ಇಸ್ರೇಲ್‌ನಲ್ಲಿ ಹಮಾಸ್ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಸಂತೋಷ್ ಅಂತ್ಯ ಸಂಸ್ಕಾರ ಇಂದು

Soumya Santosh: ಸಂಬಂಧಿಕರು ಸೌಮ್ಯ ಮೃತದೇಹವನ್ನು ರಾತ್ರಿ 10 ಗಂಟೆಗೆ ಕೀರಿತೊಟ್ಟಿಯಲ್ಲಿರುವ ಅವರ ಮನೆಗೆ ಕರೆದೊಯ್ದರು. ಭಾರೀ ಮಳೆಯ ಹೊರತಾಗಿಯೂ, ಅನೇಕ ಜನರು ಸೌಮ್ಯಾ ಅವರ ಅಂತಿಮ ದರ್ಶನಕ್ಕಾಗಿ ಕಾಯುತ್ತಿದ್ದರು. 10 ವರ್ಷಗಳಿಂದ ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿ ಹೋಮ್ ನರ್ಸ್ ಆಗಿದ್ದ ಸೌಮ್ಯಾ ಅಂತಿಮವಾಗಿ 2019 ರಲ್ಲಿ ಊರಿಗೆ ಬಂದಿದ್ದರು.

ಇಸ್ರೇಲ್‌ನಲ್ಲಿ ಹಮಾಸ್ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಸಂತೋಷ್ ಅಂತ್ಯ ಸಂಸ್ಕಾರ ಇಂದು
ಸೌಮ್ಯ ಸಂತೋಷ್ ಮೃತದೇಹ
Follow us
ರಶ್ಮಿ ಕಲ್ಲಕಟ್ಟ
|

Updated on:May 16, 2021 | 12:44 PM

ಕೊಚ್ಚಿ: ಇಸ್ರೇಲ್‌ನಲ್ಲಿ ಹಮಾಸ್ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಇಡುಕ್ಕಿ ಮೂಲದ ಸೌಮ್ಯಾ ಸಂತೋಷ್ ಅವರ ಶವವನ್ನು ಕೊಚ್ಚಿಗೆ ತರಲಾಗಿದೆ. ಶವವನ್ನು ಇಸ್ರೇಲ್‌ನಿಂದ ದೆಹಲಿಗೆ ಶನಿವಾರ ಬೆಳಿಗ್ಗೆ ತಂದಿದ್ದು ಅಲ್ಲಿಂದ ಕೊಚ್ಚಿಗೆ ಕರೆದೊಯ್ಯಲಾಗಿದೆ. ಸೌಮ್ಯಾ ಸಂತೋಷ್ ಮೃತದೇಹವನ್ನು ಸ್ವೀಕರಿಸಲು ಸೌಮ್ಯಾ ಅವರ ಸಂಬಂಧಿಕರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಡೀನ್ ಕುರಿಯಕೋಸ್ ಸಂಸದ ಮತ್ತು ಪಿಟಿ ಥಾಮಸ್ ಶಾಸಕರು ಸಹ ಅಂತಿಮ ನಮನ ಸಲ್ಲಿಸಿದರು. ಸೌಮ್ಯ ಅವರ ಮೃದೇಹವನ್ನು ತಂದಾಗ ನೆಡುಂಬಶ್ಶೇರಿ ವಿಮಾನ ನಿಲ್ದಾಣವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅಲ್ಲಿಂದ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಸೌಮ್ಯ ಅವರ ಊರು ಇಡುಕ್ಕಿಗೆ ಕೊಂಡೊಯ್ಯಲಾಯಿತು. ಲಭ್ಯವಿರುವ ಮಾಹಿತಿಯ ಪ್ರಕಾರ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಶವವನ್ನು ಇಸ್ರೇಲ್‌ನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತರಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಮೃತದೇಹವನ್ನು ಸ್ವೀಕರಿಸಿದ್ದು, ದೆಹಲಿಯ ಇಸ್ರೇಲಿ ರಾಯಭಾರ ಕಚೇರಿಯ ಚಾರ್ಜ್ ಡಿ ಅಫೈರ್ಸ್ ರೋನಿ ಯಾಡಿಡಿಯಾ ಸೌಮ್ಯಾ ಅವರಿಗೆ ಅಂತಿಮ ನಮನ ಸಲ್ಲಿಸಲು ಹಾಜರಿದ್ದರು.

ಸಂಬಂಧಿಕರು ಸೌಮ್ಯ ಮೃತದೇಹವನ್ನು ರಾತ್ರಿ 10 ಗಂಟೆಗೆ ಕೀರಿತೊಟ್ಟಿಯಲ್ಲಿರುವ ಅವರ ಮನೆಗೆ ಕರೆದೊಯ್ದರು. ಭಾರೀ ಮಳೆಯ ಹೊರತಾಗಿಯೂ, ಅನೇಕ ಜನರು ಸೌಮ್ಯಾ ಅವರ ಅಂತಿಮ ದರ್ಶನಕ್ಕಾಗಿ ಕಾಯುತ್ತಿದ್ದರು. 10 ವರ್ಷಗಳಿಂದ ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿ ಹೋಮ್ ನರ್ಸ್ ಆಗಿದ್ದ ಸೌಮ್ಯಾ ಅಂತಿಮವಾಗಿ 2019 ರಲ್ಲಿ ಊರಿಗೆ ಬಂದಿದ್ದರು.

ಬುಧವಾರ ಗಾಜಾದಿಂದ  ನಡೆದ ಹಮಾಸ್ ರಾಕೆಟ್ ದಾಳಿಯಲ್ಲಿ ಸೌಮ್ಯಾ ಸಾವನ್ನಪ್ಪಿದ್ದರು. ಇಸ್ರೇಲಿ ನಗರವಾದ ಅಶ್ಕೆಲೋನ್‌ನಲ್ಲಿರುವ ಮನೆಯ ಮೇಲೆ ರಾಕೆಟ್ ದಾಳಿ ನಡೆದಾಗ ಸೌಮ್ಯ ವಿಡಿಯೋ ಕರೆ ಮಾಡಿ ಪತಿಯೊಂದಿಗೆ ಮಾತಾಡುತ್ತಿದ್ದರು.

ಭಾರತದ ಇಸ್ರೇಲ್ ರಾಯಭಾರಿ ರಾನ್ ಮಾಲ್ಕಾ ಅವರು ಹಮಾಸ್ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಸೌಮ್ಯಾ ಅವರ ಮಗನನ್ನು ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹೆತ್ತವರನ್ನು ಕಳೆದುಕೊಂಡಿರುವ ಮೋಷೆಯೆ ಹಾಲ್ಸ್ ಬರ್ಗ್ ದೆ ಹೋಲಿಸಿದ್ದಾರೆ. ಸೌಮ್ಯಾ ಅವರ ಕುಟುಂಬದೊಂದಿಗೆ ಮಾತನಾಡುತ್ತಾ ರಾನ್ ಸಂತಾಪ ವ್ಯಕ್ತಪಡಿಸಿದರು.

ಹಮಾಸ್ ಭಯೋತ್ಪಾದಕ ದಾಳಿಗೆ ಬಲಿಯಾದ ಸೌಮ್ಯಾ ಸಂತೋಷ್ ಅವರ ಕುಟುಂಬದೊಂದಿಗೆ ನಾನು ಫೋನ್‌ನಲ್ಲಿ ಮಾತನಾಡಿದೆ. ಈ ಸಾವಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇಮೆ. ಅವಳ ನಷ್ಟಕ್ಕೆ ಇಡೀ ದೇಶ ಶೋಕಿಸುತ್ತಿದೆ. ನಾವು ಅವರಿಗಾಗಿ ಇಲ್ಲಿದ್ದೇವೆ. ರಾನ್ ತನ್ನ ಪತಿ ಮತ್ತು ಮಗುವಿನೊಂದಿಗೆ ಸೌಮ್ಯಾ ಅವರ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಸೌಮ್ಯಾ ಅವರ ಒಂಬತ್ತು ವರ್ಷದ ಮಗ ಅಡಾನ್ ಬಗ್ಗೆ ನನ್ನ ಮನಸ್ಸು ಮಿಡಿಯುತ್ತದೆ ಎಂದು ರಾನ್ ಹೇಳುತ್ತಾರೆ. ಅವನು ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡನು. ಅವನು ತಾಯಿ ಇಲ್ಲದೆ ಬೆಳೆಯಬೇಕು. ಈ ಭಯೋತ್ಪಾದಕ ದಾಳಿಯು ಮೋಷೆಳನ್ನು ನೆನಪಿಸುತ್ತದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಅವನು ತನ್ನ ಹೆತ್ತವರನ್ನು ಕಳೆದುಕೊಂಡನು. ದೇವರು ಅವರಿಗೆ ಶಕ್ತಿ ಮತ್ತು ಶಕ್ತಿಯನ್ನು ನೀಡಲಿ ಎಂದು ರಾನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:  ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ರಾಕೆಟ್ ದಾಳಿ: ಕೇರಳ ಮೂಲದ ಮಹಿಳೆ ಸಾವು

Explainer: ಇಸ್ರೇಲ್​ನಲ್ಲಿದೆ ರಾಕೆಟ್ ದಾಳಿ ತಡೆಯುವ ರಕ್ಷಣಾ ವ್ಯವಸ್ಥೆ, ಏನಿದು ಐರನ್ ಡೋಮ್?

Published On - 12:39 pm, Sun, 16 May 21