AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಇಸ್ರೇಲ್​ನಲ್ಲಿದೆ ರಾಕೆಟ್ ದಾಳಿ ತಡೆಯುವ ರಕ್ಷಣಾ ವ್ಯವಸ್ಥೆ, ಏನಿದು ಐರನ್ ಡೋಮ್?

Israel Palestine Conflict: ಐರನ್ ಡೋಮ್ ಬಳಕೆ ಆರಂಭವಾಗಿದ್ದು 2006 ರ ಇಸ್ರೇಲಿ-ಲೆಬನಾನ್ ಯುದ್ಧದಲ್ಲಿ. ಹಿಜ್ಬೊಲ್ಲಾ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್ ಗಳನ್ನು ಹಾರಿಸಿತ್ತು. ಇದರ ಮರುವರ್ಷವೇ ಇಸ್ರೇಲ್ ತನ್ನ ನಗರಗಳು ಮತ್ತು ಜನರನ್ನು ರಕ್ಷಿಸಲು ತನ್ನ ಸರ್ಕಾರಿ ರಾಫೆಲ್ ಅಡ್ವಾನ್ಸ್ ಸಿಸ್ಟಮ್ಸ್ ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ತರಲಿದೆ ಎಂದು ಘೋಷಿಸಿತು.

Explainer: ಇಸ್ರೇಲ್​ನಲ್ಲಿದೆ ರಾಕೆಟ್ ದಾಳಿ ತಡೆಯುವ ರಕ್ಷಣಾ ವ್ಯವಸ್ಥೆ, ಏನಿದು ಐರನ್ ಡೋಮ್?
ಇಸ್ರೇಲ್​ ನತ್ತ ಬರುತ್ತಿರುವ ರಾಕೆಟ್
ರಶ್ಮಿ ಕಲ್ಲಕಟ್ಟ
|

Updated on:May 14, 2021 | 8:07 PM

Share

ಇಸ್ರೇಲ್ ಮತ್ತು ಪ್ಯಾಲೆಸ್ತೀvd ನಡುವಿನ ಸಂಘರ್ಷದಲ್ಲಿ, ಎರಡೂ ಕಡೆಯವರು ವಾಯುದಾಳಿ ಮತ್ತು ರಾಕೆಟ್ ದಾಳಿಗೆ ಮುಂದಾಗಿದ್ದಾರೆ. ಮಂಗಳವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊಗಳು ಗಾಜಾದಿಂದ ಹಾರಿಸಿದ ರಾಕೆಟ್ ಗಳನ್ನು ಇಸ್ರೇಲ್ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯಿಂದ ತಡೆಹಿಡಿಯಲಾಗಿದೆ ಎಂದು ತೋರಿಸಿದೆ. ರಾಕೆಟ್‌ಗಳು ಅದೃಶ್ಯ ಗುರಾಣಿಯನ್ನು ಹೊಡೆಯುತ್ತಿರುವ ದೃಶ್ಯಗಳಿ ಇಲ್ಲಿ ಕಾಣುತ್ತಿತ್ತು.

ಏನಿದು ಐರನ್ ಡೋಮ್? ಇದು ಅಲ್ಪ-ಶ್ರೇಣಿಯ, ನೆಲದಿಂದ ಗಾಳಿಗೆ, ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಇಸ್ರೇಲ್ ಮೇಲೆ ಗುರಿಯಾಗಿಟ್ಟುಕೊಂಡು ಬರುವ ಯಾವುದೇ ರಾಕೆಟ್‌ಗಳು ಅಥವಾ ಕ್ಷಿಪಣಿಗಳನ್ನು ಪತ್ತೆಹಚ್ಚುವ ಮತ್ತು ತಟಸ್ಥಗೊಳಿಸುವ ರಾಡಾರ್ ಮತ್ತು ತಮಿರ್ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಒಳಗೊಂಡಿದೆ. ಇದನ್ನು ರಾಕೆಟ್‌ಗಳು, ಫಿರಂಗಿ ಮತ್ತು (C-RAM) ಹಾಗೂ ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು ಎದುರಿಸಲು ಬಳಸಲಾಗುತ್ತದೆ.

ಐರನ್ ಡೋಮ್ ಬಳಕೆ ಆರಂಭವಾಗಿದ್ದು 2006 ರ ಇಸ್ರೇಲಿ-ಲೆಬನಾನ್ ಯುದ್ಧದಲ್ಲಿ. ಹಿಜ್ಬೊಲ್ಲಾ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್ ಗಳನ್ನು ಹಾರಿಸಿತ್ತು. ಇದರ ಮರುವರ್ಷವೇ ಇಸ್ರೇಲ್ ತನ್ನ ನಗರಗಳು ಮತ್ತು ಜನರನ್ನು ರಕ್ಷಿಸಲು ತನ್ನ ಸರ್ಕಾರಿ ರಾಫೆಲ್ ಅಡ್ವಾನ್ಸ್ ಸಿಸ್ಟಮ್ಸ್ ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ತರಲಿದೆ ಎಂದು ಘೋಷಿಸಿತು. ಇದನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಐರನ್ ಡೋಮ್ ಅನ್ನು 2011 ರಲ್ಲಿ ನಿಯೋಜಿಸಲಾಯಿತು. ರಾಫೆಲ್ 90% ಕ್ಕಿಂತ ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೇಳಿಕೊಂಡರೆ, 2,000 ಕ್ಕೂ ಹೆಚ್ಚು ಪ್ರತಿಬಂಧಗಳೊಂದಿಗೆ ಐರನ್ ಡೋಮ್ ಯಶಸ್ಸಿನ ಪ್ರಮಾಣವು 80% ಕ್ಕಿಂತ ಹೆಚ್ಚಿದೆ ಅಂತಾರೆ ತಜ್ಞರು. ರಾಫೆಲ್ ತನ್ನ ವೆಬ್‌ಸೈಟ್‌ನಲ್ಲಿ ನಿಯೋಜಿತ ಮತ್ತು ಕುಶಲ ಶಕ್ತಿಗಳನ್ನು, ಹಾಗೆಯೇ ಫಾರ್ವರ್ಡ್ ಆಪರೇಟಿಂಗ್ ಬೇಸ್ (FOB) ಮತ್ತು ನಗರ ಪ್ರದೇಶಗಳನ್ನು ವ್ಯಾಪಕ ಶ್ರೇಣಿಯ ಪರೋಕ್ಷ ಮತ್ತು ವೈಮಾನಿಕ ಬೆದರಿಕೆಗಳ ವಿರುದ್ಧ ರಕ್ಷಿಸಬಹುದು ಎಂದು ಹೇಳಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಐರನ್ ಡೋಮ್ ಮೂರು ಮುಖ್ಯ ವ್ಯವಸ್ಥೆಗಳನ್ನು ಹೊಂದಿದ್ದು, ಅದು ನಿಯೋಜಿಸಲಾದ ಪ್ರದೇಶದ ಮೇಲೆ ಗುರಾಣಿಯನ್ನು ನಿರ್ಮಿಸಿ ಅನೇಕ ದಾಳಿಗಳನ್ನು ನಿಭಾಯಿಸುತ್ತದೆ. ಯಾವುದೇ ಒಳಬರುವ ದಾಳಿಗಳನ್ನು ಗುರುತಿಸಲು ಇದು ಪತ್ತೆ ಮತ್ತು ಟ್ರ್ಯಾಕಿಂಗ್ ರೇಡಾರ್, ಯುದ್ಧ ನಿರ್ವಹಣೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆ (BMC) ಮತ್ತು ಕ್ಷಿಪಣಿ ಫೈರಿಂಗ್ ಘಟಕವನ್ನು ಹೊಂದಿದೆ. ಬಿಎಂಸಿ ಮೂಲತಃ ರಾಡಾರ್ ಮತ್ತು ಇಂಟರ್ಸೆಪ್ಟರ್ ಕ್ಷಿಪಣಿ ನಡುವೆ ಸಂಬಂಧ ಹೊಂದಿದೆ.

ಇದು ಹಗಲು ಮತ್ತು ರಾತ್ರಿ ಸೇರಿದಂತೆ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಳಸುವ ಸಾಮರ್ಥ್ಯವನ್ನು ಹೊಂದಿದೆ ನವದೆಹಲಿಯ ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ (CAPS) ಚಿಂತಕರ ಚಾವಡಿಯ ಮುಖ್ಯಸ್ಥರಾಗಿರುವ ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಅವರ ಪ್ರಕಾರ ಯಾವುದೇ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಎರಡು ಮುಖ್ಯ ಅಂಶಗಳಿವೆ. ಒಂದು ರಾಡಾರ್, ಇದು ಸಣ್ಣ ವಸ್ತುಗಳನ್ನು ನೋಡುವ ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಅದನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ಒಳಬರುವ ವಸ್ತುಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಯಾವುದೇ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಎರಡು ಮೂರು ರಾಡಾರ್‌ಗಳಿವೆ ಎಂದು ಅವರು ಹೇಳಿದರು. ನೀವು ಶಸ್ತ್ರಾಸ್ತ್ರವನ್ನು ಹಾರಿಸಿದಾಗ, ಅದು ಟ್ರ್ಯಾಕಿಂಗ್ ರೇಡಾರ್ ಆಗಿದ್ದು ಅದು ಶಸ್ತ್ರಾಸ್ತ್ರವನ್ನು ಅಲ್ಲಿಗೆ ತಲುಪಲು ಸಹಾಯ ಮಾಡುತ್ತದೆ. ಅದರ ನಂತರ ಅಲ್ಲಿ ಶಸ್ತ್ರಾಸ್ತ್ರ ಹೊಡೆದುರುಳಿಸುತ್ತದೆ.

ಕ್ಷಿಪಣಿಯನ್ನು ಹಾರಿಸಿದ ನಂತರ, ಅದು ಕುಶಲತೆಯಿಂದ ಕೂಡಿರಬೇಕು. ಸಣ್ಣ ಗುರಿಯನ್ನು ತನ್ನದೇ ಆದ ಮೇಲೆ ನೋಡಲು ಸಾಧ್ಯವಾಗುತ್ತದೆ ಮತ್ತು ನಂತರ ಹೋಗಿ ಹೊಡೆದುರುಳಿಸುತ್ತಿವೆ. ಆದರೆ ಪ್ರತಿ ಬಾರಿಯೂ ಗುರಿಯನ್ನು ನೇರವಾಗಿ ಹೊಡೆಯುವುದು ಅಸಾಧ್ಯ, ಅದಕ್ಕಾಗಿಯೇ ಪ್ರಾಕ್ಸಿಮಿಟಿ ಫ್ಯೂಸ್ ಎಂಬುದು ಪ್ರತೀ ಕ್ಷಿಪಣಿಯಲ್ಲಿರುತ್ತದೆ. ಅದು ಲೇಸರ್-ನಿಯಂತ್ರಿತ ಫ್ಯೂಸ್ ಆಗಿದೆ. ಗುರಿಯ ಹತ್ತು ಮೀಟರ್ ಒಳಗೆ ಹಾದುಹೋಗುವಾಗ, ಇದು ಕ್ಷಿಪಣಿಯನ್ನು ಶ್ರಾಪ್ನಲ್ (ಸಿಡಿದ ಬಾಂಬ್ ಚೂರು)ಗಳೊಂದಿಗೆ ಸಕ್ರಿಯಗೊಳಿಸುತ್ತದೆ ಮತ್ತು ಗುರಿಯನ್ನು ನಾಶಪಡಿಸುತ್ತದೆ. ಕ್ಷಿಪಣಿಯ ವೇಗ ಮತ್ತು ಗುರಿಯನ್ನು ಪೂರೈಸುವ ರೀತಿಯಲ್ಲಿ ಸಿಡಿತಲೆ ಸ್ಫೋಟಗೊಂಡಿದೆ ಅಂತಾರೆ ಚೋಪ್ರಾ.

ಇದರ ಬೆಲೆಯೆಷ್ಟು? ಪ್ರತಿ ಬ್ಯಾಟರಿ, ಅಥವಾ ಪೂರ್ಣ ಘಟಕದ ವೆಚ್ಚವು ₹5ಕೋಟಿಗಿಂತಲೂ ಹೆಚ್ಚು ಇರಬಹುದು ಒಂದು ಇಂಟರ್ಸೆಪ್ಟರ್ ತಮೀರ್ ಕ್ಷಿಪಣಿಗೆ ₹ 80,000 ವೆಚ್ಚವಾಗುತ್ತದೆ. ಅದೇ ವೇಳೆ, ರಾಕೆಟ್‌ಗೆ ₹1,000 ಕ್ಕಿಂತ ಕಡಿಮೆ ವೆಚ್ಚವಾಗಬಹುದು. ಪ್ರತಿ ರಾಕೆಟ್ ಅನ್ನು ತಡೆಯಲು ಸಿಸ್ಟಮ್ ಎರಡು ತಮಿರ್ ಕ್ಷಿಪಣಿಗಳನ್ನು ರವಾನಿಸುತ್ತದೆ.

ಇದನ್ನೂ ಓದಿ:  ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ರಾಕೆಟ್ ದಾಳಿ: ಕೇರಳ ಮೂಲದ ಮಹಿಳೆ ಸಾವು

Published On - 8:04 pm, Fri, 14 May 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್