Viral: ನಡು ರಸ್ತೆಯಲ್ಲಿಯೇ ಹುಡುಗಿಯನ್ನು ಚುಡಾಯಿಸಿ ಯುವಕ ಗ್ರಹಚಾರ ಬಿಡಿಸಿದ ಜನ; ವಿಡಿಯೋ ವೈರಲ್‌

ಈ ಪುಂಡ ಪೋಕರಿಗಳು ಯುವತಿಯರು ಅಥವಾ ಶಾಲಾ ಹುಡುಗಿಯರನ್ನು ಚುಡಾಯಿಸುವಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದ್ದು, ಪುಂಡನೊಬ್ಬ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಡುಗಿಗೆ ಚುಡಾಯಿಸಿದ್ದು, ಈ ದೃಶ್ಯವನ್ನು ಕಂಡು ಅಲ್ಲಿದ್ದ ಜನ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿ ಆತನ ಗ್ರಹಚಾರ ಬಿಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ನಡು ರಸ್ತೆಯಲ್ಲಿಯೇ ಹುಡುಗಿಯನ್ನು ಚುಡಾಯಿಸಿ ಯುವಕ ಗ್ರಹಚಾರ ಬಿಡಿಸಿದ ಜನ; ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 02, 2024 | 4:09 PM

ಪುಂಡ ಪೋಕರಿಗಳ ಕಾಟದಿಂದ ಮಹಿಳೆಯರು, ಯುವತಿಯರು ನೆಮ್ಮದಿಯಾಗಿ ಓಡಾಡಲು ಕೂಡ ಕಷ್ಟಸಾಧ್ಯವಾಗಿದೆ. ಅದರಲ್ಲೂ ಒಂಟಿ ಯುವತಿ ಬೀದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಳೆಂದರೆ ಆಕೆಯನ್ನು ಚುಡಾಯಿಸಲೆಂದೇ ಕೆಲ ಪುಂಡರು ಕಾದು ಕುಳಿತಿರುತ್ತಾರೆ. ಹೀಗೆ ಪುಂಡರು ಹೆಣ್ಣು ಮಕ್ಕಳನ್ನು ಚುಡಾಯಿಸುವಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದ್ದು, ಪುಂಡನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಡುಗಿಗೆ ಚುಡಾಯಿಸಿದ್ದು, ಈ ದೃಶ್ಯವನ್ನು ಕಂಡು ಅಲ್ಲಿದ್ದ ಜನ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಯುವತಿಯನ್ನು ಚುಡಾಯಿಸಿದ ಪುಂಡನಿಗೆ ಜನರೆಲ್ಲರೂ ಸೇರಿ ನಡು ರಸ್ತೆಯಲ್ಲಿಯೇ ಜಾಡಿಸಿ, ಆತನ ಚಳಿ ಬಿಡಿಸಿದ್ದಾರೆ. ಯುವತಿಯೊಬ್ಬಳಿಗೆ ಚುಡಾಯಿಸುತ್ತಿದ್ದಾಗ ಆತ ಅಲ್ಲಿದ್ದ ಸ್ಥಳೀಯರ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು, ಇಂತಹ ಪುಂಡ ಪೋಕರಿಗಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಜನರೆಲ್ಲಾ ಸೇರಿ ನಡುರಸ್ತೆಯಲ್ಲಿಯೇ ಆತನಿಗೆ ಸರಿಯಾಗಿ ಥಳಿಸಿದ್ದಾರೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವತಿಯನ್ನು ಚುಡಾಯಿಸಿದ ಪುಂಡನಿಗೆ ಸ್ಥಳೀಯರೆಲ್ಲರೂ ಸೇರಿ ನಡು ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿ ತಕ್ಕ ಪಾಠ ಕಲಿಸಿದಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಲೆಹಂಗಾ, ಸೀರೆ ಬದಲು ವಧು ಬಿಕಿನಿ ತೊಟ್ಟು ಮದುವೆ ಮಂಟಪಕ್ಕೆ ಆಗಮಿಸಿದ್ದು ನಿಜಾನಾ? ಇಲ್ಲಿದೆ ಸತ್ಯಾಂಶ

ಡಿಸೆಂಬರ್‌ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 58 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇನ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹುಡುಗಿಯನ್ನು ಚುಡಾಯಿಸಿದವನಿಗೆ ಜನ ತಕ್ಕ ಪಾಠ ಕಲಿಸಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಜನರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ