Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಬಾಡಿಗೆಗೆ ಸಿಕ್ತಾರಂತೆ ಬಾಯ್​ಪ್ರೆಂಡ್ಸ್​, ಅಡುಗೆಯಿಂದ ಹಿಡಿದು ಪೋಷಕರನ್ನು ಇಂಪ್ರೆಸ್ ಮಾಡುವುದರಲ್ಲೂ ಎತ್ತಿದ ಕೈ

ಮೊದ ಮೊದಲು ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು, ಹೀಗಾಗಿ ಮದುವೆ ತುಸು ಬೇಗನೇ ಆಗಿಬಿಡುತ್ತಿತ್ತು, ಬಾಲ್ಯವಿವಾಹಗಳು ಕೂಡ ಹೆಚ್ಚಿದ್ದವು, ವರ್ಷಗಳು ಕಳೆದಂತೆ ಎಲ್ಲವೂ ಬದಲಾಗತೊಡಗಿತು. ಹಲವು ವರ್ಷಗಳ ಬಳಿಕ ಶಿಕ್ಷಣ ಪೂರೈಸಿ ಮದುವೆಯಾಗಿಬಿಡುತ್ತಿದ್ದರು. ಆದರೆ ಈಗಿನ ಜನರು ವೃತ್ತಿಯ ಬಗ್ಗೆ ಸಾಕಷ್ಟು ಆಲೋಚನೆ ಮಾಡುತ್ತಾರೆ.

ಇಲ್ಲಿ ಬಾಡಿಗೆಗೆ ಸಿಕ್ತಾರಂತೆ ಬಾಯ್​ಪ್ರೆಂಡ್ಸ್​, ಅಡುಗೆಯಿಂದ ಹಿಡಿದು ಪೋಷಕರನ್ನು ಇಂಪ್ರೆಸ್ ಮಾಡುವುದರಲ್ಲೂ ಎತ್ತಿದ ಕೈ
ಪ್ರಾತಿನಿಧಿಕ ಚಿತ್ರImage Credit source: Vecteezy
Follow us
ನಯನಾ ರಾಜೀವ್
|

Updated on: Dec 03, 2024 | 11:08 AM

ಮೊದ ಮೊದಲು ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು, ಹೀಗಾಗಿ ಮದುವೆ ತುಸು ಬೇಗನೇ ಆಗಿಬಿಡುತ್ತಿತ್ತು, ಬಾಲ್ಯವಿವಾಹಗಳು ಕೂಡ ಹೆಚ್ಚಿದ್ದವು, ವರ್ಷಗಳು ಕಳೆದಂತೆ ಎಲ್ಲವೂ ಬದಲಾಗತೊಡಗಿತು. ಹಲವು ವರ್ಷಗಳ ಬಳಿಕ ಶಿಕ್ಷಣ ಪೂರೈಸಿ ಮದುವೆಯಾಗಿಬಿಡುತ್ತಿದ್ದರು. ಆದರೆ ಈಗಿನ ಜನರು ವೃತ್ತಿಯ ಬಗ್ಗೆ ಸಾಕಷ್ಟು ಆಲೋಚನೆ ಮಾಡುತ್ತಾರೆ. ಒಂದೊಳ್ಳೆ ಸಂಬಳ, ಉತ್ತಮ ಕೆಲಸ ಸಿಗುವವರೆಗೂ ಮದುವೆಯೆಂಬ ಮಾತೇ ಇಲ್ಲ. ಮದುವೆ ಬಗ್ಗೆ ಯೋಚಿಸುವುದು ಹಾಗಿರಲಿ ಡೇಟಿಂಗ್ ಮಾಡಲು ಕೂಡ ಸಮಯವಿಲ್ಲ.

ಇದೀಗ ವಿಯೆಟ್ನಾಂನಲ್ಲಿ ಬಾಡಿಗೆ ಬಾಯ್​ಫ್ರೆಂಡ್​ ಕೂಡ ಸಿಗುತ್ತಿದ್ದು, ಅವರು ಅಡುಗೆ ಮಾಡುವುದರಿಂದ ಹಿಡಿದು ಪೋಷಕರನ್ನು ಮೆಚ್ಚಿಸುವ ಕೆಲಸವನ್ನು ಕೂಡ ಮಾಡ್ತಾರಂತೆ. ಕುಟುಂಬದಲ್ಲಿ ಮದುವೆಯಾಗಬೇಕೆಂಬ ಒತ್ತಡ ಹೆಚ್ಚಾದಾಗ ಹುಡುಗಿಯರು ಈ ರೀತಿ ಬಾಡಿಗೆ ಬಾಯ್​ಫ್ರೆಂಡ್​ನನ್ನು ಕರೆತಂದು ಪೋಷಕರನ್ನು ಮೆಚ್ಚಿಸುತ್ತಿದ್ದಾರೆ.

ವಿಯೆಟ್ನಾಂನಲ್ಲಿ ಜನರು ಮದುವೆಯಾಗುವುದಕ್ಕೆ ಹಿಂದುಮುಂದು ನೋಡುತ್ತಿದ್ದಾರೆ. ಬಾಡಿಗೆ ಸಂಗಾತಿಯನ್ನು ಕಂಡುಕೊಳ್ಳುವುದರಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಹೆಚ್ಚು. ಪೋಷಕರು ಅಳಿಯನಿಂದ ಬಯಸುವ ಎಲ್ಲಾ ಗುಣಗಳು ಈ ಬಾಡಿಗೆ ಬಾಯ್​ಫ್ರೆಂಡ್​ನಲ್ಲಿರುತ್ತದೆಯಂತೆ. ಅಡುಗೆ ಮಾಡುವುದರಿಂದ ಹಿಡಿದು ಎಲ್ಲಾ ಕೆಲಸದಲ್ಲೂ ಪರಿಣಿತರಿರುತ್ತಾರೆ.

ಮತ್ತಷ್ಟು ಓದಿ: Viral: ಪಾರ್ಕಿಂಗ್​ನಲ್ಲಿ ಲೇಟಾಗಿ ಪೇ ಮಾಡಿದಕ್ಕೆ ಬಿತ್ತು 2 ಲಕ್ಷ ರೂ. ದಂಡ

ನೋಡುವುದಕ್ಕೂ ಅಷ್ಟೇ ಸುಂದರವಾಗಿರುತ್ತಾರೆ. ಅವರ ಸ್ನೇಹಿತರೇ ಅವರನ್ನು ನೋಡಿ ಅಸೂಯೆ ಪಡುತ್ತಾರಂತೆ. ಈ ರೀತಿ ಎಲ್ಲಾ ಉತ್ತಮ ನಡವಳಿಕೆ, ಉತ್ತಮ ಗುಣವನ್ನು ನೋಡಿ ಪೋಷಕರು ಕೂಡ ಸಂತೋಷ ಪಡುತ್ತಾರಂತೆ. ಈ ರೀತಿಯ ಗೆಳೆಯನನ್ನು ಪಡೆಯಲು, ನೀವು ಕೇವಲ ಹಣವನ್ನು ಖರ್ಚು ಮಾಡಬೇಕು ಅಷ್ಟೆ, ಒಂದು ದಿನಕ್ಕೆ ಬಾಯ್​ಫ್ರೆಂಡ್​ನನ್ನು ಬಾಡಿಗೆ ಪಡೆಯಬೇಕಾದರೆ 10-20 ಡಾಲರ್​ಗಳನ್ನು ಅಂದರೆ 800 ರಿಂದ 1700 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

ನಿಮ್ಮ ಕುಟುಂಬವನ್ನು ಪರಿಚಯಿಸಲು ಬಯಸಿದರೆ ವೆಚ್ಚ ಸ್ವಲ್ಪ ಹೆಚ್ಚಾಗುತ್ತದೆ. ನೀವು ಸುಮಾರು 1 ಮಿಲಿಯನ್ ವಿಯೆಟ್ನಾಮೀಸ್ ಡಾಂಗ್ ಅಂದರೆ 3400 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

ಅವರು ಒಂದು ವಾರ ಮುಂಚಿತವಾಗಿಯೇ ಹುಡುಗಿಯನ್ನು ಭೇಟಿಯಾಗಲು ಪ್ರಾರಂಭಿಸುತ್ತಾರೆ. ಈ ಒಪ್ಪಂದ ಯಾವುದೇ ದೈಹಿಕ ಅಥವಾ ಮಾನಸಿಕ ಭಾವನೆಯುಳ್ಳ ಸಂಬಂಧ ಇದಾಗಿರುವುದಿಲ್ಲ, ಇದನ್ನು ಸಂಪೂರ್ಣವಾಗಿ ವೃತ್ತಪರ ಸಂಬಂಧವಷ್ಟೇ ಎಂದು ಹೇಳಲಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು