ಇಟಲಿಯಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2020 | 7:46 PM

ಇಟಲಿ ರಾಜಧಾನಿ ರೋಮ್​ನ ಸ್ಪಲ್ಲಾಂಜಾನಿ ಆಸ್ಪತ್ರೆಯ ಮೂವರು ಆರೋಗ್ಯ ಕಾರ್ಯಕರ್ತರಿಗೆ ಫೈಜರ್ ಮತ್ತು ಬಯೋಎನ್​ಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ನೀಡಲಾಗಿದೆ ಎಂದು ಸಾಂಕ್ರಾಮಿಕ ರೋಗದ ಆಯುಕ್ತ ಡೊಮೆನಿಕೊ ಅರ್ಕುರಿ ಹೇಳಿದ್ದಾರೆ.

ಇಟಲಿಯಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭ
ಸಾಂದರ್ಭಿಕ ಚಿತ್ರ
Follow us on

ರೋಮ್​: ಇಟಲಿಯಲ್ಲಿ ಕೊರೊನಾ ರೋಗಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಇಂದಿನಿಂದ (ಡಿ.27) ಆರಂಭಗೊಂಡಿದೆ. ಆರಂಭದ ದಿನಗಳಲ್ಲಿ ಇಟಲಿಯಲ್ಲಿ ದೊಡ್ಡ ಪ್ರಮಾಣದ ಕೊರೊನಾ ಅಲೆ ಕಾಣಿಸಿಕೊಂಡಿತ್ತು. ಇದರಿಂದ ಸಾಕಷ್ಟು ಮಂದಿ ಮೃತಪಟ್ಟಿದ್ದರು. ಈಗ ಇಟಲಿ ಸರ್ಕಾರ ಕೊರೊನಾ ಲಸಿಕೆ ನೀಡಲು ಆರಂಭಿಸಿದ್ದು, ಅಲ್ಲಿನ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಇಟಲಿ ರಾಜಧಾನಿ ರೋಮ್​ನ ಸ್ಪಲ್ಲಾಂಜಾನಿ ಆಸ್ಪತ್ರೆಯ ಮೂವರು ಆರೋಗ್ಯ ಕಾರ್ಯಕರ್ತರಿಗೆ ಫೈಜರ್ ಮತ್ತು ಬಯೋಎನ್​ಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ನೀಡಲಾಗಿದೆ ಎಂದು ಸಾಂಕ್ರಾಮಿಕ ರೋಗದ ಆಯುಕ್ತ ಡೊಮೆನಿಕೊ ಅರ್ಕುರಿ ಹೇಳಿದ್ದಾರೆ.

ಕೊರೊನಾ ಲಸಿಕೆ ಪರಿಣಾಮಕಾರಿಯಾಗಿದೆ. ಇಟಲಿಗರ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ಇದು ಕೊರೊನಾ ಅಂತ್ಯದ ಆರಂಭವಾಗಿದೆ ಎಂದು ಇಟಲಿ ವೈದ್ಯರು ಹೇಳಿದ್ದಾರೆ. ಸಾಕಷ್ಟು ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಭಾರತದಲ್ಲೂ ಶೀಘ್ರವೇ ಕೊರೊನಾ ಔಷಧ ಸಿಗುವ ನಿರೀಕ್ಷೆ ಇದೆ.

ವಿಶ್ವದಲ್ಲಿ 20 ಲಕ್ಷ ಕೊರೊನಾ ಪ್ರಕರಣ ದಾಟಿದ ಎಂಟನೇ ರಾಷ್ಟ್ರ ಎನ್ನುವ ಕುಖ್ಯಾತಿಗೆ ಇಟಲಿ ಪಾತ್ರವಾಗಿದೆ. ಇಟಲಿಯಲ್ಲಿ ಈವರೆಗೆ ಕೊರೊನಾದಿಂದ 70,999 ಜನರು ಮೃತಪಟ್ಟಿದ್ದಾರೆ. ಕೊರೊನಾಗೆ ಅತಿ ಹೆಚ್ಚು ಬಲಿಯಾದ ರಾಷ್ಟ್ರಗಳ ಪೈಕಿ ಇಟಲಿ ಐದನೇ ಸ್ಥಾನದಲ್ಲಿದೆ.

ಇನ್ನು, ಫೈಜರ್​ ಸಂಸ್ಥೆಯ ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರುವ ಬಗ್ಗೆಯೂ ವರದಿಯಾಗಿದೆ. ಫೈಜರ್ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಊಹೆಗೂ ಮೀರಿದ ಅಡ್ಡಪರಿಣಾಮ ಬೀರುತ್ತಿದೆ ಎಂದು ಅಮೆರಿಕಾದ ಆಪರೇಷನ್​ ವಾರ್ಪ್​ ಸ್ಪೀಡ್​ನ (Operation Warp Speed) ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ. ಮಾನ್ಸೆಫ್ ಸ್ಲಾಯ್ ಆತಂಕ ವ್ಯಕ್ತಪಡಿಸಿದ್ದರು.

ಊಹೆಗೂ ಮೀರಿ ಅಡ್ಡಪರಿಣಾಮ ಬೀರುತ್ತಿದೆ ಫೈಜರ್ ಕೊರೊನಾ ಲಸಿಕೆ – ಡಾ. ಮಾನ್ಸೆಫ್ ಸ್ಲಾಯ್