35 ವರ್ಷಗಳ ಹಿಂದೆ ಹುಟ್ಟಿಕೊಂಡ ಹಮಾಸ ಸಂಘಟನೆ ಇಸ್ರೇಲಿನ ಸೇನೆಗೆ ಸವಾಲಾಗಿದ್ದು ಆಚ್ಚರಿ ಮೂಡಿಸುತ್ತದೆ!

ಸುಮಾರು 20 ಲಕ್ಷ ಪಾಲಿಸ್ತೀನಿಯರಿಗೆ ಮುತ್ತಿಗೆ ಭಾರೀ ಸಂಕಷ್ಟಕ್ಕೆ ಸಿಲುಕಿಸಿದೆಯಾದರೂ, ಹಮಾಸ ಉಗ್ರರು ಶಸ್ತ್ರಾಸ್ತ್ರಗಳ ದಾಸ್ತಾನು ಮಾಡಿಟ್ಟುಕೊಳ್ಳುವುದನ್ನು ತಡೆಯಲು ಅದರ ಅವಶ್ಯಕತೆ ಜಾಸ್ತಿಯಿರುವುದರಿಂದ ಮುತ್ತಿಗೆಯನ್ನು ತೆರವು ಮಾಡಲಾಗದು ಎಂದು ಇಸ್ರೇಲ್ ವಾದಿಸುತ್ತಾ ಬಂದಿದೆ.

35 ವರ್ಷಗಳ ಹಿಂದೆ ಹುಟ್ಟಿಕೊಂಡ ಹಮಾಸ ಸಂಘಟನೆ ಇಸ್ರೇಲಿನ ಸೇನೆಗೆ ಸವಾಲಾಗಿದ್ದು ಆಚ್ಚರಿ ಮೂಡಿಸುತ್ತದೆ!
ಇಸ್ರೇಲಿನ ಮೇಲೆ ಹಮಾಸ ದಾಳಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2021 | 12:54 AM

ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್): ಗಾಜಾವನ್ನಾಳುತ್ತಿರುವ ಹಮಾಸ್ ಮತ್ತು ಇಸ್ರೇಲ್ ನಡುವೆ ಈಗ ನಡೆಯುತ್ತಿರುವ ನಾಲ್ಕನೇ ಯುದ್ಧದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ಪಡೆಯು ಇಸ್ರೇಲ್ ಮೇಲೆ 4,000 ಕ್ಕಿಂತ ಹೆಚ್ಚು ರಾಕೆಟ್ ದಾಳಿ ನಡೆಸಿದ್ದು ಅವುಗಳಲ್ಲಿ ಕೆಲವು ಇಸ್ರೇಲಿನ ಭೂಭಾಗದೊಳಗೆ ಬಿದ್ದು ಹಾನಿಯುಂಟು ಮಾಡಿವೆ ಮತ್ತು ಹಮಾಸ್ ನಡೆಸಿದ ರಾಕೆಟ್ ದಾಳಿ ಹಿಂದೆಂದಿಗಿಂತಲೂ ಹೆಚ್ಚು ನಿಖರವಾಗಿದೆ. ಹಮಾಸ್ ಉಗ್ರರು ನಡೆಸಿರುವ ಅಭೂತಪೂರ್ವ ದಾಳಿಯು ಟೆಲ್ ಅವಿವ್ ಮೆಟ್ರೊಪಾಲಿಟನ್ ನಗರದ ಉತ್ತರ ಭಾಗವನ್ನು ತಲುಪಿದೆ, ಡ್ರೋನ್ ಮೂಲಕವೂ ದಾಳಿ ನಡೆಸಿರುವ ಅವರು ಸಬ್​ಮೇರಿನ್​ನೊಂದಿಗೆ ಆಕ್ರಮಣ ನಡೆಸುವ ಪ್ರಯತ್ನವನ್ನೂ ಮಾಡಿದ್ದಾರೆ. ಇಸ್ರೇಲ್ ಮತ್ತು ಈಜಿಪ್ಟ್​ಗಳಿಂದ ಕಳೆದ 14 ವರ್ಷಗಳಿಂದ ಮುತ್ತಿಗೆಗೊಳಗಾಗಿದ್ದರೂ ತಮ್ಮ ನೆಲೆಯಲ್ಲಿ ತಯಾರಿಸಿದ ಆಯುಧಗಳ ಪ್ರದರ್ಶನವನ್ನು ಹಮಾಸ ಉಗ್ರರು ಮಾಡುತ್ತಿದ್ದಾರೆ.

‘ಹಮಾಸ್ ಉಗ್ರರು ಈ ಬಾರಿ ನಡೆಸಿರುವ ಬಾಂಬ್ ದಾಳಿಯ ಪ್ರಮಾಣ ಬಹಳ ದೊಡ್ಡದಾಗಿದೆ ಮತ್ತು ಇದುವರೆಗೆ ನಡೆದುಕೊಂಡು ಬಂದಿರುವ ಸಂಘರ್ಷದಲ್ಲಿ ಹೆಚ್ಚು ನಿಖರವಾದುದ್ದಾಗಿದೆ. ಮುತ್ತಿಗೆಯಲ್ಲಿದ್ದರೂ ಅವರೇನು ಮಾಡಿದ್ದಾರೆ ಅನ್ನುವುದನ್ನು ಗಮನಿಸಿದರೆ ಶಾಕ್ ಆಗುತ್ತದೆ ಎಂದು ಗಾಜಾ ನಗರದಲ್ಲಿರುವ ಅಲ್-ಅಜರ್ ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದ ಪ್ರೊಪೆಸರ್ ಆಗಿರುವ ಖೈಮರ್ ಅಬುಸಾದಾ ಹೇಳುತ್ತಾರೆ.

ಸುಮಾರು 20 ಲಕ್ಷ ಪಾಲಿಸ್ತೀನಿಯರಿಗೆ ಮುತ್ತಿಗೆ ಭಾರೀ ಸಂಕಷ್ಟಕ್ಕೆ ಸಿಲುಕಿಸಿದೆಯಾದರೂ, ಹಮಾಸ ಉಗ್ರರು ಶಸ್ತ್ರಾಸ್ತ್ರಗಳ ದಾಸ್ತಾನು ಮಾಡಿಟ್ಟುಕೊಳ್ಳುವುದನ್ನು ತಡೆಯಲು ಅದರ ಅವಶ್ಯಕತೆ ಜಾಸ್ತಿಯಿರುವುದರಿಂದ ಮುತ್ತಿಗೆಯನ್ನು ತೆರವು ಮಾಡಲಾಗದು ಎಂದು ಇಸ್ರೇಲ್ ವಾದಿಸುತ್ತಾ ಬಂದಿದೆ.

1987ರಲ್ಲಷ್ಟೇ ಅಸ್ತಿತ್ವಕ್ಕೆ ಬಂದ ಹಮಾಸ್ ಸಂಘಟನೆಯು ಅಲ್ಪಾವಧಿಯಲ್ಲೇ ಸುಧಾರಿತ ಕ್ಷಿಪಣಿಗಳನ್ನು ತಯಾರು ಮಾಡಲು ಶಕ್ತವಾಗಿದ್ದು ಎಲ್ಲರಲ್ಲಿ ಆಶ್ಚರ್ಯ ಹುಟ್ಟಿಸುತ್ತಿದೆ.

2005ರಲ್ಲಿ ಗಾಜಾದಿಂದ ಇಸ್ರೇಲ್ ತನ್ನ ಸೇನೆಯನ್ನು ವಾಪಸ್ಸು ಕರೆಸಿಕೊಂಡ ನಂತರ ಹಮಾಸ ತನ್ನ ದೀರ್ಘಾವಧಿಯ ಬೆಂಬಲಿಗರಾಗಿರುವ ಇರಾನ್ ಮತ್ತು ಸಿರಿಯಾದಿಂದ ಗೌಪ್ಯವಾಗಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳಲಾರಂಭಿಸಿತು ಎಂದು ಇಸ್ರೇಲಿ ಸೇನೆ ಹೇಳುತ್ತದೆ.

ದೂರದ ರೇಂಜಿನ ರಾಕೆಟ್​ಗಳು, ಭಾರೀ ಸಾಮರ್ಥ್ಯದ ಸ್ಫೋಟಕಗಳು, ಲೋಹ ಮತ್ತು ಯಂತ್ರೋಪಕರಣಗಳು ಈಜಿಪ್ಟ್​ಗೆ ಹೊಂದಿಕೊಂಡಿರುವ ಗಾಜಾ ದಕ್ಷಿಣ ಭಾಗದ ಗಡಿಯಲ್ಲಿ ಕೂಡಿಡಲಾಗಿದೆ.

2007ರಲ್ಲಿ ಹಮಾಸ ಹೋರಾಟಗಾರರು ಪಾಲಸ್ಟೀನಿ ಅಧಿಕಾರವನ್ನು ಗಾಜಾದಿಂದ ಹೊರಗಟ್ಟಿ ಅಲ್ಲಿನ ಕರಾವಳಿ ಭಾಗದ ಮೇಲೆ ಪ್ರಭುತ್ವ ಸಾಧಿಸಿದಾಗ ಇಸ್ರೇಲ್ ಮತ್ತು ಈಜಿಪ್ಟ್ ಬಿಗಿಯಾದ ಮುತ್ತಿಗೆಯನ್ನು ಹೇರಿದವು.

ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಹಮಾಸ್​ನಲ್ಲಿ ಮುಂದುವರೆದು ಈ ಸಂಘಟನೆ ಬಗ್ಗೆ ಸಹಾನುಭೂತಿ ಇಟ್ಟುಕೊಂಡಿದ್ದ ಇಸ್ಲಾಮಿಕ್ ಲೀಡರ್ ಮೊಹಮ್ಮದ್ ಮೊರ್ಸಿ ಈಜಿಪ್ಟ್​ನ ಅಧ್ಯಕ್ಷನಾದಾಗ ಅದು ಮತ್ತಷ್ಟು ತೀವ್ರಗೊಂಡಿತು ಎಂದು ಇಸ್ರೇಲಿ ಸೇನೆ ಹೇಳುತ್ತದೆ. 2012 ರಲ್ಲಿ ಮೊರ್ಸಿಯನ್ನು ಈಜಿಪ್ಟ್ ಸೇನೆ ಪದಚ್ಯುತಗೊಳಿಸಿತು.

ವಿದೇಶಗಳಲ್ಲಿ ತಯಾರಾಗಿರುವ ಕ್ಯಾಟ್ಯುಶಾಸ್ ಮತ್ತು ಇರಾನ್ ಸರಬರಾಜು ಮಾಡಿರುವ ಪಜರ್-5 ದೂರದ ರೇಂಜಿನ ರಾಕೆಟ್​ಗಳನ್ನು ಹಾಮಾಸ್ ಉಗ್ರರು ತಮ್ಮಲಿಟ್ಟುಕೊಂಡಿದ್ದು 2008 ಮತ್ತು 2012ರಲ್ಲಿ ನಡೆದ ಯುದ್ಧಗಳಲ್ಲಿ ಅವುಗಳನ್ನು ಉಪಯೋಗಿಸಿದ್ದರು.

ಮೊರ್ಸಿ ಪದಚ್ಯುತಗೊಂಡ ನಂತರ ಈಜಿಪ್ಟ್ ಕಾರ್ಯಾಚರಣೆ ನಡೆಸಿ ಕಳ್ಳಸಾಗಣೆಗೆ ಉಪಯೋಗಿಸ್ಪಲಡುತ್ತಿದ್ದ ಸಾವಿರಾರು ಸುರಂಗ ಮಾರ್ಗಗಳನ್ನು ಮುಚ್ಚಿಹಾಕಿತು. ಆದರೆ, ಇದು ಗಾಜಾದಲ್ಲಿ ಸ್ಥಳೀಯ ಶಸ್ತ್ರಾಸ್ತ್ರಗಳ ಉದ್ಯಮಗಳಿಗೆ ಬೂಸ್ಟ್​ ನೀಡಿದಂತಾಯಿತು.

ತಾನೇ ಗಾಜಾದಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ಆರಂಭಿಸಿ ಹಾಮಾಸ್ ಉಗ್ರರಿಗೆ ತಂತ್ರಜ್ಞಾನ ಮತ್ತು ಮಾಹಿತಿ ಒದಗಿಸಿದ್ದು ಎಂದು ಇರಾನ್ ಹೇಳುತ್ತದೆ. ಆದರೆ ಈಗ ಪಾಲಿಸ್ಟನಿಯರಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಂದು ಸ್ವತಂತ್ರ ಭದ್ರತಾ ಅನಾಲಿಸ್ಟ್​ ಆಗಿದ್ದ್ದು ಮಧ್ಯ ಪ್ರಾಚ್ಯ ಆಯುಧಗಳ ಮೇಲೆ ಪೋಕಸ್ ಮಾಡವ ಫೇಬಿಯನ್ ಹಿಂಜ್ ಹೇಳುತ್ತಾರೆ.

ರಾಕೆಟ್​ಗಳನ್ನು ತಯಾರಿಸಲು ಹಮಾಸ್​ನ ಕೆಮಿಸ್ಟ್ ಮತ್ತು ಇಂಜಿನಿಯರ್​ಗಳು ರಸಗೊಬ್ಬರಗಳಲ್ಲಿ ಸಿಗುವ ಪ್ರೊಪೆಲ್ಲಂಟ್, ಆಕ್ಸಿಡೈಸರ್ ಮತ್ತಿ ಇತರ ವಸ್ತುಗಳನ್ನು ತಮ್ಮ ಹಂಗಾಮಿ ಫ್ಯಾಕ್ಟರಿಗಳಲ್ಲಿ ಉಪಯೋಗಿಸುತ್ತಾರೆ. ಈಗಲೂ ಕಾರ್ಯಾವರಣೆಯಲ್ಲಿರುವ ಬೆರಳೆಣಿಕೆಯಷ್ಟು ಸುರಂಗ ಮಾರ್ಗಗಳಿಂದ ಪ್ರಮುಖ ವಸ್ತಗಳು ಅಕ್ರಮವಾಗಿ ಹಮಾಸ್ ಸಂಘಟನೆಯ ಕೈಸೇರುತ್ತಿವೆ.

ಇಸ್ರೇಲಿ ಮಿಲಿಟರಿ ಮೂಲಗಳ ಪ್ರಕಾರ ಹಮಾಸ ಬಳಿ ವಿವಿಧ ಸಾಮರ್ಥ್ಯ ಮತ್ತು ವಿನ್ಯಾಸದ 7,000 ರಾಕೆಟ್​ಗಳು, 300 ಅ್ಯಂಟಿ ಟ್ಯಾಂಕ್ ಮತ್ತು 100 ಆ್ಯಂಟಿ ಏರ್​ಕ್ರಾಫ್ಟ್​ಗಳಿವೆ. ಚಾಲಕರಹಿತ ವಾಯು ವಾಹನಗಳನ್ನು ಸಹ ಅದು ತರಿಸಿಕೊಂಡಿದೆ. ಇದಲ್ಲದೆ 30,000 ಉಗ್ರರ ಸೇನೆಯನ್ನು ಅದು ಹೊಂದಿದೆ, ಅದರಲ್ಲಿ 400 ಜನ ನೌಕಾ ಕಮಾಂಡೊಗಳಾಗಿದ್ದಾರೆ.

ಈ ಸಲದ ದಾಳಿಯಲ್ಲಿ ಹಮಾಸ್ ಸಂಘಟನೆಯ ಆಯುಧ ಸಂಶೋಧನೆ ವಿಭಾಗ, ದಾಸ್ತಾನುಗಳ ಮಳಿಗೆ ಮತ್ತು ವೆಪನ್ ತಾರಿಸುವ ಘಟಕಗಳಿಗೆ ಭಾರಿ ಹಾನಿಯುಂಟಾಗಿದೆ ಎಂದು ಇಸ್ರೇಲಿ ಸೇನೆ ಹೇಳುತ್ತಿದೆ. ಆದರೆ ಹಾಮಾಸ್ ನಡೆಸುತ್ತಿರುವ ಸತತ ರಾಕೆಟ್ ದಾಳಿಯನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.

‘ಇಸ್ರೇಲಿನ ಸೇನೆಯನ್ನು ಧ್ವಂಸಗೊಳಿಸುವುದು ಹಾಮಾಸ್​ನ ಉದ್ದೇಶವಾಗಿಲ್ಲ. ರಾಕೆಟ್​ಗಳ ಬಳಕೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವುದಕ್ಕೆ ಮತ್ತು ಆಟದ ನಿಯಮಗಳನ್ನು ಬದಲಾಯಿಸುವುದಕ್ಕೆ ಮಾಡುತ್ತಿದೆ,’ ಎಂದು ಹಿಂಜ್ ಹೇಳುತ್ತಾರೆ.

ಇದನ್ನೂ ಓದಿ: ಇಸ್ರೇಲ್‌ನಲ್ಲಿ ಹಮಾಸ್ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಸಂತೋಷ್ ಅಂತ್ಯ ಸಂಸ್ಕಾರ ಇಂದು

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ