Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೇಜ್​ಗಾಗಿಯೇ ಇರುವ ರಹಸ್ಯ ಪೆಟ್ಟಿಗೆಯಿಂದಾಗಿ ಅನೇಕ ಪ್ರಾಣಿಗಳು ಸಾವಿಗೀಡಾಗುತ್ತಿವೆ, ಈ ಮಿಸ್ಟರಿ ಬಾಕ್ಸ್​ ಹಿಂದಿರುವ ಸತ್ಯಗಳೇನು?

ವಿಶ್ಯ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಪ್ರಾಣಿಗಳಿಂದ ಕೋವಿಡ್​ 19 ಸಾಂಕ್ರಾಮಿಕ ರೋಗ ಹರಡಿದೆ. ಕೊರೊನಾ ಸೋಂಕು ಪ್ರಾಣಿಗಳಿಂದ ಹರಡುವುದನ್ನು ತಪ್ಪಿಸಲು, ಪ್ರಾಣಿ ಸೇವನೆಯನ್ನು ನಿಷೇಧಿಸಿದೆ. ಈ ಕಠಿಣ ಕ್ರಮ ಜಾರಿಯಲ್ಲಿದ್ದರೂ ಆನ್​ಲೈನ್​ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದು, ಈ ಕಾನೂನನ್ನು ಜನರು ನಿರ್ಲಕ್ಷಿಸುತ್ತಿದ್ದಾರೆ

ಕ್ರೇಜ್​ಗಾಗಿಯೇ ಇರುವ ರಹಸ್ಯ ಪೆಟ್ಟಿಗೆಯಿಂದಾಗಿ ಅನೇಕ ಪ್ರಾಣಿಗಳು ಸಾವಿಗೀಡಾಗುತ್ತಿವೆ, ಈ ಮಿಸ್ಟರಿ ಬಾಕ್ಸ್​ ಹಿಂದಿರುವ ಸತ್ಯಗಳೇನು?
ಮಿಸ್ಟರಿ ಬಾಕ್ಸ್​
Follow us
shruti hegde
| Updated By: Lakshmi Hegde

Updated on:May 20, 2021 | 5:17 PM

ಚಿಕ್ಕ-ಪುಟ್ಟ ಪ್ರಾಣಿಗಳು. ಮಿಟುಕಿಸುತ್ತಿರುವ ಕಣ್ಣುಗಳು. ಮುದ್ದಾದ ಪ್ರಾಣಿಗಳೆಲ್ಲ ಮಿಸ್ಟರಿ ಬಾಕ್ಸ್​ನ ಒಳಗಡೆಯಿದೆ. ಕೆಲವು ಪೆಟ್ಟಿಗೆಗಳನ್ನು ಮುಚ್ಚಲಾಗಿದೆ. ಇನ್ನು ಕೆಲವದರಿಂದ ಮುದ್ದಾದ ಪ್ರಾಣಿಗಳು ಕಣ್​ ಮಿಟುಕಿಸಿ ನೋಡುತ್ತಿವೆ. ನೋಡಲು ಸುಂದರವಾದ, ಆಕರ್ಷಕವಾಗಿರುವ ಪ್ರಾಣಿಗಳನ್ನು ವಿಸ್ಟರಿ ಬಾಕ್ಸ್​ನಲ್ಲಿ (ರಹಸ್ಯ ಪೆಟ್ಟಿಗೆ) ತುಂಬಿಸಲಾಗಿದೆ. ಹಾಗಾದರೆ ಇಂತಹ ಪ್ರಾಣಿಗಳೆಲ್ಲ ಎಲ್ಲಿ ಹೋಗುತ್ತಿವೆ? ಏನಾಗುತ್ತಿವೆ? ಪ್ರಾಣಿಗಳಿಂದ ಜಗತ್ತಿನಾದ್ಯಂತ ಕೊವಿಡ್​ 19 ಹರಡಿದೆ ಎಂಬ ಮಾತುಗಳು ಕೇಳಿ ಬಂದಿದ್ದರೂ ಆನ್​ಲೈನ್​ ಮೂಲಕ ಮಿಸ್ಟರಿ ಬಾಕ್ಸ್​ನೊಳಗೆ ಪ್ರಾಣಿಗಳನ್ನು ಇರಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅದೆಷ್ಟೋ ಪ್ರಾಣಿಗಳು ಸಾವಿಗೀಡಾಗುತ್ತಿವೆ.

ಮಿಸ್ಟರಿ ಬಾಕ್ಸ್​ ಅಂದರೇನು? ಇದು ಎಲ್ಲಿ ಫೇಮಸ್​, ಇದರ ಹಿಂದಿನ ಘಟನೆ ಏನು ಎಂಬುದನ್ನು ನೋಡುತ್ತಾ ಹೋದರೆ ಇತಿಹಾಸವೇ ಇದೆ. ಹೆಸರೇ ಹೇಳುವಂತೆ ರಹಸ್ಯ ಪೆಟ್ಟಿಗೆಯಲ್ಲಿ ಸಾಕುಪ್ರಾಣಿಗಳನ್ನು ಮಾರಾಟ ಮಾಡುವುದು ಚೀನಾದಲ್ಲಿ ಒಂದು ರೀತಿಯ ಕ್ರೇಜ್​. ರಹಸ್ಯ ಪೆಟ್ಟಿಗೆಯಲ್ಲಿ ಆಕರ್ಷಕ ಪ್ರಾಣಿಗಳನ್ನು ತುಂಬಿ ಸಂಪೂರ್ಣ ಮುಚ್ಚುತ್ತಾರೆ. ಇದರಿಂದ ಪ್ರಾಣಿಗಳು ಸಾವಿಗೀಡಾಗುತ್ತಿವೆ ಎಂಬುದು ಈ ಹಿಂದಿನಿಂದ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವಾರ ಚೀನಾದ ಕೊರಿಯರ್​ ಕಂಪನಿಯ ಟ್ರಕ್​ ಒಳಗೆ ಸಾಕುಪ್ರಾಣಿಗಳಾದ 160 ಸುಂದರ ಬೆಕ್ಕಗಳು ಮತ್ತು ನಾಯಿಗಳು ಇದ್ದ ಮಾಹಿತಿ ತಿಳಿದು ಬಂದಿತ್ತು. ಚೀನಾದ ಕಾನೂನಿನ ಪ್ರಕಾರ ಜೀವಂತ ಪ್ರಾಣಿಗಳ ಸಾಗಾಟವನ್ನು ನಿಷೇಧಿಸಲಾಗಿದೆ. ಆದರೆ ಈ ರಹಸ್ಯ ಪೆಟ್ಟಿಗೆಯಲ್ಲಿ ಜೀವಂತ ಪ್ರಾಣಿಗಳನ್ನು ತುಂಬಿ ಕಳುಹಿಸುವುದು ನಂಬಲಾಗದಷ್ಟು ಜನಪ್ರಿಯತೆ ಪಡೆಯುತ್ತಿದೆ ಎಂಬುದನ್ನು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ಈ ಕುರಿತಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ಇಂತಹ ರಹಸ್ಯ ಪೆಟ್ಟಿಗೆಗಳನ್ನು ಧಿಕ್ಕರಿಸಬೇಕು. ನಾವು ಯಾವಾಗಲಾದರೂ ಪ್ರಾಣಿಗಳ ರಕ್ಷಣೆಯಲ್ಲಿ ಪಾತ್ರವಹಿಸಿದ್ದೀವಾ? ಈಗ ಸಾಕು ಪ್ರಾಣಿಗಳ ರಹಸ್ಯ ಪೆಟ್ಟಿಗೆಯೇ ಉದ್ಯಮವಿದೆಯೇ? ಎಂದು ಪ್ರಶ್ನೆಗೆ ಕಾರಣವಾಗಿತ್ತು.

ರಹಸ್ಯ ಪೆಟ್ಟಿಗಳು ಎಂಬ ಜನರಲ್ಲಿನ ವ್ಯಾಮೋಹಕ್ಕೆ ಶಾಂಪಿಗ್​ ಎಂಬ ನೆಪದಲ್ಲಿ ಚಿಕ್ಕ ಪುಟ್ಟ ಪ್ರಾಣಿಗಳು ಬಲಿಯಾಗುತ್ತಿವೆ. ಈ ಕುರಿತಂತೆ ಪೀಪಲ್ಸ್​ ಡೈಲಿ ಎಂಬ ಪತ್ರಿಕೆ ಪ್ರಶ್ನಿಸಿದಾಗ, ಚೀನಾದ ಬೀಜಿಂಗ್​ನ ರೆನ್​ಮಿನ್​ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೋರ್ವರು, ಇಂತಹ ರಹಸ್ಯ ಪೆಟ್ಟಿಗಳು ವ್ಯಸನಕಾರಿ. ಬಹುಮಾನವಾಗಿ ರಹಸ್ಯ ಪೆಟ್ಟಿಗೆಯು ಒಂದು ಲಭಿಸಿದರೆ ಇದರ ಕ್ರೇಜ್​ಗಾಗಿ ಗ್ರಾಹಕರು ಮತ್ತೆ ಪೆಟ್ಟಿಗೆ ಪಡೆಯಲು ಆಕರ್ಷಿತರಾಗುತ್ತಾರೆ. ಹಾಗಾಗಿ ಈ ಪೆಟ್ಟಿಯ ವ್ಯವಹಾರ ದೊಡ್ಡ ಮಾರಾಟವಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಲವ್​ ಹೋಮ್​ ಸಂಸ್ಥಾಪಕ ಚೆನ್​ ಯೂನ್ಲಿಯನ್​ ಅಭಿಪ್ರಾಯ ಹಂಚಿಕೊಂಡಿದ್ದು, ರಹಸ್ಯ ಪೆಟ್ಟಿಗೆಯಲ್ಲಿ ಪ್ರಾಣಿಗಳನ್ನಿರಿಸಿ, ಮಾರಾಟ ಮಾಡುವವನು ಜೀವವನ್ನು ಪಣಕ್ಕಿಟ್ಟು ದುಡ್ಡು ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಗ್ರಾಹಕರ ಕ್ರೇಸ್​ಗಾಗಿ ಇರುವಂತಹ ಈ ರಹಸ್ಯ ಪೆಟ್ಟಿಗೆಯಿಂದಾಗಿ ಅನೇಕ ಪ್ರಾಣಿಗಳು ಸಾವಿಗೀಡಾಗುತ್ತಿವೆ. ಹಾಗಾದರೆ ಅವುಗಳನ್ನು ಮುಖ್ಯವಾಗಿ ಯಾವ ಯಾವ ಪ್ಲಾಟ್​ಫಾರ್ಮ್​ಗಳಲ್ಲಿ ಮಾರಾಟ ಮಾಡುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ರೋಗದ ಹೆದರಿಕೆ ಚೀನಾದಲ್ಲಿ ಪ್ರಸ್ತುತ ಯಾವುದೇ ಒಂದು ಕಾನೂನು ರಾಷ್ಟ್ರವ್ಯಾಪಿ ಇಲ್ಲ. ಆದರೂ, ಇಂತಹ ಪ್ರಾಣಿ ಹಿಂಸೆಗಳು ನಡೆಯುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಯಾವುದಾದರೂ ಕಾನೂನು ತರಬೇಕು ಎಂಬ ಕರೆ ಇದೀಗ ಕೇಳಿ ಬರುತ್ತಿದೆ. ಸಮಾಜದಲ್ಲಿ ಪ್ರಾಣಿ ಕಲ್ಯಾಣ ಜಾಗೃತಿ ಮೂಡಿಸುವುದನ್ನು ಮುಂದುವರೆಸುವ ಅವಶ್ಯಕತೆ ಇದೆ. ಈ ರಹಸ್ಯ ಪೆಟ್ಟಿಗೆಯ ಮೂಲಕ ಪ್ರಾಣಿಗಳ ಮಾರಾಟವನ್ನು ತಡೆಗಟ್ಟಲು ಕ್ರಮಗಳು ಅಗತ್ಯ. ಈ ವ್ಯಾಪಾರದಿಂದ ವೇಗವಾಗಿ ರೋಗಗಳು ಹರಡುವ ಸಾಧ್ಯತೆ ಇದೆ.

ವಿಶ್ಯ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಪ್ರಾಣಿಗಳಿಂದ ಕೊವಿಡ್​ 19 ಸಾಂಕ್ರಾಮಿಕ ರೋಗ ಹರಡಿದೆ. ಕೊರೊನಾ ಸೋಂಕು ಪ್ರಾಣಿಗಳಿಂದ ಹರಡುವುದನ್ನು ತಪ್ಪಿಸಲು, ಪ್ರಾಣಿ ಸೇವನೆಯನ್ನು ನಿಷೇಧಿಸಿದೆ. ಈ ಕಠಿಣ ಕ್ರಮ ಜಾರಿಯಲ್ಲಿದ್ದರೂ ಆನ್​ಲೈನ್​ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದು, ಈ ಕಾನೂನನ್ನು ಜನರು ನಿರ್ಲಕ್ಷಿಸುತ್ತಿದ್ದಾರೆ ಎಂದು ಚೀನಾ ಡೈಲಿ ಹೇಳಿದೆ.

ಇದನ್ನೂ ಓದಿ: ಜಗತ್ತಿನ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಬಳಕೆ.. ಬಯಲಾಯ್ತು ಚೀನಾದ ಕುತಂತ್ರ! 

ಪ್ರಾಣಿಗಳಿಗೂ ವಕ್ಕರಿಸುತ್ತೆ ಕೊರೊನಾ.. ಕರ್ನಾಟಕ ರಾಜ್ಯದ ಮೃಗಾಲಯಗಳಲ್ಲಿ ಹೈ ಅಲರ್ಟ್

Published On - 2:07 pm, Thu, 20 May 21

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!