ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ಇಸ್ಕಾನ್ ಕೆಲವು ಸಲಹೆಗಳನ್ನು ನೀಡಿದೆ. ಇಸ್ಕಾನ್ ಸಹೋದ್ಯೋಗಿಗಳು ಹಾಗೂ ಇತರೆ ಅನುಯಾಯಿಗಳಿಗೆ ಕೇಸರಿ ಬಟ್ಟೆ ಧರಿಸದಂತೆ ಜಪಮಣಿಗಳು ಎದುರು ಕಾಣಿಸದಂತೆ ನೋಡಿಕೊಳ್ಳಿ, ಜತೆಗೆ ತಿಲಕವಿಡುವುದನ್ನು ತಪ್ಪಿಸಿ ಎಂದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಇಸ್ಕಾನ್ ಕೋಲ್ಕತ್ತಾದ ವಕ್ತಾರ ರಾಧರಮ್ ದಾಸ್ ಅವರಿಂದ ಸಲಹೆ ಬಂದಿದೆ.
ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಸಂಘರ್ಷದಿಂದ ತಪ್ಪಿಸಿಕೊಳ್ಳುವುದು ಮುಖ್ಯ ಹಾಗಾಗು ಸನ್ಯಾಸಿಗಳು ಹಾಗೂ ಇತರೆ ಹಿಂದೂಗಳು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂ ಸಮುದಾಯದ ಮೇಲಿನ ಹಿಂಸಾಚಾರ, ದಾಳಿ ಹೆಚ್ಚಿರುವಂತೆಯೇ ಭಾರತದಿಂದ ಢಾಕಾಕ್ಕೆ ತೆರಳಿದ್ದ ಹಿಂದೂ ಪ್ರವಾಸಿಗರೊಬ್ಬರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಕೋಲ್ಕತಾ ನಿವಾಸಿ ಸಾಯನ್ ಘೋಷ್ ಅವರು ನ. 23ರಂದು ಢಾಕಾದಲ್ಲಿರುವ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದರು. ತಾನು ನ. 26ರಂದು ಸ್ನೇಹಿತನೊಂದಿಗೆ ಐಸ್‌ಕ್ರೀಂ ಪಾರ್ಲರ್‌ಗೆ ತೆರಳಿದ್ದ ವೇಳೆ ಹಲವಾರು ಮುಸ್ಲಿಂ ಯುವಕರು ಸುತ್ತುವರೆದು ದಾಳಿ ನಡೆಸಿದ್ದಾರೆ.
ಮತ್ತಷ್ಟು ಓದಿ: ಬಾಂಗ್ಲಾದೇಶದ ಪ್ರಸ್ತುತ ಸ್ಥಿತಿ, ಚಿನ್ಮಯ್ ದಾಸ್ ಬಂಧನ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಇಸ್ಕಾನ್
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ, ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರ ಬಿಡುಗಡೆಗೆ ಆಗ್ರಹಿಸಿ ಒಂದು ಸಾವಿರಕ್ಕೂ ಅಧಿಕ ಸಂತರು ಸೋಮವಾರ ಪಶ್ಚಿಮ ಬಂಗಾಲದ ಉತ್ತರ 24 ಪರಗಣದ ಪೆಟ್ರಾಪೋಲ್ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಭಾರತೀಯ ಸಂತ ಸಮಿತಿ ಈ ಪ್ರತಿಭಟನೆ ಹಮ್ಮಿಕೊಂಡಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ