ಗಾಜಾದ ವೆಸ್ಟ್ ಬ್ಯಾಂಕ್ನ ಜೆನಿನ್ ನಗರದಲ್ಲಿರುವ ಅಲ್-ಅನ್ಸಾರ್ ಮಸೀದಿ ಸಂಕೀರ್ಣದಲ್ಲಿರುವ ಭಯೋತ್ಪಾದಕ ಸಂಘಟನೆ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಕಮಾಂಡ್ ಸೆಂಟರ್ ಮೇಲೆ ಇಸ್ರೇಲಿ ಸೇನೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ಇದಕ್ಕೂ ಮುನ್ನ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಮಕ್ಕಳು ಸೇರಿದಂತೆ 13 ಪ್ಯಾಲೆಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದರು.
ಗಾಜಾ ನಗರದ ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣ ಗಾಜಾದ ಕಡೆಗೆ ವಲಸೆ ಹೋಗುವಂತೆ ಇಸ್ರೇಲ್ ಕೇಳಿಕೊಂಡಿತ್ತು. ಹಮಾಸ್ ಗುಂಪು ಇಬ್ಬರು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತೊಮ್ಮೆ ಗಾಜಾವನ್ನು ವಶಪಡಿಸಿಕೊಳ್ಳುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಹಮಾಸ್ ಹೋರಾಟಗಾರರು ಮಸೀದಿಯನ್ನು ಕಮಾಂಡ್ ಸೆಂಟರ್ ಮಾಡಿದ್ದಾರೆ ಎಂದು ಭದ್ರತಾ ಗುಪ್ತಚರ ಮಾಹಿತಿ ಲಭ್ಯವಾಗಿತ್ತು ಎಂದು ಇಸ್ರೇಲ್ ರಕ್ಷಣಾ ಪಡೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ. ಅಕ್ಟೋಬರ್ 7 ರಂದು ಮೊದಲ ಬಾರಿಗೆ ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ಗಳಿಂದ ದಾಳಿ ನಡೆಸಿದರು, ಅದರಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಾಜಾ ಮೇಲೆ ಇಸ್ರೇಲ್ ಸೈನಿಕರು ದಾಳಿ ನಡೆಸಿದ್ದಾರೆ,
ಅದರಲ್ಲಿ 1300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ, ಕಳೆದ 24 ಗಂಟೆಗಳಲ್ಲಿ 68 ಹಮಾಸ್ ಉಗ್ರರನ್ನು ಬಂಧಿಸಲಾಗಿದೆ. 81 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಲೆಬನಾನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ದೃಷ್ಟಿಯಿಂದ, ಶನಿವಾರದಂದು US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಲೆಬನಾನ್‌ನ ಹಂಗಾಮಿ ಪ್ರಧಾನ ಮಂತ್ರಿ ನಜೀಬ್ ಮಿಕಾಟಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಮತ್ತಷ್ಟು ಓದಿ: Israel-Hamas war: ವಿದೇಶಿಯರು ಗಾಜಾ ತೊರೆಯಲು ರಫಾ ಕ್ರಾಸಿಂಗ್ ತೆರೆಯುವ ಸಾಧ್ಯತೆ
ಯುದ್ಧದಲ್ಲಿ ಇಸ್ರೇಲ್-ಹಮಾಸ್ ಪಾಲ್ಗೊಳ್ಳುವಿಕೆಯಿಂದಾಗಿ ಲೆಬನಾನ್ ಜನರು ಸಹ ಅಪಾಯಕ್ಕೆ ಒಳಗಾಗಬಹುದು ಎಂದು ಹೇಳಿದ್ದಾರೆ. ಗಾಜಾದಲ್ಲಿ ಕೊಲ್ಲಲ್ಪಟ್ಟವರಲ್ಲಿ 70 ಪ್ರತಿಶತದಷ್ಟು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಎಂದು ಆರೋಗ್ಯ ಸಚಿವಾಲಯ ಹೇಳುತ್ತದೆ.
ಇಂಧನದ ಕೊರತೆಯಿಂದಾಗಿ ಜನರು ಗಾಜಾದ ಏಳು ಆಸ್ಪತ್ರೆಗಳು ಮತ್ತು 25 ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಗಾಜಾದ ಆಸ್ಪತ್ರೆಗಳಲ್ಲಿ ಬೆಡ್ ಆಕ್ಯುಪೆನ್ಸೀ ಶೇಕಡಾ 150 ತಲುಪಿದೆ. ಗಾಯಾಳುಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳ ಹೊರಗೆ ಟೆಂಟ್‌ಗಳನ್ನು ಹಾಕಲಾಗಿದೆ.
ಗಾಜಾವನ್ನು ತೊರೆಯದವರನ್ನು ಭಯೋತ್ಪಾದಕರು ಎಂದು ಪರಿಗಣಿಸಲಾಗುವುದು ಎಂದು ಇಸ್ರೇಲ್ ಸೇನೆ ಎಚ್ಚರಿಸಿದೆ.
ತಡರಾತ್ರಿ ಹಮಾಸ್ ಗಾಜಾ ಗಡಿಯಲ್ಲಿ ನಿಯೋಜಿಸಲಾದ ಇಸ್ರೇಲಿ ಟ್ಯಾಂಕ್‌ಗಳ ಮೇಲೆ ದಾಳಿ ಮಾಡಿತು. ಆದರೆ, ಇಸ್ರೇಲ್ ಸೇನೆ ಇದನ್ನು ಖಚಿತಪಡಿಸಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ