ಹೆಗ್ಗಣಗಳ ಮೇಲೆ ಪ್ರಯೋಗಿಸಿ, ಕೊರೊನಾ ವ್ಯಾಕ್ಸಿನ್ ಕಂಡುಹಿಡಿದ ಇಸ್ರೇಲ್!
ಟೆಲ್ ಅವೀವ್: ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದ್ದರೆ, ಪುಟ್ಟ ಆದ್ರೆ ಬಲಿಷ್ಠ ರಾಷ್ಟ್ರವಾದ ಇಸ್ರೇಲ್ ಮಹತ್ವದ ಸಾಧನೆ ಮಾಡಿದೆ. ಕೊವಿಡ್ 19 ವೈರಸ್ಗೆ ಆಂಟಿಬಾಡಿ ಕಂಡುಹಿಡಿಯುವ ಹಾದಿಯಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದೆ. ಈ ಕುರಿತು ಮಹತ್ವದ ಸುಳಿವು ನೀಡಿರುವ ಇಸ್ರೇಲ್ನ ರಕ್ಷಣಾ ಸಚಿವ ನಫ್ತಾಲಿ ಬೆನೆಟ್, ಕೊರೊನಾ ವೈರಸ್ ಮಟ್ಟ ಹಾಕಲು ವ್ಯಾಕ್ಸಿನ್ ಸಿದ್ಧಪಡಿಸುವಲ್ಲಿ ನಮ್ಮ ಜೈವಿಕ ಸಂಶೋಧನಾ ಪ್ರಯೋಗಾಲಯದಲ್ಲಿ (IIBR) ಮಹತ್ವದ ಸಾಧನೆ ಮಾಡಲಾಗಿದೆ. IIBR ಲ್ಯಾಬ್ಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್ಅನ್ನು ಸದ್ಯದಲ್ಲೇ ಕೊರೊನಾ […]
ಟೆಲ್ ಅವೀವ್: ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದ್ದರೆ, ಪುಟ್ಟ ಆದ್ರೆ ಬಲಿಷ್ಠ ರಾಷ್ಟ್ರವಾದ ಇಸ್ರೇಲ್ ಮಹತ್ವದ ಸಾಧನೆ ಮಾಡಿದೆ. ಕೊವಿಡ್ 19 ವೈರಸ್ಗೆ ಆಂಟಿಬಾಡಿ ಕಂಡುಹಿಡಿಯುವ ಹಾದಿಯಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದೆ.
ಈ ಕುರಿತು ಮಹತ್ವದ ಸುಳಿವು ನೀಡಿರುವ ಇಸ್ರೇಲ್ನ ರಕ್ಷಣಾ ಸಚಿವ ನಫ್ತಾಲಿ ಬೆನೆಟ್, ಕೊರೊನಾ ವೈರಸ್ ಮಟ್ಟ ಹಾಕಲು ವ್ಯಾಕ್ಸಿನ್ ಸಿದ್ಧಪಡಿಸುವಲ್ಲಿ ನಮ್ಮ ಜೈವಿಕ ಸಂಶೋಧನಾ ಪ್ರಯೋಗಾಲಯದಲ್ಲಿ (IIBR) ಮಹತ್ವದ ಸಾಧನೆ ಮಾಡಲಾಗಿದೆ. IIBR ಲ್ಯಾಬ್ಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್ಅನ್ನು ಸದ್ಯದಲ್ಲೇ ಕೊರೊನಾ ಸೋಂಕು ಪೀಡಿತ ವ್ಯಕ್ತಿ ಮೇಲೆ ಪ್ರಯೋಗಿಸಲಾಗುವುದು. ಅದರಲ್ಲಿಯೂ ಯಶಸ್ಸು ಸಾಧಿಸಿದ ಬಳಿಕ ಅದನ್ನು ವಾಣಿಜ್ಯಿಕವಾಗಿ ಅಭಿವೃದ್ಧಿಪಡಿಸುವ ಬಗ್ಗೆ ರಕ್ಷಣಾ ಸಚಿವಾಲಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ನಫ್ತಾಲಿ ಬೆನೆಟ್ ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ವ್ಯಾಕ್ಸಿನ್ ಸಿದ್ಧಪಡಿಸುವ ಮೂಲಕ ಹೊಸಹೊಸ ಸಂಶೋಧನೆಗಳಿಗೆ ಹಪಹಪಿಸುವ ಯಹೂದಿಗಳು ಮತ್ತೊಮ್ಮೆ ಜಗತ್ತಿಗೆ ತಮ್ಮ ಶಕ್ತಿಯನ್ನು ತೋರಿಸಲಿದ್ದಾರೆ ಎಂದು ಅವರು ಹೆಮ್ಮೆಪಟ್ಟಿದ್ದಾರೆ. ಅಂದಹಾಗೆ, IIBR ಸಂಶೋಧಕರು ಮೊದಲು ಹೆಗ್ಗಣಗಳ ಮೇಲೆ ಕೊರೊನಾ ವ್ಯಾಕ್ಸಿನ್ ಅನ್ನ ಪ್ರಯೋಗಿಸಿ, ಯಶಸ್ಸು ಕಂಡಿದ್ದಾರೆ.