Pneumonia: ಚೀನಾದಲ್ಲಿ ಕೊರೊನಾ ಬಳಿಕ ನಿಗೂಢ ನ್ಯುಮೋನಿಯಾದಿಂದ ತತ್ತರಿಸಿದ ಜನ, ಶಾಲೆಗಳು ಬಂದ್
ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸಿರುವ ಚೀನಾಗೆ ಈಗ ಮತ್ತೊಂದು ಬರ ಸಿಡಿಲು ಎರಗಿದಂತಾಗಿದೆ. ಹೊಸ ರೋಗವು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ. ಇಲ್ಲಿನ ಶಾಲೆಗಳಲ್ಲಿ ನಿಗೂಢ ನ್ಯುಮೋನಿಯಾ ವೇಗವಾಗಿ ಹರಡುತ್ತಿದೆ. ಈ ಆತಂಕಕಾರಿ ಪರಿಸ್ಥಿತಿ ಕೋವಿಡ್ ಬಿಕ್ಕಟ್ಟಿನ ಆರಂಭದ ದಿನಗಳನ್ನು ನೆನಪಿಸುತ್ತದೆ.
ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸಿರುವ ಚೀನಾಗೆ ಈಗ ಮತ್ತೊಂದು ಬರ ಸಿಡಿಲು ಎರಗಿದಂತಾಗಿದೆ. ಹೊಸ ರೋಗವು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ. ಇಲ್ಲಿನ ಶಾಲೆಗಳಲ್ಲಿ ನಿಗೂಢ ನ್ಯುಮೋನಿಯಾ(Pneumonia) ವೇಗವಾಗಿ ಹರಡುತ್ತಿದೆ. ಈ ಆತಂಕಕಾರಿ ಪರಿಸ್ಥಿತಿ ಕೋವಿಡ್ ಬಿಕ್ಕಟ್ಟಿನ ಆರಂಭದ ದಿನಗಳನ್ನು ನೆನಪಿಸುತ್ತದೆ.
ಈಶಾನ್ಯಕ್ಕೆ 500 ಮೈಲುಗಳಷ್ಟು ದೂರದಲ್ಲಿರುವ ಬೀಜಿಂಗ್ ಮತ್ತು ಲಿಯಾನಿಂಗ್‌ನಲ್ಲಿರುವ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ದಾಖಲಿಸಲಾಗುತ್ತಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ನಿಗೂಢ ನ್ಯುಮೋನಿಯಾ ಏಕಾಏಕಿ ಹೆಚ್ಚಿದ ಕಾರಣ ಶಾಲೆಗಳನ್ನು ಮುಚ್ಚಲಾಗಿದೆ.
ಈ ನಿಗೂಢ ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳಲ್ಲಿ ಶ್ವಾಸಕೋಶದಲ್ಲಿ ಊತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಲಕ್ಷಣಗಳು ಕಂಡುಬರುತ್ತಿವೆ. ಕೆಮ್ಮು ಮತ್ತು ಜ್ವರ, ಆರ್‌ಎಸ್‌ವಿ ಮತ್ತು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಲಕ್ಷಣಗಳು ಆ ಮಕ್ಕಳಲ್ಲಿ ಕಂಡುಬರುತ್ತಿಲ್ಲ.
ಮತ್ತಷ್ಟು ಓದಿ: Child Health: ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ
ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮೈಕೋಪ್ಲಾಸ್ಮಾ ನ್ಯುಮೋನಿಯಾ ಅಥವಾ ವಾಕಿಂಗ್ ನ್ಯುಮೋನಿಯಾ ಇರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದು, ಜನರು ಜಾಗರೂಕರಾಗಿರಲು ಸೂಚಿಸಿದೆ. ಇದರೊಂದಿಗೆ, ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳಲ್ಲಿ ಹರಡುವ ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಚೀನಾದ ಆರೋಗ್ಯ ಅಧಿಕಾರಿಗಳನ್ನು ಕೇಳಿದೆ.
ಬೀಜಿಂಗ್‌ನ ಲಿಯಾನಿಂಗ್‌ನಲ್ಲಿರುವ ಮಕ್ಕಳ ಆಸ್ಪತ್ರೆಗಳು ಮಕ್ಕಳಿಂದ ತುಂಬಿವೆ. ಹಲವು ನಗರಗಳಲ್ಲಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ತಮ್ಮ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಬಗ್ಗೆ ಚಿಂತಿತರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಈ ಉಸಿರಾಟದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಜನರು ವಿವಿಧ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ