Viral: ಪಾರ್ಕಿಂಗ್ನಲ್ಲಿ ಲೇಟಾಗಿ ಪೇ ಮಾಡಿದಕ್ಕೆ ಬಿತ್ತು 2 ಲಕ್ಷ ರೂ. ದಂಡ
ಯುನೈಟೆಡ್ ಕಿಂಗ್‌ಡಮ್‌ನ ಡರ್ಬಿಯಲ್ಲಿ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪಾರ್ಕಿಂಗ್ ಶುಲ್ಕ ಪಾವತಿಯಲ್ಲಿ ವಿಳಂಬವಾದ ಕಾರಣ ಮಹಿಳೆಯೊಬ್ಬರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐದು ನಿಮಿಷಗಳೊಳಗೆ ಪಾವತಿಸಲು ನಿಯಮವಿರುವುದರಿಂದ ಈ ದಂಡ ವಿಧಿಸಲಾಗಿದೆ ಎಂದು ಪಾರ್ಕಿಂಗ್ ಅಧಿಕಾರಿಗಳು ಹೇಳಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಹಣ ಪಾವತಿಸಲು ವಿಳಂಬ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಎರಡು ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ಯುನೈಟೆಡ್ ಕಿಂಗ್‌ಡಂನ ಡರ್ಬಿಯಲ್ಲಿ ನಡೆದಿದೆ. ಪಾರ್ಕಿಂಗ್ ಹಣ ಪಾವತಿಸಿ ಆ ಸ್ಥಳದಿಂದ ನಿರ್ಗಮಿಸಲು ಪ್ರತಿಯೊಬ್ಬ ಚಾಲಕನಿಗೆ ಕೇವಲ ಐದು ನಿಮಿಷಗಳನ್ನು ನೀಡಲಾಗುತ್ತದೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮಹಿಳೆ ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ದಂಡ ವಿಧಿಸಲಾಗಿದೆ ಎಂದು ಪಾರ್ಕಿಂಗ್ ಅಧಿಕಾರಿಗಳು ತಿಳಿಸಿದ್ದಾರೆ.
ನೆಟ್‌ವರ್ಕ್ ಸಮಸ್ಯೆಯಿಂದಾಗಿ ಹಣ ಪಾವತಿಸುವುದು ತಡವಾಗಿದೆ. ಇದರಿಂದ ನನ್ನದೇನು ತಪ್ಪಿಲ್ಲ ಎಂದು 2 ಲಕ್ಷ ರೂ. ದಂಡ ವಿಧಿಸಿರುವುದನ್ನು ಖಂಡಿಸಿ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಲೆಹಂಗಾ, ಸೀರೆ ಬದಲು ವಧು ಬಿಕಿನಿ ತೊಟ್ಟು ಮದುವೆ ಮಂಟಪಕ್ಕೆ ಆಗಮಿಸಿದ್ದು ನಿಜಾನಾ? ಇಲ್ಲಿದೆ ಸತ್ಯಾಂಶ
“ಕಾರ್ ಪಾರ್ಕ್‌ನಲ್ಲಿ ಪಾರ್ಕಿಂಗ್ ಹಣ ಪಾವತಿಸಲು ಗರಿಷ್ಠ ಐದು ನಿಮಿಷಗಳ ಕಾಲಾವಕಾಶವಿದೆ. ನಿಯಮಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಚಾಲಕನ ಜವಾಬ್ದಾರಿ” ಎಂದು ಎಕ್ಸೆಲ್ ಪಾರ್ಕಿಂಗ್‌ನ ಪ್ರತಿನಿಧಿಯೊಬ್ಬರು ಹೇಳಿರುವುದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ