾಜಿ ವಾಯುನೆಲೆಯ ವಾಯುನೆಲೆಯಲ್ಲಿ ಇರಾಕ್ ಮತ್ತು ಅಮೆರಿಕ ಸೈನಿಕರಿದ್ದರು. ಇರಾನ್ ಸೇನೆ ರಾಕೆಟ್ ದಾಳಿಯನ್ನು ಖಚಿತಪಡಿಸಿದೆ.

ವಿಪಕ್ಷಗಳ ವಿರುದ್ಧ ಟ್ರಂಪ್ ಗರಂ:
ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿದಾಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕ ‘ಡೆಮಾಕ್ರಟಿಕ್’ ಪಕ್ಷದ ಸದಸ್ಯರು ಟ್ರಂಪ್ ಅಧಿಕಾರ ಮೊಟಕುಗೊಳಿಸಲು ಸಿದ್ಧತೆ ನಡೆದಿದ್ದಾರೆ. ಆದರೆ ಈ ಬಗ್ಗೆ ತಮ್ಮ ಆಕ್ರೋಶ ಹೊರ ಹಾಕಿರು ಟ್ರಂಪ್. ಡೆಮಾಕ್ರಟಿಕ್ ಸದಸ್ಯರು ಇರಾನ್ ಕೈಗೊಂಬೆಗಳಾಗಿದ್ದಾರೆ ಎಂದಿದ್ದಾರೆ.

ಪಾಕ್ ನೆಲದಲ್ಲಿ ಹಿಮ ಪ್ರಳಯ:
ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತ ಮತ್ತು ಮಳೆಯಾಗುತ್ತಿದ್ದು, 80ಕ್ಕೂ ಹೆಚ್ಚುಮಂದಿ ಪ್ರಾಣಬಿಟ್ಟಿದ್ದಾರೆ. ಬೃಹತ್ ಗಾತ್ರದ ಮಂಜುಗಡ್ಡೆಗಳು ನೆಲಕ್ಕೆ ಅಪ್ಪಳಿಸಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹತ್ತಾರು ಮನೆಗಳು ಹಿಮಪಾತದ ಆರ್ಭಟಕ್ಕೆ ನಜ್ಜುಗುಜ್ಜಾಗಿ ಹೋಗಿವೆ.

Published On - 9:05 am, Wed, 15 January 20