ಇದು ಇಡೀ ಪ್ರಪಂಚದಲ್ಲೇ ಅತ್ಯಂತ ದುಬಾರಿ mask..ಬೆಲೆ ಎಷ್ಟು ಗೊತ್ತಾ?

ಇಸ್ರೇಲ್​ನ ಪ್ರತಿಷ್ಠಿತ ಒಡವೆ ತಯಾರಿಕಾ ಕಂಪನಿ ಇವೆಲ್​ (Yvel) 1.5 ಮಿಲಿಯನ್ ಡಾಲರ್​ (11 ಕೋಟಿ ರೂ.) ಮೌಲ್ಯದ ಜಗತ್ತಿನ ಅತ್ಯಂತ ದುಬಾರಿ COVID-19 ಫೇಸ್ ಮಾಸ್ಕ್​ನ ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದೆ. 18 ಕ್ಯಾರಟ್​ ಬಿಳಿ ಬಂಗಾರದಿಂದ ತಯಾರಿಸಲಾದ ಈ ವಜ್ರ ಖಚಿತ ಫೇಸ್ ಮಾಸ್ಕ್​ನಲ್ಲಿ 3,600 ಬಿಳಿ ಮತ್ತು ಕಪ್ಪು ವಜ್ರಗಳನ್ನು ಬಳಸಲಾಗಿದೆ. ಇದಲ್ಲದೆ, ಈ ಮಾಸ್ಕ್​ನಲ್ಲಿ ಉನ್ನತ ದರ್ಜೆಯ N99 ಫಿಲ್ಟರ್‌ಗಳನ್ನೂ ಸಹ ಅಳವಡಿಸಬಹುದಾಗಿದೆ ಎಂದು ಇದರ ವಿನ್ಯಾಸಕ ಮತ್ತು ಕಂಪನಿ ಮಾಲೀಕ […]

ಇದು ಇಡೀ ಪ್ರಪಂಚದಲ್ಲೇ ಅತ್ಯಂತ ದುಬಾರಿ mask..ಬೆಲೆ ಎಷ್ಟು ಗೊತ್ತಾ?
ಸಾಧು ಶ್ರೀನಾಥ್​

Updated on: Aug 12, 2020 | 4:59 PM

ಇಸ್ರೇಲ್​ನ ಪ್ರತಿಷ್ಠಿತ ಒಡವೆ ತಯಾರಿಕಾ ಕಂಪನಿ ಇವೆಲ್​ (Yvel) 1.5 ಮಿಲಿಯನ್ ಡಾಲರ್​ (11 ಕೋಟಿ ರೂ.) ಮೌಲ್ಯದ ಜಗತ್ತಿನ ಅತ್ಯಂತ ದುಬಾರಿ COVID-19 ಫೇಸ್ ಮಾಸ್ಕ್​ನ ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದೆ.

18 ಕ್ಯಾರಟ್​ ಬಿಳಿ ಬಂಗಾರದಿಂದ ತಯಾರಿಸಲಾದ ಈ ವಜ್ರ ಖಚಿತ ಫೇಸ್ ಮಾಸ್ಕ್​ನಲ್ಲಿ 3,600 ಬಿಳಿ ಮತ್ತು ಕಪ್ಪು ವಜ್ರಗಳನ್ನು ಬಳಸಲಾಗಿದೆ. ಇದಲ್ಲದೆ, ಈ ಮಾಸ್ಕ್​ನಲ್ಲಿ ಉನ್ನತ ದರ್ಜೆಯ N99 ಫಿಲ್ಟರ್‌ಗಳನ್ನೂ ಸಹ ಅಳವಡಿಸಬಹುದಾಗಿದೆ ಎಂದು ಇದರ ವಿನ್ಯಾಸಕ ಮತ್ತು ಕಂಪನಿ ಮಾಲೀಕ ಐಸಾಕ್ ಲೆವಿ ಹೇಳಿದ್ದಾರೆ.

ಅಂದ ಹಾಗೆ, ಈ ಮಾಸ್ಕ್​ನ ಅಮೇರಿಕಾದಲ್ಲಿ ನೆಲೆಸಿರುವ ಚೀನಾ ಮೂಲದ ಉದ್ಯಮಿಯೊಬ್ಬರು ತಯಾರಿಸಲು ಆರ್ಡರ್​ ಮಾಡಿದ್ದಾರಂತೆ. ಇದರ ತೂಕ 270 ಗ್ರಾಂ ಇದ್ದು 2020ರ ಅಂತ್ಯದ ವೇಳೆಗೆ ಇದನ್ನು  ಪೂರ್ಣಗೊಳಿಸಲಾಗುವುದು ಎಂದು ಐಸಾಕ್ ಲೆವಿ ತಿಳಿಸಿದ್ದಾರೆ.

Published On - 4:52 pm, Wed, 12 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us