ಹಮಾಸ್​ ಉಗ್ರರ ವಶದಿಂದ ಗಾಜಾ ಗಡಿಯನ್ನು ಹಿಂಪಡೆದ ಇಸ್ರೇಲ್​, ಸಂಘರ್ಷದಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾವು

|

Updated on: Oct 11, 2023 | 8:53 AM

ಇಸ್ರೇಲ್(Israel) ಹಮಾಸ್(Hamas) ಉಗ್ರರ ವಾಸದಲ್ಲಿದ್ದ ಗಾಜಾ ಗಡಿಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಇದುವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ಸೇನೆ ಮತ್ತು ಉಗ್ರ ಸಂಘಟನೆ ಹಮಾಸ್ ನಡುವಿನ ಸಂಘರ್ಷ ಮುಂದುವರಿದಿದೆ. ಅಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ, ಇಸ್ರೇಲಿ ಸೇನೆಯು ನಿರಂತರವಾಗಿ ಗಾಜಾ ಗಡಿಯಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಗಾಜಾ ಗಡಿ ಪ್ರದೇಶಗಳನ್ನು ಹಮಾಸ್‌ನಿಂದ ಹಿಂಪಡೆದಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.

ಹಮಾಸ್​ ಉಗ್ರರ ವಶದಿಂದ ಗಾಜಾ ಗಡಿಯನ್ನು ಹಿಂಪಡೆದ ಇಸ್ರೇಲ್​, ಸಂಘರ್ಷದಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾವು
ಇಸ್ರೇಲ್
Image Credit source: Mint
Follow us on

ಇಸ್ರೇಲ್(Israel) ಹಮಾಸ್(Hamas) ಉಗ್ರರ ವಾಸದಲ್ಲಿದ್ದ ಗಾಜಾ ಗಡಿಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಇದುವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ಸೇನೆ ಮತ್ತು ಉಗ್ರ ಸಂಘಟನೆ ಹಮಾಸ್ ನಡುವಿನ ಸಂಘರ್ಷ ಮುಂದುವರಿದಿದೆ. ಅಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ, ಇಸ್ರೇಲಿ ಸೇನೆಯು ನಿರಂತರವಾಗಿ ಗಾಜಾ ಗಡಿಯಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಗಾಜಾ ಗಡಿ ಪ್ರದೇಶಗಳನ್ನು ಹಮಾಸ್‌ನಿಂದ ಹಿಂಪಡೆದಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.

ವಾಸ್ತವವಾಗಿ, ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ, ಹಮಾಸ್ ಉಗ್ರಗಾಮಿಗಳು ಗಡಿ ಬೇಲಿಯ ಕೆಲವು ಭಾಗಗಳನ್ನು ಕಿತ್ತುಹಾಕಿದ್ದರು. ಆದರೆ, ಇಸ್ರೇಲ್ ರಕ್ಷಣಾ ಪಡೆ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ಬೇಲಿಯಿಂದ ದೇಶದೊಳಗೆ ಒಬ್ಬ ಹಮಾಸ್ ಉಗ್ರನೂ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ. ಈ ಯುದ್ಧದಲ್ಲಿ ಎರಡೂ ಕಡೆಯಿಂದ ಸಾಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇಲ್ಲಿಯವರೆಗೆ, ಈ ಹೋರಾಟದಲ್ಲಿ 3000 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಕ್ಟೋಬರ್ 10 ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಮಾಸ್​ಗೆ ಎಚ್ಚರಿಕೆ ನೀಡಿದ್ದರು. ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಹಮಾಸ್ ಉಗ್ರರು ದೊಡ್ಡ ತಪ್ಪು ಮಾಡಿದ್ದಾರೆ. ಹಮಾಸ್ ಹಾಗೂ ಇತರೆ ಇಸ್ರೇಲ್​ನ ಶತ್ರುಗಳು ಜೀವಮಾನಪೂರ್ತಿ ನೆನಪಿಸಿಕೊಳ್ಳುವಂತಹ ಬೆಲೆಯನ್ನು ತೆರಬೇಕಾಗುತ್ತದೆ. ನಾವು ಯುದ್ಧವನ್ನು ಪ್ರಾರಂಭಿಸಿಲ್ಲ ಆದರೆ ಅಂತ್ಯ ನಮ್ಮ ಕೈಯಿಂದಲೇ ಆಗುತ್ತದೆ ಎಂದು ನೇತನ್ಯಾಹು ಹೇಳಿದ್ದರು.
ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರು ನೇತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಸ್ರೇಲ್​ನ ಪ್ರಸ್ತುತ ಸ್ಥಿತಿ ಬಗ್ಗೆ ಮಾಹಿತಿ ಪಡೆದರು.

ಈ ಮೊದಲು ಅಕ್ಟೋಬರ್ 7 ರಂದು ಇಸ್ರೇಲ್​ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದಾಗ ಕಷ್ಟದ ಸಮಯದಲ್ಲಿ ಇಸ್ರೇಲ್​ ಜತೆ ನಾವಿದ್ದೇವೆ ಎಂದು ಪ್ರಧಾನಿ ಮೋದಿ ಅಭಯ ನೀಡಿದ್ದರು. ಅಕ್ಟೋಬರ್ 10 ರಂದು ಇಸ್ರೇಲ್ ಸೇನೆಯು ಗಾಜಾ ಪಟ್ಟಿಯಲ್ಲಿ ನಿರಂತರ ಬಾಂಬ್ ದಾಳಿ ನಡೆಸಿತು. ಗಡಿಯನ್ನು ಪ್ರವೇಶಿಸಿದ 1500 ಹಮಾಸ್ ಉಗ್ರರನ್ನು ಕೊಲ್ಲಲಾಗಿದೆ ಎಂದು ಇಸ್ರೇಲಿ ಸುದ್ದಿ ವಾಹಿನಿ ವರದಿ ಮಾಡಿದೆ.

ಮತ್ತಷ್ಟು ಓದಿ: 7 ಗಂಟೆಗಳ ಕಾಲ ಶವಗಳ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡೆ: ಹಮಾಸ್ ಉಗ್ರರ ಭಯಾನಕ ದಾಳಿಯ ಬಗ್ಗೆ ಮಹಿಳೆಯ ಮಾತು

ಗಾಜಾದ ಮೇಲೆ ಇಸ್ರೇಲ್ ದಾಳಿ ಶುರು ಮಾಡಿದ ನಂತರ ಯಾರೂ ಗಡಿಯನ್ನು ದಾಟಿಲ್ಲ. ಯಾವುದೇ ಒಳನುಸುಳುವಿಕೆ ಇಲ್ಲ, ಆದರೆ ಒಳನುಸುಳುವಿಕೆ ಇನ್ನೂ ಸಂಭವಿಸಬಹುದು. ಗಡಿ ಸುತ್ತಲಿನ ಎಲ್ಲ ಸಮುದಾಯಗಳ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸೇನೆ ಬಹುತೇಕ ಪೂರ್ಣಗೊಳಿಸಿದೆ ಎಂದು ಹೇಳಿದರು.

ಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಬೆದರಿಕೆ ಹಾಕಿತ್ತು.

ಯಾವುದೇ ಎಚ್ಚರಿಕೆ ನೀಡದೇ ನಮ್ಮ ಜನರನ್ನು ಗುರಿಯಾಸಿಕೊಂಡು ನಡೆಸುವ ದಾಳಿಗೆ ಪ್ರತಿಯಾಗಿ, ಒತ್ತೆಯಾಳುಗಳಾಗಿರುವ ಇಸ್ರೇಲ್​ ಒಬ್ಬೊಬ್ಬ ನಾಗರಿಕರನ್ನು ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಹಾಕಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ