ಶುಭ ಶುಕ್ರವಾರ: ಗಾಜಾ ಪಟ್ಟಿಯಲ್ಲಿ 11 ದಿನಗಳ ಸಂಘರ್ಷಕ್ಕೆ ಕೊನೆ ಸಾರಿದ ಬೆಂಜಮಿನ್ ನೇತನ್ಯಾಹು

|

Updated on: May 21, 2021 | 9:53 AM

ಇಸ್ರೇಲ್ ಭದ್ರತಾ ಸಚಿವಾಲಯವು ಬೇಷರತ್ತಾದ ಕದನ ವಿರಾಮ ಒಪ್ಪಿದೆ. ಈಜಿಪ್ಟ್ ಶಿಫಾರಸನ್ನು ಇಸ್ರೇಲ್‌ ಸ್ವೀಕರಿಸಿದೆ ಎಂದು ನೇತನ್ಯಾಹು ಹೇಳಿದ್ದರೆ ಹಮಾಸ್ ಸಂಘಟನೆಯು ಕದನ ವಿರಾಮವನ್ನು ದೃಢಪಡಿಸಿದೆ.

ಶುಭ ಶುಕ್ರವಾರ: ಗಾಜಾ ಪಟ್ಟಿಯಲ್ಲಿ 11 ದಿನಗಳ ಸಂಘರ್ಷಕ್ಕೆ ಕೊನೆ ಸಾರಿದ ಬೆಂಜಮಿನ್ ನೇತನ್ಯಾಹು
ಶುಭ ಶುಕ್ರವಾರ: ಗಾಜಾ ಪಟ್ಟಿಯಲ್ಲಿ 11 ದಿನಗಳ ಸಂಘರ್ಷಕ್ಕೆ ಕೊನೆ ಸಾರಿದ ಬೆಂಜಮಿನ್ ನೇತನ್ಯಾಹು
Follow us on

ಗಾಜಾ ಪಟ್ಟಿಯಲ್ಲಿ ಇಂದು ಶುಭ ಶುಕ್ರವಾರ. ಸದ್ಯಕ್ಕೆ ಯುದ್ಧ ವಿರಾಮ ಘೋಷಿಸಲಾಗಿದೆ. ಗಾಜಾ ಪಟ್ಟಿಯಲ್ಲಿ 11 ದಿನ ನಡೆದ ಸಶಸ್ತ್ರ ಸಂಘರ್ಷಕ್ಕೆ ಕೊನೆ ಸಾರುತ್ತಿರುವುದಾಗಿ ಇಸ್ರೇಲ್ ದೇಶದ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಪ್ರಕಟಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 2:00 ಗಂಟೆಗೆ ಕದನ ಜಾರಿಗೆ ಬರಲಿದೆ

ಕದನ ವಿರಾಮ ಘೋಷಣೆ ಮೂಲಕ ಗಾಜಾ ಪಟ್ಟಿಯಲ್ಲಿ ನಡೆದ ಸಶಸ್ತ್ರ ಸಂಘರ್ಷ ಕೊನೆಗೊಂಡಿದೆ. ಕದನ ವಿರಾಮ ಘೋಷಿಸಲು ಇಸ್ರೇಲ್ ಮತ್ತು ಹಮಾಸ್ ದ್ವಿಪಕ್ಷೀಯವಾಗಿ ಒಪ್ಪಿಗೆ ಸೂಚಿಸಿವೆ ಎಂದು ಕದನ ವಿರಾಮದ ಬಗ್ಗೆ ಬೆಂಜಮಿನ್ ನೇತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್ ಭದ್ರತಾ ಸಚಿವಾಲಯವು ಬೇಷರತ್ತಾದ ಕದನ ವಿರಾಮ ಒಪ್ಪಿದೆ. ಈಜಿಪ್ಟ್ ಶಿಫಾರಸನ್ನು ಇಸ್ರೇಲ್‌ ಸ್ವೀಕರಿಸಿದೆ ಎಂದು ನೇತನ್ಯಾಹು ಹೇಳಿದ್ದರೆ ಹಮಾಸ್ ಸಂಘಟನೆಯು ಕದನ ವಿರಾಮವನ್ನು ದೃಢಪಡಿಸಿದೆ.

ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ಸರ್ಕಾರ ಮತ್ತು ಹಮಾಸ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.  ಕೆಲವು ದಿನಗಳಿಂದ ಎರಡೂ ಕಡೆಯವರು ಶೆಲ್ ದಾಳಿಯಲ್ಲಿ ತೊಡಗಿದ್ದರು. ವರದಿಗಳ ಪ್ರಕಾರ, ಗಾಜಾದಲ್ಲಿ 10 ಮಕ್ಕಳು ಸೇರಿದಂತೆ 32 ಪ್ಯಾಲೆಸ್ತೀನಿಯನ್ನರು  ಸಾವಿಗೀಡಾಗಿದ್ದಾರೆ. 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಕೇರಳದ ಮಹಿಳೆ ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದರು.

ಗಾಜಾ ಪಟ್ಟಿ ಹಿಂಸಾಚಾರವು ಮುಸ್ಲಿಂ ಉಪವಾಸದ ರಂಜಾನ್ ಮಾಸದ ವೇಳೆ ನಡೆದಿದ್ದು, ಇದು ಧಾರ್ಮಿಕ ಭಾವನೆಗಳನ್ನು ಮತ್ತಷ್ಟು ಕೆರಳಿಸಿತ್ತು. ಜೆರುಸಲೆಂ ಓಲ್ಡ್ ಸಿಟಿ ಮತ್ತು ಫ್ಲ್ಯಾಷ್ ಪಾಯಿಂಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲಿ ಪೊಲೀಸ್ ಕ್ರಮಗಳು ಅಶಾಂತಿಗೆ ಕಾರಣವಾಗಿದ್ದವು.

(Israel and Hamas in Truce mood, Egyptian mediated truce between Israel and Hamas began on Friday)

Gaza Violence: ರಾಕೆಟ್ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್​ಗೆ ಇದೆ: ಅಮೆರಿಕ ಅಧ್ಯಕ್ಷ ಜೊ ಬೈಡನ್

Published On - 9:30 am, Fri, 21 May 21